ADVERTISEMENT

ಬೇಲೂರು: ರಥದ ಚಕ್ರಕ್ಕೆ ಬೆಂಕಿ

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2025, 23:35 IST
Last Updated 11 ಏಪ್ರಿಲ್ 2025, 23:35 IST
ಬೇಲೂರಿನಲ್ಲಿ ಶುಕ್ರವಾರ ನಡೆದ ಚನ್ನಕೇಶವ ಸ್ವಾಮಿ ದಿವ್ಯ ರಥೋತ್ಸವದ ವೇಳೆ ರಥದ ಚಕ್ರಕ್ಕೆ ತಗುಲಿದ್ದ ಬೆಂಕಿಯನ್ನು ಪೌರಕಾರ್ಮಿಕರು ನಂದಿಸಿದರು.
ಬೇಲೂರಿನಲ್ಲಿ ಶುಕ್ರವಾರ ನಡೆದ ಚನ್ನಕೇಶವ ಸ್ವಾಮಿ ದಿವ್ಯ ರಥೋತ್ಸವದ ವೇಳೆ ರಥದ ಚಕ್ರಕ್ಕೆ ತಗುಲಿದ್ದ ಬೆಂಕಿಯನ್ನು ಪೌರಕಾರ್ಮಿಕರು ನಂದಿಸಿದರು.   

ಬೇಲೂರು (ಹಾಸನ): ಶುಕ್ರವಾರ ಇಲ್ಲಿ ನಡೆದ ಚನ್ನಕೇಶವ ಸ್ವಾಮಿ ದಿವ್ಯರಥೋತ್ಸವದ ವೇಳೆ ಭಕ್ತರು ಹಚ್ಚಿದ ಕರ್ಪೂರ ಹಾಗೂ ಊದುಬತ್ತಿಯಿಂದ ಚಕ್ರದಲ್ಲಿ ಅಲ್ಪ ಪ್ರಮಾಣದಲ್ಲಿ ಬೆಂಕಿ ಕಾಣಿಸಿಕೊಂಡಿತ್ತು.

ಪುರಸಭೆ ಆರೋಗ್ಯಾಧಿಕಾರಿ ಲೋಹಿತ್ ಹಾಗೂ ಪೌರ ಕಾರ್ಮಿಕರು ಬೆಂಕಿಯನ್ನು ನಂದಿಸಿದರು. ನಂತರ ಅಗ್ನಿಶಾಮಕ ದಳದ ಸಿಬ್ಬಂದಿ ಬಂದು ಪರಿಶೀಲಿಸಿ, ಹೆಚ್ಚಿನ ಪ್ರಮಾಣದ ನೀರನ್ನು ಚಕ್ರಕ್ಕೆ ಹಾಕಿದರು.

‘ರಥದ ಚಕ್ರಕ್ಕೆ ಬೆಂಕಿ ಬಿದ್ದಿರುವುದರಿಂದ ಶನಿವಾರ ನಡೆಯುವ ಹೋಮದಲ್ಲಿ ವಿಶೇಷ ಪೂಜೆ ಸಲ್ಲಿಸಲಾಗುವುದು’ ಎಂದು ದೇಗುಲದ ಪ್ರಧಾನ ಅರ್ಚಕ ಶ್ರೀನಿವಾಸ್ ಭಟ್ ತಿಳಿಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.