ಅರಸೀಕೆರೆ: ತಾಲ್ಲೂಕಿನ ರಾಂಪುರ ಗ್ರಾಮದಲ್ಲಿ ಕರುಗಳ ಮೇಲೆ ದಾಳಿ ಮಾಡಿದ್ದ ಚಿರತೆ ಬುಧವಾರ ಬೋನಿಗೆ ಬಿದ್ದಿದೆ.
ಗ್ರಾಮದ ನಿರ್ವಾಣಪ್ಪ ಎಂಬುವವರ ಗೋಶಾಲೆಯಲ್ಲಿ ಎರಡು ಕರುಗಳನ್ನು ಕೊಂದು ಹಾಕಿದ್ದ ಚಿರತೆಯನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆಯಿಂದ ಬೋನು ಇಡಲಾಗಿತ್ತು. ತಾಲ್ಲೂಕು ಅರಣ್ಯ ಅಧಿಕಾರಿ ದಿಲೀಪ್ ಮಾರ್ಗದರ್ಶನದಂತೆ ಅದೇ ಸ್ಥಳದಲ್ಲಿ ಬೋನು ಇರಿಸಲಾಗಿತ್ತು.
‘ಮತ್ತೆ ಜಾನುವಾರುಗಳ ಮೇಲೆ ದಾಳಿ ಮಾಡಲು ಬಂದಿದ್ದ ಚಿರತೆ ಸೆರೆ ಸಿಕ್ಕಿದೆ. ನಂತರ ಚಿರತೆಯನ್ನು ಅಭಿಯಾರಣ್ಯಕ್ಕೆ ಬಿಡಲಾಯಿತು’ ಎಂದು ದಿಲೀಪ್ ತಿಳಿಸಿದರು.
ರಾಂಪುರ ಕೆರೆ ಮತ್ತು ಹೊಳಲ ಕೆರೆಯ ಕಪ್ಪೆ ಕಟ್ಟೆ ಅಂಗಳಲ್ಲಿ ಇನ್ನೂ ಅನೇಕ ಚಿರತೆಗಳಿವೆ ಎಂದು ಸಾರ್ವಜನಿಕರು ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.