ADVERTISEMENT

ಆರ್ಥಿಕ ಪ್ಯಾಕೇಜ್ ಘೋಷಿಸಿ: ಮೋಹನ್ ದಾಸ್‌ ಪೈ

ಚಿತ್ರ ಮಂದಿರ ಕಾರ್ಮಿಕರಿಗೆ ಫುಡ್‌ ಕಿಟ್‌ ವಿತರಣೆ

​ಪ್ರಜಾವಾಣಿ ವಾರ್ತೆ
Published 7 ಜುಲೈ 2021, 13:14 IST
Last Updated 7 ಜುಲೈ 2021, 13:14 IST
ಹಾಸನದ ಗುರು ಚಿತ್ರಮಂದಿರಲ್ಲಿ ಧೀರಜ್‌ ಎಂಟರ್‌ ಪ್ರೈಸಸ್‌, ಎಸ್‌.ಪಿ. ಗ್ರೂಪ್‌ ಸಹಯೋಗದಲ್ಲಿ ಚಿತ್ರ ಮಂದಿರಗಳಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಆಹಾರ ಪದಾರ್ಥಗಳ ಕಿಟ್‌ ವಿತರಿಸಲಾಯಿತು
ಹಾಸನದ ಗುರು ಚಿತ್ರಮಂದಿರಲ್ಲಿ ಧೀರಜ್‌ ಎಂಟರ್‌ ಪ್ರೈಸಸ್‌, ಎಸ್‌.ಪಿ. ಗ್ರೂಪ್‌ ಸಹಯೋಗದಲ್ಲಿ ಚಿತ್ರ ಮಂದಿರಗಳಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಆಹಾರ ಪದಾರ್ಥಗಳ ಕಿಟ್‌ ವಿತರಿಸಲಾಯಿತು   

ಹಾಸನ: ಕೋವಿಡ್‌ ಲಾಕ್‌ಡೌನ್‌ ಕಾರಣದಿಂದ ಚಲನಚಿತ್ರ ಮಂದಿರದಲ್ಲಿ ಕಾರ್ಯನಿರ್ವಹಿಸುವ ಅಸಂಘಟಿತ ಕಾರ್ಮಿಕರಿಗೂಸರ್ಕಾರ ವಿಶೇಷ ಪ್ಯಾಕೇಜ್‌ ಘೋಷಣೆ ಮಾಡಬೇಕು ಎಂದು ಚಿತ್ರ ನಿರ್ಮಾಪಕ ಧೀರಜ್‌ ಎಂಟರ್‌ ಪ್ರೈಸಸ್‌ ಮಾಲೀಕಮೋಹನ್ ದಾಸ್ ಪೈ ಒತ್ತಾಯಿಸಿದರು.

ನಗರದ ಗುರು ಚಿತ್ರಮಂದಿರಲ್ಲಿ ಧೀರಜ್‌ ಎಂಟರ್‌ ಪ್ರೈಸಸ್‌, ಎಸ್‌.ಪಿ.ಗ್ರೂಪ್‌ ಸಹಯೋಗದಲ್ಲಿ ಬುಧವಾರ ಚಿತ್ರ ಮಂದಿರಗಳಲ್ಲಿಕಾರ್ಯ ನಿರ್ವಹಿಸುವ ಕಾರ್ಮಿಕರಿಗೆ ಆಹಾರ ಪದಾರ್ಥಗಳ ಕಿಟ್‌ ವಿತರಿಸಿ ಮಾತನಾಡಿದರು.

ಕೋವಿಡ್‌ ಮೊದಲನೇ ಅಲೆ ಹಾಗೂ ಎರಡನೇ ಅಲೆ ನಿಯಂತ್ರಣಕ್ಕೆ ಜಾರಿ ಮಾಡಿರುವ ಲಾಕ್‌ಡೌನ್‌ನಿಂದ ಚಿತ್ರ ಮಂದಿರಗಳಲ್ಲಿಕರ್ತವ್ಯ ನಿರ್ವಹಿಸುವ ಕಾರ್ಮಿಕರಿಗೆ ಆರ್ಥಿಕ ಸಂಕಷ್ಟ ಎದುರಾಗಿದೆ. ಬಹುತೇಕ ಕಾರ್ಮಿಕರೆಲ್ಲರೂ ಬಡವರೇ ಆಗಿದ್ದು, ಜೀವನಸಾಗಿಸುವುದು ಕಷ್ಟವಾಗಿದೆ ಎಂದರು.

ADVERTISEMENT

ಲಾಕ್‌ಡೌನ್‌ ಸಡಿಲಿಕೆ ಮಾಡಿ ಎಲ್ಲಾ ರೀತಿಯ ವ್ಯಾಪಾರಗಳಿಗೆ ಅವಕಾಶ ನೀಡಿದರೂ ಒಂದೇ ಕಡೆ ಹೆಚ್ಚು ಜನ ಸೇರುತ್ತಾರೆಎಂಬ ಕಾರಣಕ್ಕೆ ಚಿತ್ರ ಮಂದಿರಗಳಿಗೆ ಅನುಮತಿ ನೀಡಿಲ್ಲ. ರಾಜ್ಯ ಸರ್ಕಾರ ಅಸಂಘಟಿತ ವಲಯದ ಕಾರ್ಮಿಕರಿಗೆ ಆರ್ಥಿಕಪ್ಯಾಕೇಜ್‌ ಘೋಷಣೆ ಮಾಡಿದೆ. ಆದರೆ ಚಿತ್ರ ಮಂದಿರಗಳಲ್ಲಿ ಕೆಲಸ ಮಾಡುವ ಕಾರ್ಮಿಕರನ್ನು ಪರಿಗಣಿಸಿಲ್ಲ ಎಂದು ಬೇಸರವ್ಯಕ್ತಪಡಿಸಿದರು.

ಧೀರಜ್‌ ಪೈ ಮಾತನಾಡಿ, ಚಿತ್ರ ಮಂದಿರಗಳಲ್ಲಿ ಕೆಲಸ ಮಾಡುವ ಕಾರ್ಮಿಕರು ಸಂಕಷ್ಟದಲ್ಲಿರುವ ಕಾರಣ ಸಂಸ್ಥೆ ವತಿಯಿಂದರಾಜ್ಯದ ಎಲ್ಲಾ ಜಿಲ್ಲೆಗಳಿಗೂ ಸಂಚರಿಸಿ ಆಹಾರ ಕಿಟ್‌ಗಳನ್ನು ನೇರವಾಗಿ ಕಾರ್ಮಿಕರಿಗೆ ನೀಡಲಾಗುತ್ತಿದೆ. ಈಗಾಗಲೇ ಉತ್ತರಕರ್ನಾಟಕ ಭಾಗದ ಬಹುತೇಕ ಜಿಲ್ಲೆಗಳಲ್ಲಿ ಫುಡ್‌ ಕಿಟ್‌ ವಿತರಿಸಿದ್ದು, ಗುರುವಾರಶಿವಮೊಗ್ಗದಲ್ಲಿ ವಿತರಣೆ ಮಾಡಲಾಗುವುದುಎಂದು ತಿಳಿಸಿದರು.

ಜಿಲ್ಲೆಯ ವಿವಿಧ ತಾಲ್ಲೂಕುಗಳ ನೂರಕ್ಕೂ ಹೆಚ್ಚು ಚಿತ್ರಮಂದಿರ ಕಾರ್ಮಿಕರಿಗೆ ಆಹಾರ ಕಿಟ್‌ ವಿತರಿಸಲಾಯಿತು.

ಚಿತ್ರ ಮಂದಿರ ಕೆಲಸಗಾರರ ಸಂಘದ ಜಗದೀಶ್‌, ಮಂಜುನಾಥ್‌, ಸ್ವಾಮಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.