ಬೇಲೂರು: ತಾಲ್ಲೂಕಿನ ಮದಘಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಿಳಗುಲಿ ಗ್ರಾಮದ ಕೆರೆಗೆ ಮಂಗಳವಾರ ರಾತ್ರಿ ಕಾರು ನಿಯಂತ್ರಣ ತಪ್ಪಿ ಕೆರೆಗೆ ಬಿದ್ದಿದ್ದು, ಕಾರಿನಲ್ಲಿದ್ದ ಚಂದನಹಳ್ಳಿಯ ಯುವತಿ ಶ್ವೇತಾ (29) ಮೃತಪಟ್ಟಿದ್ದಾರೆ.
ಶ್ವೇತಾ ಹಾಗೂ ಸ್ನೇಹಿತ ಕಾರು ಚಲಾಯಿಸುತ್ತಿದ್ದ ರವಿ ಇಬ್ಬರೂ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ, ಏರಿಯಿಂದ ಕೆಳಗೆ ಜಾರಿ ಕಾರು ಸಂಪೂರ್ಣವಾಗಿ ಕೆರೆಯಲ್ಲಿ ಮುಳುಗಿದೆ, ಕಾರಿನೊಳಗೆ ಸಿಲುಕಿಕೊಂಡ ಶ್ವೇತಾ ಹೊರಬರಲಾಗದೆ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದು, ಚಾಲಕ ರವಿ ಕಾರಿನ ಬಾಗಿಲು ತೆರೆದು ಹೊರಬಂದು ಈಜಿ ದಡ ಸೇರಿದ್ದಾರೆ.
ಅಪಘಾತದ ನಂತರ ಗ್ರಾಮಸ್ಥರು ಶೋಧ ಕಾರ್ಯಕ್ಕೆ ನೆರವಾದರು. ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಶವವನ್ನು ಕೆರೆಯಿಂದ ಹೊರತೆಗೆದರು.
ಶ್ವೇತಾ
ಕೆರೆಗೆ ತಡೆಗೊಡೆ ಇಲ್ಲದಿರುವುದರಿಂದ ಈ ದುರ್ಘಟನೆ ನಡೆದಿದ್ದು, ತಕ್ಷಣ ತಡೆಗೊಡೆ ನಿರ್ಮಿಸಲು ಅಧಿಕಾರಿಗಳು, ಜನಪ್ರತಿನಿಧಿಗಳು ಮುಂದಾಗಬೇಕು ಎಂದು ಒತ್ತಾಯಿಸಿ ಸುತ್ತಮುತ್ತಲ ಗ್ರಾಮಸ್ಥರು ಬಸ್ ತಡೆದು ಪ್ರತಿಭಟಿಸಿದರು.
ಅರೇಹಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ಪ್ರಕರಣ ದಾಖಲಿಸಿಕೊಂಡು ತನಿಖೆ ಪ್ರಾರಂಭಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.