ಬೇಲೂರು: ತಾಲ್ಲೂಕಿನ ಇಬ್ಬೀಡು ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಸೋಮವಾರ ನಡೆದ ವಾರ್ಷಿಕ ಮಹಾಸಭೆಯಲ್ಲಿ ಷೇರುದಾರರು ಹಾಗೂ ಆಡಳಿತ ಮಂಡಳಿ ಸದಸ್ಯರು ನಡುವೆ ಗದ್ದಲ ನಡೆದು ಸಭೆಯನ್ನು ರದ್ದುಗೊಳಿಸಲಾಯಿತು.
ಎಚ್. ಆರ್. ಚಂದ್ರೇಗೌಡ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆದಿದ್ದು, ‘ಪ್ರಸಕ್ತ ಸಾಲಿನ ಲೆಕ್ಕಪರಿಶೋಧನೆ ಹಾಗೂ ಜಮಾ ಖರ್ಚಿನ ವಾರ್ಷಿಕ ವರದಿಯ ಪಟ್ಟಿಯಲ್ಲಿ ಹಲವು ಅಕ್ರಮಗಳು ಕಂಡು ಬರುತ್ತಿದ್ದು, ಷೇರುದಾರರಿಗೆ ವಂಚನೆ ಮಾಡಲಾಗುತ್ತಿದೆ. ಆದ್ದರಿಂದ ಆಡಳಿತ ಮಂಡಳಿ ಸದಸ್ಯರು ರಾಜೀನಾಮೆ ನೀಡಿ ಸಭೆಯನ್ನು ರದ್ದುಗೊಳಿಸಬೇಕು ಎಂದು ಷೇರುದಾರರಾದ ಸಚಿನ್, ಮಧು, ಮಲ್ಲಿಕಾರ್ಜುನ, ದೇವಿಹಳ್ಳಿ ದೇವರಾಜು, ಜಯಣ್ಣ ಪಟ್ಟು ಹಿಡಿದರು. ಇದರಿಂದ ಸಭೆಯನ್ನು ರದ್ದುಪಡಿಸಿ ಮುಂದೂಡಲಾಯಿತು
ಎಚ್‌ಡಿಸಿಸಿ ಬ್ಯಾಂಕ್ ನಿರ್ದೇಶಕ ಎಂ.ಎ. ನಾಗರಾಜು ಮಾತನಾಡಿ, ‘ತಾಲ್ಲೂಕಿನ ಸಹಕಾರ ಸಂಘಗಳ ಪೈಕಿ ಉತ್ತಮ ವ್ಯವಹಾರಕ್ಕೆ ಈ ಸಂಘಕ್ಕೆ ಕಳೆದ ವರ್ಷ ಎಚ್‌ಡಿಸಿಸಿ ಬ್ಯಾಂಕ್ ₹9 .83 ಕೋಟಿ ಸಾಲ ನೀಡಿತ್ತು. ಇದರಿಂದ 900 ಜನರಿಗೆ ಅನುಕೂಲವಾಗಿದೆ. ಜಮಾ ಖರ್ಚಿನ ವಾರ್ಷಿಕ ವರದಿಯಲ್ಲಿ ಲೋಪವಾಗಿದೆ ಎಂಬ ಷೇರುದಾರರ ಆರೋಪಕ್ಕೆ ನ್ಯಾಯ ಒದಗಿಸಲಾಗುವುದು’ ಎಂದರು
ಸಂಘದ ಅಧ್ಯಕ್ಷ ಎಚ್. ಆರ್. ಚಂದ್ರೇಗೌಡ ಮಾತನಾಡಿ, ‘ಸಂಘವು ಸದಾಕಾಲ ರೈತರು ಹಾಗೂ ಷೇರುದಾರರ ಬೆನ್ನೆಲುಬಾಗಿ ಕಾರ್ಯ ನಿರ್ವಹಿಸುತ್ತಿದ್ದು, ಜಮಾ ಖರ್ಚಿನ ವರದಿಯ ಆರೋಪ ಸಂಬಂಧ ಇಂದಿನ ಸಭೆಯನ್ನು ರದ್ದುಪಡಿಸಿದ್ದು, ಎಲ್ಲಿ ವ್ಯತ್ಯಾಸವಾಗಿದೆ ಎಂಬುದನ್ನು ಸರಿಪಡಿಸಿ ಷೇರುದಾರರಿಗೆ ನ್ಯಾಯ ಒದಗಿಸಲಾಗುವುದು’ ಎಂದರು
ಉಪಾಧ್ಯಕ್ಷೆ ಚನ್ನಮ್ಮ, ನಿರ್ದೇಶಕರಾದ ಐ.ಎಲ್. ರಮೇಶ್, ಬಿ.ಎಂ. ರವಿಕುಮಾರ್, ಐ.ಜಿ. ಲೋಕೇಶ್, ಶಿವರಾಮಯ್ಯ, ಮಧು, ಅಣ್ಣಪ್ಪ, ಐ.ಜಿ. ತಾರೇಶ್, ಐ.ಎನ್. ನವೀನ್, ಪ್ರಸಾದ್, ನೀಲಮ್ಮ, ಎಚ್‌ಡಿಸಿಸಿ ಬ್ಯಾಂಕ್ ಮೇಲ್ವಿಚಾರಕ ಎಂ. ಜಿ. ದಿನೇಶ್ ಕುಮಾರ್, ಕಾರ್ಯದರ್ಶಿ ಪ್ರೇಮ್ ಕುಮಾರ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.