ADVERTISEMENT

ಹಾಸನ: ಕೋವಿಡ್, ಒಂದೇ ದಿನ 13 ಜನ ಸಾವು

419 ಜನರಿಗೆ ಕೊರೊನಾ ಸೋಂಕು ದೃಢ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2020, 14:53 IST
Last Updated 24 ಸೆಪ್ಟೆಂಬರ್ 2020, 14:53 IST

ಹಾಸನ: ಕೋವಿಡ್‌ ಪೀಡಿತರ ಮರಣ ಪ್ರಮಾಣ ನಿತ್ಯ ಹೆಚ್ಚುತ್ತಿದ್ದು, ಜಿಲ್ಲೆಯಲ್ಲಿ ಗುರುವಾರ ಒಂದೇ ದಿನ 13 ಜನ ಮೃತಪಟ್ಟಿದ್ದಾರೆ. ಈವರೆಗೆ ಸಾವಿಗೀಡಾದವರ ಸಂಖ್ಯೆ 289ಕ್ಕೆ ಏರಿಕೆಯಾಗಿದೆ.

ಶೀತ ಜ್ವರ ಮಾದರಿ ಅನಾರೋಗ್ಯ, ಉಸಿರಾಟದ ತೊಂದರೆಯಿಂದ ಹಿಮ್ಸ್‌ ಆಸ್ಪತ್ರೆ ಹಾಗೂ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಹಾಸನ ತಾಲ್ಲೂಕಿನ 6 ಜನ, ಅರಸೀಕೆರೆ ತಾಲ್ಲೂಕಿನ 4 ಮಂದಿ, ಅರಕಲಗೂಡು, ಬೇಲೂರು, ಹೊಳನರಸೀಪುರ ತಾಲ್ಲೂಕಿನ ತಲಾ ಒಬ್ಬರು ಚಿಕಿತ್ಸೆಗೆ ಸ್ಪಂದಿಸಿಲ್ಲ. ಮಾರ್ಗಸೂಚಿಯಂತೆ ಅಂತ್ಯ
ಸಂಸ್ಕಾರ ನೆರವೇರಿಸಲಾಯಿತು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸತೀಶ್‌
ತಿಳಿಸಿದರು.

ಹೊಸದಾಗಿ 419 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 14,687 ತಲುಪಿದೆ. ಇದರ ಬೆನ್ನಲ್ಲೆ 212 ಜನ ಗುಣಮುಖರಾಗಿದ್ದು, ಈವರೆಗೆ 11,815 ಜನ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 2583 ಸಕ್ರಿಯ ಪ್ರಕರಣಗಳಿದ್ದು, ಜಿಲ್ಲಾ ಕೋವಿಡ್‌ ಆಸ್ಪತ್ರೆ, ಕೊವಿಡ್‌ ಕೇರ್‌ ಸೆಂಟರ್‌, ಐಸೋಲೇಷನ್‌ ನಲ್ಲಿ ಹಾಗೂ 49 ಜನ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದರು.

ADVERTISEMENT

ಹೊಸದಾಗಿ ಅರಸೀಕೆರೆಯ 65, ಚನ್ನರಾಯಪಟ್ಟಣದ 50, ಆಲೂರು 14, ಹಾಸನ 186, ಹೊಳೆನರಸೀಪುರ 7, ಅರಕಲಗೂಡು 70, ಬೇಲೂರು 8, ಸಕಲೇಶಪುರ 17 ಹಾಗೂ ಹೊರ ಜಿಲ್ಲೆಯ ಇಬ್ಬರಿಗೆ ಸೋಂಕು ದೃಢಪಟ್ಟಿದೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.