ADVERTISEMENT

ಹೊಳೆನರಸೀಪುರ | ಬ್ಯಾಂಕ್‌ ನೌಕರರ ಮುಷ್ಕರ: ಗ್ರಾಹಕರ ಪರದಾಟ

​ಪ್ರಜಾವಾಣಿ ವಾರ್ತೆ
Published 28 ಜನವರಿ 2026, 7:06 IST
Last Updated 28 ಜನವರಿ 2026, 7:06 IST
ಹೊಳೆನರಸೀಪುರ ಪಟ್ಟಣದಲ್ಲಿ ಬ್ಯಾಂಕ್‍ಗಳು ಮುಚ್ಚಿದ್ದರಿಂದ ಗ್ರಾಹಕರು ಪರದಾಡಿದರು 
ಹೊಳೆನರಸೀಪುರ ಪಟ್ಟಣದಲ್ಲಿ ಬ್ಯಾಂಕ್‍ಗಳು ಮುಚ್ಚಿದ್ದರಿಂದ ಗ್ರಾಹಕರು ಪರದಾಡಿದರು    

ಹೊಳೆನರಸೀಪುರ: ಪಟ್ಟಣದ ಬಹುತೇಕ ಎಲ್ಲಾ ರಾಷ್ಟ್ರೀಕೃತ ಬ್ಯಾಂಕ್‍ಗಳು ಐದು ಕೆಲಸದ ದಿನಗಳನ್ನು ಜಾರಿಗೆ ತರಬೇಕೆಂದು ನಡೆಸುತ್ತಿರುವ ಮುಷ್ಕರಕ್ಕೆ ಬೆಂಬಲ ಸೂಚಿಸಿದ್ದರಿಂದ ಬ್ಯಾಂಕಿಗೆ ಬಂದ ಗ್ರಾಹಕರು ಪರದಾಡುವಂತಾಯಿತು.

ಶನಿವಾರದಿಂದ ಬ್ಯಾಂಕ್‍ಗಳು ತರೆಯದ ಕಾರಣ ವ್ಯಾಪಾರಸ್ಥರಿಗೆ ತೀವ್ರತೊಂದರೆಯಾಯಿತು ಎಂದು ವರ್ತಕ ಸಂಘದ ಅಧ್ಯಕ್ಷ ಕೆ. ಶ್ರೀಧರ್ ಹೇಳಿದರು. ಬ್ಯಾಂಕ್ ನೌಕರರ ಬೇಡಿಕೆಯನ್ನು ಈಡೇರಿಸಿ ಸಾರ್ವಜನಿಕರಿಗೆ ಉತ್ತಮ ಸೇವೆ ನೀಡಲು ಸಹಕರಿಸಿ ಎಂದರು.

ಮುಷ್ಕರದ ಕಾರಣ ವಾಸವಾಂಭ ಕೋ ಆಪರೇಟೀವ್ ಬ್ಯಾಂಕಿನಲ್ಲಿ ಹೆಚ್ಚು ಖಾತೆಗಳನ್ನು ತೆರೆದ ಗ್ರಾಹಕರು, ಒಡವೆಗಳ ಮೇಲೆ ಸಾಲ ಪಡೆದುಕೊಂಡರು. ನಿತ್ಯದ ವಹಿವಾಟಿಗಿಂತ ಹೆಚ್ಚಿನ ವಹಿವಾಟು ನಡೆದಿದೆ ಎಂದು ವಾಸವಾಂಭ ಕೋ ಆಪರೇಟೀವ್ ವ್ಯವಸ್ಥಾಪಕ ಸುನಿಲ್ ತಿಳಿಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.