ADVERTISEMENT

ಅರಕಲಗೂಡು | ಜ್ಯೂಯಲರಿ ಶಾಪ್‌ಗೆ ಕನ್ನಕೊರೆಯುವ ವೇಳೆ ಬೆಂಕಿ: ಕಾಲ್ಕಿತ್ತ ಕಳ್ಳರು

​ಪ್ರಜಾವಾಣಿ ವಾರ್ತೆ
Published 13 ಜುಲೈ 2025, 2:00 IST
Last Updated 13 ಜುಲೈ 2025, 2:00 IST
ಅರಕಲಗೂಡು ಪಟ್ಟಣದ ಪೇಟೆ ಮುಖ್ಯ ರಸ್ತೆಯಲ್ಲಿರುವ ಮಾತಾಜಿ ಜ್ಯೂಯಲರಿ ಶಾಪ್ ಗೆ ಕಳ್ಳರು ಕನ್ನಕೊರೆದಿರುವುದನ್ನು ಪೊಲೀಸರು ಪರಿಶೀಲಿಸಿದರು.
ಅರಕಲಗೂಡು ಪಟ್ಟಣದ ಪೇಟೆ ಮುಖ್ಯ ರಸ್ತೆಯಲ್ಲಿರುವ ಮಾತಾಜಿ ಜ್ಯೂಯಲರಿ ಶಾಪ್ ಗೆ ಕಳ್ಳರು ಕನ್ನಕೊರೆದಿರುವುದನ್ನು ಪೊಲೀಸರು ಪರಿಶೀಲಿಸಿದರು.   

ಅರಕಲಗೂಡು: ಪಟ್ಟಣದ ಪೇಟೆ ಮುಖ್ಯರಸ್ತೆಯಲ್ಲಿರುವ ಜ್ಯೂಯಲರಿ ಶಾಪ್ ಗೆ ಕನ್ನಕೊರೆದಿರುವ ಕಳ್ಳರು ಕಳವು ಮಾಡಲು ವಿಫಲಯತ್ನ ನಡೆಸಿರುವ ಘಟನೆ ಶುಕ್ರವಾರ ರಾತ್ರಿ ಸಂಭವಿಸಿದೆ.

ಪಪಂ ವಾಣಿಜ್ಯ ಮಳಿಗೆಯಲ್ಲಿರುವ ಮಾತಾಜಿ ಜ್ಯೂಯಲರಿ ಶಾಪ್ ನ ಹಿಂಬದಿಯ ಗೋಡೆಗೆ ಕನ್ನಕೊರೆದಿರುವ ಕಳ್ಳರು ಗ್ಲಾಸ್ ಕಟರ್ ಬಳಸಿ ಕತ್ತರಿಸುವ ವೇಳೆ ಪ್ಲೇವುಡ್ ಗೆ ಬೆಂಕಿ ಹತ್ತಿಕೊಂಡಿದೆ. ಬೆಂಕಿ ಕಂಡು ಬೆದರಿದ ಕಳ್ಳರು ಪರಾರಿಯಾಗಿದ್ದಾರೆ. ಅಂಗಡಿಯೊಳಗೆ ವ್ಯಾಪಿಸಿರುವ ಬೆಂಕಿಗೆ ಎಲೆಕ್ಟ್ರಾನಿಕ್ಸ್ , ಎಲೆಕ್ಟ್ರಿಕ್ ಮತ್ತು ಮರದ ವಸ್ತುಗಳು ಸುಟ್ಟು ಹಾನಿಸಂಭವಿಸಿದೆ. ಮುಂಜಾನೆ ಅಂಗಡಿ ಒಳಗಿಂದ ಹೊಗೆ ಬರುತ್ತಿರುವುದನ್ನು ಗಮನಿಸಿದ ಸಾರ್ವಜನಿಕರು ಮಾಲೀಕರಿಗೆ ಸುದ್ದಿ ಮುಟ್ಟಿಸಿದ್ದಾರೆ. ಮಾಲೀಕರು ಬಂದು ಬೆಂಕಿ ನಂದಿಸಿ ಪರಿಶೀಲಿಸಿದ ವೇಳೆ ಕಳವು ಯತ್ನ ನಡೆದಿರುವುದು ಬೆಳಕಿಗೆ ಬಂದಿದೆ. ಹೊಳೆನರಸೀಪುರ ಡಿವೈಎಸ್ ಪಿ ಶಾಲು, ಸಿಪಿಐ ವಸಂತ್ ಕುಮಾರ್, ಪಿಎಸ್ ಐ ಸಿ.ಆರ್. ಕಾವ್ಯ ಸ್ಥಳಕ್ಕೆ ಭೇಟಿ ನೀಡಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT