ಪ್ರಜಾವಾಣಿ ವಾರ್ತೆ
ಅರಸೀಕೆರೆ: ತಾಲ್ಲೂಕಿನ ಕಣಕಟ್ಟೆ ಗ್ರಾಮದ ಗ್ರಾಮದೇವತೆ ಕರಿಯಮ್ಮ ದೇವಿ ಹಾಗೂ ಮೂರುಕಣ್ಣು ಮಾರಮ್ಮ ದೇವಿ ಜಾತ್ರೋತ್ಸವ ಈಚೆಗೆ ಅಪಾರ ಭಕ್ತರ ಸಮ್ಮುಖದಲ್ಲಿ ಸಂಭ್ರಮದಿಂದ ನೆರವೇರಿತು.
ಕಣಕಟ್ಟೆ ಕರಿಯಮ್ಮ ದೇವಿ ಹಾಗೂ ಮೂರುಕಣ್ಣು ಮಾರಮ್ಮ ದೇವಿ ಜಾತ್ರೆ ಪ್ರಯುಕ್ತ ಒಂದು ವಾರ ಪೂಜೆಗಳು ನಡೆದವು. ದೇವಿ ಮೂರ್ತಿಗಳಿಗೆ ವಿಶೇಷ ಹೂವಿನ ಅಲಂಕಾರ ಮಾಡಲಾಗಿತ್ತು. ಅಲಂಕೃತ ಆರೋಹಣ ಮಾಡಿ ರಥಕ್ಕೆ ಪೂಜೆ ಸಲ್ಲಿಸಿ ಈಡುಗಾಯಿ ಒಡೆದು ಉತ್ಸವಕ್ಕೆ ಚಾಲನೆ ನೀಡಲಾಯಿತು. ಭಕ್ತರು ಸುಡುಬಿಸಿಲು ಲೆಕ್ಕಿಸದೆ ರಥವನ್ನು ಎಳೆದರು.
ಗ್ರಾಮಸ್ಥರು, ಹೊರ ಪ್ರದೇಶದ ಭಕ್ತರು ದೇವರ ದರ್ಶನ ಪಡೆು, ಪೂಜೆ ಸಲ್ಲಿಸಿದರು.ಪಾನಕ, ಅನ್ನ ದಾಸೋಹ ಏರ್ಪಡಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.