ಅರಸೀಕೆರೆ: ತಾಲ್ಲೂಕಿನ ಬೆಂಡೆಕೆರೆ ಸಮೀಪದ ಮೂಡಲಗಿರಿ ತಿಮ್ಮಪ್ಪ ದೇವಾಲಯದಲ್ಲಿ ಕಳ್ಳರು ಮಂಗಳವಾರ ರಾತ್ರಿ ದೇವರ ಹುಂಡಿಯಲ್ಲಿದ್ದ ಕಾಣಕೆ ಹಣವನ್ನು ಕದ್ದೊಯ್ದಿದ್ದಾರೆ.
ದೇವಾಲಯದ ಆವರಣದಲ್ಲಿದ್ದ ಅಡುಗೆ ಮನೆಯ ಬೀಗ ಒಡೆದು ಅಲ್ಲಿದ್ದ ಗ್ಯಾಸ್ ಸಿಲಿಂಡರ್ ಬಳಸಿಕೊಂಡು, ಗ್ಯಾಸ್ ಕಟರ್ ಮೂಲಕ ದೇವಾಲಯದ ಮುಖ್ಯದ್ವಾರವನ್ನು ತುಂಡರಿಸಿ ತೆರೆದು ಒಳಪ್ರವೇಶ ಮಾಡಿದ್ದಾರೆ. ಇದಕ್ಕೂ ಮುನ್ನ, ದೇವಾಲಯದ ಆವರಣದಲ್ಲಿ ಅಳವಡಿಸಿದ್ದ ಸಿಸಿಟಿವಿ ಕ್ಯಾಮೆರಾವನ್ನೂ ಮೇಲ್ಮುಖವಾಗಿ ತಿರುಗಿಸಿದ್ದಾರೆ. ಈ ಸಂಬಂಧ ದೇವಸ್ಥಾನದ ಅಭಿವೃದ್ಧಿ ಸಮಿತಿ ಪ್ರಕರಣ ದಾಖಲು ಮಾಡಿದೆ.
ಬಾಣಾವರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಹುಂಡಿಯಲ್ಲಿ ₹40–50ಸಾವಿರ ಹಣವಿರಬಹುದೆಂದು ದೇವಾಲಯ ಅಭಿವೃದ್ಧಿ ಸಮಿತಿ ಅಧ್ಯಕ್ಷ ನಾಗಭೂಷಣ್ ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.