ADVERTISEMENT

20 ಸಾವಿರ ಹೆಕ್ಟೇರ್‌ನಲ್ಲಿ ಬೆಳೆ ನಾಶ

ಹಲವೆಡೆ ಬಿರುಸಿನ ಮಳೆ: ಕೃಷಿ ಜಮೀನು ಜಲಾವೃತ

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2021, 15:38 IST
Last Updated 17 ನವೆಂಬರ್ 2021, 15:38 IST

ಹಾಸನ: ಜಿಲ್ಲೆಯ ವಿವಿಧೆಡೆ ಬುಧವಾರವೂ ಉತ್ತಮ ಮಳೆಯಾಗಿದೆ. ನಗರದಲ್ಲಿ ತುಂತರು ಮಳೆಯಾದರೆ, ಅರಸೀಕೆರೆ, ಚನ್ನರಾಯಪಟ್ಟಣ, ನುಗ್ಗೇಹಳ್ಳಿ, ಅರಕಲಗೂಡು ಭಾಗದಲ್ಲಿ ಸುಮಾರು ಅರ್ಧ ತಾಸು ರಭಸದ ಮಳೆ ಸುರಿದಿದೆ.

ನಿರಂತರ ಮಳೆಯಿಂದಾಗಿ ತೋಟ, ಗದ್ದೆ ಹಾಗೂ ಕೃಷಿ ಜಮೀನು ಜಲಾವೃತಗೊಂಡಿವೆ. ಕಟಾವು ಹಂತದಲ್ಲಿರುವ ಹಾಗೂ ಕಟಾವುಮಾಡಿರುವ ರಾಗಿ ಬೆಳೆ ನಾಶವಾಗಿದೆ.

ಕೃಷಿ ಇಲಾಖೆ ಮಾಹಿತಿ ಪ್ರಕಾರ ಅರಸೀಕೆರೆ ತಾಲ್ಲೂಕಿನಲ್ಲಿ 9248 ಹೆಕ್ಟೇರ್, ಚನ್ನರಾಯಪಟ್ಟಣ 9850 ಹೆಕ್ಟೇರ್‌ ಹಾಗೂ ಹಾಸನ ತಾಲ್ಲೂಕಿನಲ್ಲಿ 248 ಹೆಕ್ಟೇರ್‌ ಪ್ರದೇಶದಲ್ಲಿ ರಾಗಿ ನಾಶವಾಗಿದೆ. ಬೇಲೂರು ತಾಲ್ಲೂಕಿನಲ್ಲಿ 500 ಹೆಕ್ಟೇರ್‌, ಹಾಸನ ತಾಲ್ಲೂಕಿನಲ್ಲಿ 97 ಹೆಕ್ಟೇರ್ ಪ್ರದೇಶದಲ್ಲಿ ಮೆಕ್ಕೆಜೋಳ ಹಾಳಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.