ADVERTISEMENT

ಅನರ್ಹ ಶಾಸಕರ ತಿಥಿ ಆಚರಿಸಿದ ಕಾರ್ಯಕರ್ತರು

​ಪ್ರಜಾವಾಣಿ ವಾರ್ತೆ
Published 29 ಜುಲೈ 2019, 12:50 IST
Last Updated 29 ಜುಲೈ 2019, 12:50 IST
ಹಾಸನದಲ್ಲಿ ಕಾಂಗ್ರೆಸ್‌ ಕಾರ್ಯಕರ್ತರು ಅನರ್ಹ ಶಾಸಕರ ತಿಥಿ ಆಚರಿಸಿದರು.
ಹಾಸನದಲ್ಲಿ ಕಾಂಗ್ರೆಸ್‌ ಕಾರ್ಯಕರ್ತರು ಅನರ್ಹ ಶಾಸಕರ ತಿಥಿ ಆಚರಿಸಿದರು.   

ಹಾಸನ: ನಗರದ ಜಿಲ್ಲಾ ಕಾಂಗ್ರೆಸ್ ಭವನದ ಆವರಣದಲ್ಲಿ ಕಾರ್ಯಕರ್ತರು ಅನರ್ಹಗೊಂಡಿರುವ 14 ಕಾಂಗ್ರೆಸ್‌ ಶಾಸಕರ ತಿಥಿ ಕಾರ್ಯ ಮಾಡಿದರು.

ಅನರ್ಹಗೊಂಡಿರುವ ಶಾಸಕರಿಗೆ ಧಿಕ್ಕಾರ ಕೂಗಿದ ಕಾರ್ಯಕರ್ತರು.‘ಕಾಂಗ್ರೆಸ್‌ ಪಕ್ಷಕ್ಕೆ ದ್ರೋಹ ಎಸಗಿ ಹೋದವರು ನಮ್ಮ ಪಾಲಿಗೆ ಈಗ ಸತ್ತಿದ್ದಾರೆ. ಅದಕ್ಕಾಗಿ ಅನರ್ಹಗೊಂಡವರ ತಿಥಿ ಆಚರಿಸುತ್ತಿದ್ದೇವೆ’ ಎಂದು ಕಾರ್ಯಕರ್ತರು ತಿಥಿ ವಡೆ, ಹಾರ ಪ್ರದರ್ಶಿಸಿ ಶ್ರದ್ಧಾಂಜಲಿ ಸಲ್ಲಿಸಿದರು.

‘ಮತ್ತೆಂದೂ ಅವರಿಗೆ ಪಕ್ಷದಲ್ಲಿ ಸ್ಥಾನ ನೀಡಬಾರದು’ ಎಂದು ಹೈಕಮಾಂಡ್‌ಗೆ ಮನವಿ ಮಾಡಿದರು.

ADVERTISEMENT

‘ಹಣ, ಅಧಿಕಾರದ ಆಸೆಗಾಗಿ ಬಿಜೆಪಿ ಜತೆ ಕೈ ಜೋಡಿಸಿರುವ ಶಾಸಕರನ್ನು ಸ್ಪೀಕರ್‌ ಅನರ್ಹಗೊಳಿಸಿರುವುದು ಸರಿಯಾದ ಕ್ರಮ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಮುಖಂಡರಾದ ಕುಮಾರಸ್ವಾಮಿ, ರಂಜಿತ್‌, ರಘು, ಆರೀಫ್‌, ಚಂದ್ರಶೇಖರ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.