ADVERTISEMENT

ಅರಕಲಗೂಡಿನ ವಿಜ್ಞಾನಿ ಎ.ವಿ. ರಾಮಕೃಷ್ಣ ಅವರಿಗೆ ಸಿಎನ್‌ಆರ್ ರಾವ್ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 17 ಜನವರಿ 2026, 7:46 IST
Last Updated 17 ಜನವರಿ 2026, 7:46 IST
ಎ.ವಿ. ರಾಮಕೃಷ್ಣ ಅವರಿಗೆ ಪ್ರೊ.ಸಿ.ಎನ್‌.ಆರ್. ರಾವ್‌ ಜೀವಮಾನದ ಸಾಧನಾ ಪ್ರಶಸ್ತಿಯನ್ನು ಸಚಿವ ಭೋಸರಾಜ್‌ ಬೆಂಗಳೂರಿನಲ್ಲಿ ಪ್ರದಾನ ಮಾಡಿದರು.
ಎ.ವಿ. ರಾಮಕೃಷ್ಣ ಅವರಿಗೆ ಪ್ರೊ.ಸಿ.ಎನ್‌.ಆರ್. ರಾವ್‌ ಜೀವಮಾನದ ಸಾಧನಾ ಪ್ರಶಸ್ತಿಯನ್ನು ಸಚಿವ ಭೋಸರಾಜ್‌ ಬೆಂಗಳೂರಿನಲ್ಲಿ ಪ್ರದಾನ ಮಾಡಿದರು.   

ಅರಕಲಗೂಡು: ಪ್ರಾಣಿವಿಜ್ಞಾನ, ಜೀವ ವೈವಿಧ್ಯ ಸಂರಕ್ಷಣೆ ಮತ್ತು ವೈಜ್ಞಾನಿಕ ಸಂಶೋಧನೆಯಲ್ಲಿನ ಸೇವೆಯನ್ನು ಗುರುತಿಸಿ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯು ಅರಕಲಗೂಡಿನ ವಿಜ್ಞಾನಿ ಎ.ವಿ. ರಾಮಕೃಷ್ಣ ಅವರಿಗೆ 2023ನೇ ಸಾಲಿನ ಪ್ರೊ.ಸಿ.ಎನ್.ಆರ್. ರಾವ್ ಜೀವಮಾನದ ಸಾಧನೆ ಪ್ರಶಸ್ತಿ ನೀಡಿ ಗೌರವಿಸಿದೆ.

ಜುವಾಲಾಜಿಕಲ್ ಸರ್ವೆ ಆಫ್ ಇಂಡಿಯಾದಲ್ಲಿ 35 ವರ್ಷಗಳ ಕಾಲ ವಿವಿಧ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಿ ಸಂಸ್ಥೆಯ ನಿರ್ದೇಶಕರಾಗಿ ನಿವೃತ್ತರಾಗಿದ್ದಾರೆ. 15 ವರ್ಷಗಳಿಂದ ಬೆಂಗಳೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಗೌರವಾನ್ವಿತ ವಿಜ್ಞಾನಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಡಾ. ರಾಮಕೃಷ್ಣ ಅವರು 60ಕ್ಕೂ ಹೆಚ್ಚಿನ ಪುಸ್ತಕಗಳನ್ನು ಪ್ರಕಟಿಸಿದ್ದು, 56 ಅಧ್ಯಾಯ ಗ್ರಂಥಗಳಿಗೆ ಕೊಡುಗೆ ನೀಡಿದ್ದಾರೆ. 25 ಅಂತರ ರಾಷ್ಟ್ರೀಯ, 81 ರಾಷ್ಟ್ರೀಯ ಹಾಗೂ 34 ಇತರೆ ವೈಜ್ಞಾನಿಕ ಅಧ್ಯಯನಗಳನ್ನು ಪ್ರಕಟಿಸಿದ್ದಾರೆ. 78 ಸಂಶೋಧನಾ ಪ್ರಬಂಧಗಳು ಮತ್ತು 84 ಪುಸ್ತಕಗಳ ಸಂಪಾದಕರಾಗಿ ಕಾರ್ಯ ನಿರ್ವಹಿಸಿರುವುದು ಶೈಕ್ಷಣಿಕ ಕೊಡುಗೆಗೆ ಸಾಕ್ಷಿಯಾಗಿದೆ.

ADVERTISEMENT

ಡಾ.ರಾಮಕೃಷ್ಣ ಅವರ ಸಾಧನೆಗೆ ತಾಲ್ಲೂಕಿನ ಜನರು ಹರ್ಷ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.