ADVERTISEMENT

ಡಿ.ಸಿ ವಿರುದ್ಧ ಸಿ.ಎಂ, ರಾಜ್ಯಪಾಲರಿಗೆ ದೂರು

ತಾಲ್ಲೂಕು ಕಚೇರಿ ಕಟ್ಟಡ ಒಡೆಯಲು ಅವಕಾಶ: ಶಾಸಕ ಎಚ್‌.ಡಿ. ರೇವಣ್ಣ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 4 ಮೇ 2022, 15:49 IST
Last Updated 4 ಮೇ 2022, 15:49 IST
‌ಎಚ್.ಡಿ.ರೇವಣ್ಣ
‌ಎಚ್.ಡಿ.ರೇವಣ್ಣ   

ಹಾಸನ: ‘ಟ್ರಕ್‌ ಟರ್ಮಿನಲ್ ಕಾಮಗಾರಿ ಬಳಿ ನಿಷೇಧಾಜ್ಞೆ ಜಾರಿ ಮಾಡಿ ರಾತ್ರೋರಾತ್ರಿ ಸುಸ್ಥಿತಿಯಲ್ಲಿದ್ದ ತಾಲ್ಲೂಕು ಕಚೇರಿ ಕಟ್ಟಡ ನೆಲಸಮ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಆರ್.ಗಿರೀಶ್ ವಿರುದ್ಧಮುಖ್ಯಮಂತ್ರಿ ಮತ್ತು ರಾಜ್ಯಪಾಲರಿಗೆ ದೂರು ನೀಡಿದ್ದೇನೆ' ಎಂದು ಶಾಸಕ ಎಚ್.ಡಿ.ರೇವಣ್ಣ ಹೇಳಿದರು.

‘ಕಟ್ಟಡ ಕೆಡವಲು ಅವಕಾಶ ನೀಡಿದ ಜಿಲ್ಲಾಧಿಕಾರಿ ಮೇಲೆಕಾನೂನು ಪ್ರಕಾರ ಕ್ರಿಮಿನಲ್ ಕೇಸ್ ದಾಖಲಿಸಬೇಕು. ಜಿಲ್ಲೆಯಲ್ಲಿ ಹೇಳೋರು, ಕೇಳೋರು ಯಾರು ಇಲ್ಲ. ಚೆನ್ನಾಗಿರುವ ಕಟ್ಟಡ ಧ್ವಂಸಮಾಡುವ ಬದಲು ಪಕ್ಕದಲ್ಲಿಯೇ ಹೊಸ ಕಟ್ಟಡ ನಿರ್ಮಾಣ ಮಾಡಬಹುದಿತ್ತು.ಕಚೇರಿಯಲ್ಲಿದ್ದ ಪೀಠೋಪಕರಣ ಹಾಗೂ ಆವರಣ ದಲ್ಲಿದ್ದ ಮರಗಳನ್ನು ಪಟ್ಟಿಮಾಡಿ ಹರಾಜು ಹಾಕಬೇಕಿತ್ತು. ಅಧಿಕಾರ ಇದೆ ಎಂದು ದರ್ಪ ನಡೆಸೋದುಸರಿಯಲ್ಲ’ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಕಿಡಿಕಾರಿದರು.

‘ರಾಜ್ಯದಲ್ಲಿ ಶಾಶ್ವತವಾಗಿ ಬಿಜೆಪಿ ಅಧಿಕಾರದಲ್ಲಿ ಇರುತ್ತದೆ ಎಂದು ಕೊಂಡಿದ್ದಾರೆ.ಅದೇ ರೀತಿ ಜಿಲ್ಲಾಧಿಕಾರಿ ಕಚೇರಿ ಒಡೆಯಲಿ ನೋಡೋಣ, ಪರಿಣಾಮ ಬೇರೆಯಾಗುತ್ತದೆ’ ಎಂದು ಎಚ್ಚರಿಸಿದರು.

ADVERTISEMENT

‘ಡಿ.ಸಿ ಕಚೇರಿ ಒಡೆಯದಂತೆ ದೇವೇಗೌಡರು ಮುಖ್ಯಮಂತ್ರಿ ಜೊತೆ ಮಾತಾಡಿದ್ದಾರೆ. ಸಚಿವ ಅಶೋಕ್‌ ಅವರಿಗೆ ಏನ್‌ ಗೊತ್ತು, ಹಾಸನ ಡಿ.ಸಿ ಕಚೇರಿ ಕಟ್ಟಡ ಕಟ್ಟುವುದಕ್ಕೆ ಎಷ್ಟು ಹಣ ಬೇಕು ಗೊತ್ತಾ. ಈಗಿರುವ ಕಟ್ಟಡಕೆಡವಿದರೆ ಕನಿಷ್ಠ ₹ 30 ಕೋಟಿ ಬೇಕು. ಆದರೆ, ಸರ್ಕಾರ ನೀಡಿರುವುದು ಕೇವಲ ₹ 10 ಕೋಟಿ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಹೇಮಗಂಗೋತ್ರಿ ಸ್ನಾತಕೋತ್ತರ ಕೇಂದ್ರದ ಬಳಿ ಇರುವ ಹೆಣ್ಣು ಮಕ್ಕಳಹಾಸ್ಟೆಲ್ ಬಳಿ ಟ್ರಕ್ ಟರ್ಮಿನಲ್ ನಿರ್ಮಾಣದ ಬಗ್ಗೆ ಕಂದಾಯ ಸಚಿವ ಆರ್.ಅಶೋಕ್ ಸ್ಥಳ ಪರಿಶೀಲನೆ ಮಾಡಿ,ಮಾಡಬಹುದು ಎಂದರೆ ನಮ್ಮದೇನು ತಕರಾರಿಲ್ಲ’ ಎಂದರು.

‘ಸಿ.ಎಂ ಇನ್ನೂ ಎರಡು ಲಕ್ಷ ಟನ್ ರಾಗಿ ಖರೀದಿ ಮಾಡೋದಾಗಿಹೇಳಿದ್ದಾರೆ. ನಿಜವಾದ ರೈತರ ರಾಗಿ ಖರೀದಿ ಆಗುತ್ತಿಲ್ಲ. ಇದರಲ್ಲಿ ಲೋಪವಾಗಿದ್ದರೆ ತನಿಖೆ ಮಾಡಿ ಕ್ರಮ ಕೈಗೊಳ್ಳಲಿ’ ಎಂದು ಒತ್ತಾಯಿಸಿದರು.

‘ಮ್ಯೂಸಿಯಂಗೆ ಜಾಗ ಪಡೆದು ಕಲ್ಯಾಣ ಮಂಟಪ ನಿರ್ಮಿಸಿ ₹ 50 ಲಕ್ಷಸಂಪಾದಿಸುತ್ತಿದ್ದೇನೆ ಎಂಬ ಶಾಸಕ ಪ್ರೀತಂ ಗೌಡ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಕಲ್ಯಾಣ ಮಂಟಪವನ್ನು ಜನತಾ ಟ್ರಸ್ಟ್ ನಡೆಸುತ್ತಿದೆ. ಅದಕ್ಕೂನನಗೂ ಸಂಬಂಧವಿಲ್ಲ. ಅದರ ಮೇಲೆ ₹ 10 ಕೋಟಿ ಸಾಲ ಇದೆ. ತಿಂಗಳಿಗೆ ₹ 60 ಲಕ್ಷ ಸಾಲ ಕಟ್ಟುತ್ತಿದ್ದಾರೆ. ₹ 50 ಲಕ್ಷ ಹಣ ಬರುತ್ತಿದ್ದರೆಅದನ್ನು ಅವರಿಗೆ ನೀಡುವೆ. ಯಾವುದೇ ರಸ್ತೆ, ಜಾಗ ಒತ್ತುವರಿ ಮಾಡಿದ್ದರೆ ತೆರವು ಮಾಡಲು ನನ್ನ ಅಭ್ಯಂತರವಿಲ್ಲ’ ಎಂದು ಉತ್ತರಿಸಿದರು.

ದಕ್ಷಿಣ ಪದವೀಧರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ರಾಮು ಮಾತನಾಡಿ, ‘1.33ಲಕ್ಷ ಪದವೀಧರರು ಹೆಸರು ನೋಂದಣಿ ಮಾಡಿದ್ದಾರೆ. ಜಿಲ್ಲೆಯಲ್ಲಿ 23 ಸಾವಿರ ಮತದಾರರಿದ್ದಾರೆ. ಶಿಕ್ಷಣ ಕ್ಷೇತ್ರದ ಸಮಸ್ಯೆ ಬಗೆಹರಿಸಲು ತಮಗೆ ಪ್ರಥಮ ಪ್ರಾಶ್ಯಸ್ತದ ಮತ ನೀಡುವಂತೆ’ ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.