ADVERTISEMENT

ಮಗಳ ಮದುವೆ ಮುಗಿಸಿದ ತಂದೆಗೆ ಹೃದಯಾಘಾತ

​ಪ್ರಜಾವಾಣಿ ವಾರ್ತೆ
Published 3 ನವೆಂಬರ್ 2019, 12:55 IST
Last Updated 3 ನವೆಂಬರ್ 2019, 12:55 IST
ಇಲಿಯಾಸ್‌ ಪಾಷಾ
ಇಲಿಯಾಸ್‌ ಪಾಷಾ   

ಶ್ರವಣಬೆಳಗೊಳ: ಮಗಳ ಮದುವೆ ಮಾಡಿದ ಸಂಭ್ರಮದಲ್ಲಿದ್ದ ತಂದೆ ಅಂದು ರಾತ್ರಿಯೇ ಹೃದಯಾಘಾತದಿಂದ ಸಾವನ್ನಪ್ಪಿದ್ದದರಿಂದ ಕುಟುಂಬದವರು ಹಾಗೂ ಸಂಬಂಧಿಕರಿಗೆ ಬರ ಸಿಡಿಲು ಬಡಿದಂತಾದ ಘಟನೆ ಪಟ್ಟಣದಲ್ಲಿ ನಡೆದಿದೆ.

ಪಟ್ಟಣದ ಮಟನ್‌ ವ್ಯಾಪಾರಿ ಇಲಿಯಾಸ್‌ ಪಾಷಾ ಉರ್ಫ್ ಬಾಬು (50) ಹೃದಯಾಘಾತದಿಂದ ಮೃತಪಟ್ಟವರು.

ಗುರುವಾರ ಮಗಳ ಮದುವೆ ಮಾಡಿದ ನಂತರ ಸಂಭ್ರಮದಲ್ಲಿದ್ದ ಇಲಿಯಾಸ್‌ ಪಾಷಾ, ಬಂಧುಗಳನ್ನು ಬೀಳ್ಕೊಟ್ಟು ಮನೆಗೆ ಬಂದಿದ್ದರು. ರಾತ್ರಿ ಹೃದಯಾಘಾತ ಸುದ್ದಿ ಹರಡುತ್ತಿದ್ದಂತೆ ಬಂಧು ಬಾಂಧವರು, ಸ್ನೇಹಿತರು ಮನೆಗೆ ಬಂದು ನೋಡಿ ಶೋಕದಲ್ಲಿ ಮುಳುಗಿದರು.

ADVERTISEMENT

ಅವರಿಗೆ ಪತ್ನಿ, ಪುತ್ರ, ನವವಧು ಪುತ್ರಿ, ತಾಯಿ, ತಂದೆ, ಸಹೋದರು ಇದ್ದಾರೆ. ಮೃತರ ಅಂತ್ಯಕ್ರಿಯೆ ಶುಕ್ರವಾರ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.