ಹಾಸನ: ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ಯುವತಿಯನ್ನು ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಅವರು ತಮ್ಮ ವಾಹನದಲ್ಲಿ ಕರೆತಂದು ಅಸ್ಪತ್ರೆಗೆ ದಾಖಲಿಸಿ, ಮಾನವೀಯತೆ ಮೆರೆದಿದ್ದಾರೆ.
ಚಿಕ್ಕಮಗಳೂರಿನಿಂದ ಬೆಂಗಳೂರಿಗೆ ಸಚಿವರು ಹೋಗುವಾಗ ಹಾಸನ ಹೊರವಲಯದ ಉದ್ದೂರು ಹರಳಳ್ಳಿ ಬಳಿ ದ್ವಿಚಕ್ರ ವಾಹನದಿಂದ ಬಿದ್ದು, ಪ್ರಜ್ಞಾಹೀನರಾಗಿದ್ದರು. ತಕ್ಷಣ ಅವರನ್ನು ತಮ್ಮ ವಾಹನದಲ್ಲಿಯೇ ಕರೆತಂದು ಜಿಲ್ಲಾಸ್ಪತ್ರೆಯ ನಾನ್ ಕೋವಿಡ್ ವಿಭಾಗಕ್ಕೆ ದಾಖಲಿಸಿದರು. ಕೆಲ ಹೊತ್ತು ಅಲ್ಲೇ ಇದ್ದು, ಯುವತಿಯ ಆರೋಗ್ಯ ವಿಚಾರಿಸಿ, ಬೆಂಗಳೂರಿಗೆ ತೆರಳಿದರು .
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.