ADVERTISEMENT

ಬಿಲ್‌ ಕೇಳಲು ಹೋದ ಸೆಸ್ಕ್ ಸಿಬ್ಬಂದಿ ಮೇಲೆ ಹಲ್ಲೆ

​ಪ್ರಜಾವಾಣಿ ವಾರ್ತೆ
Published 1 ಜೂನ್ 2023, 16:14 IST
Last Updated 1 ಜೂನ್ 2023, 16:14 IST

ಅರಕಲಗೂಡು: ವಿದ್ಯುತ್ ಬಿಲ್ ಬಿಲ್ ವಸೂಲಿಗೆ ಹೋಗಿದ್ದ ಸೆಸ್ಕ್‌ ಸಿಬ್ಬಂದಿ ಮೇಲೆ ತಂದೆ ಹಾಗೂ ಅಪ್ರಾಪ್ತ ವಯಸ್ಸಿನ ಪುತ್ರ ಹಲ್ಲೆ ಮಾಡಿದ್ದಾರೆ.

ಇಲ್ಲಿನ ಹಳೇ ಕೋರ್ಟ್ ರಸ್ತೆಯಲ್ಲಿರುವ ಕೋಳಿ ಅಂಗಡಿ ಮಾಲೀಕ ಸುರೇಶ್ ಎಂಬುವವರು ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡಿದ್ದು, ಬುಧವಾರ ಸೆಸ್ಕ್‌ ಸಿಬ್ಬಂದಿ ಸಂತೋಷ್ ಹಾಗೂ ಇತರರು ಸುರೇಶ್ ಅವರ ಮನೆ ಬಳಿ ತೆರಳಿ ಬಾಕಿಯಿರುವ ₹1,150 ಬಿಲ್ ಪಾವತಿಸುವಂತೆ ಕೇಳಿದ್ದಾರೆ.

‘ನಾವು ಹಣ ಕಟ್ಟುವುದಿಲ್ಲ. ಸರ್ಕಾರ ಉಚಿತ ವಿದ್ಯುತ್‌ ನೀಡುವುದಾಗಿ ಹೇಳಿದೆ. ಆದರೂ ಬಿಲ್ ಕೇಳಲು ಬಂದಿದ್ದೀಯಾ’ ಎಂದು ಸೆಸ್ಕ್‌ ಸಿಬ್ಬಂದಿಯನ್ನು ಸುರೇಶ್ ಹಾಗೂ ಅವರ ಪತ್ನಿ ನಿಂದಿಸಿ ಜಗಳ ತೆಗಿದಿದ್ದಾರೆ. ಇದು ಅತಿರೇಕಕ್ಕೆ ತಿರುಗಿದ್ದು, ಸುರೇಶ್ ಹಾಗೂ ಪುತ್ರ ಹಲ್ಲೆ ಮಾಡಿದ್ದಾರೆ’ ಎಂದು ಸಂತೋಷ್‌ ಆರೋಪಿಸಿದ್ದಾರೆ.

ADVERTISEMENT

ಸಂತೋಷ್ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಒಳಗಾಗಿದ್ದು, ಪೊಲೀಸರು ಹೇಳಿಕೆ ಪಡೆದಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.