ADVERTISEMENT

ಐದು ಕೊರೊನಾ ಸೋಂಕಿತರ ಸಾವು

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2021, 14:42 IST
Last Updated 19 ಏಪ್ರಿಲ್ 2021, 14:42 IST

ಹಾಸನ: ಚಿಕಿತ್ಸೆಗೆ ಸ್ಪಂದಿಸದೆ ಸೋಮವಾರ ಐದು ಕೊರೊನಾ ಸೋಂಕಿತರು ಮೃತಪಟ್ಟಿದ್ದು, ಸಾವಿನ ಸಂಖ್ಯೆ 504ಕ್ಕೆ ಏರಿದೆ.

ಮೂರು ದಿನದಲ್ಲಿ 17 ಮಂದಿ ಮೃತಪಟ್ಟಿರುವುದು ಸಾರ್ವಜನಿಕ ವಲಯದಲ್ಲಿ ಆತಂಕ ಸೃಷ್ಟಿಸಿದೆ. ಅದೇ ರೀತಿ ಸೋಂಕಿತರ ಸಂಖ್ಯೆಯೂ ಏರಿಕೆಯಾಗಿದ್ದು, ಒಂದೇ ದಿನ 329 ಕೋವಿಡ್ ಪ್ರಕರಣ ಪತ್ತೆಯಾಗಿದೆ. ಒಟ್ಟು ಸೋಂಕಿತರ ಸಂಖ್ಯೆ 32,265ಕ್ಕೆ ಏರಿಕೆಯಾಗಿದ್ದು, 29,859 ಮಂದಿ ಆರೋಗ್ಯದಲ್ಲಿ ಚೇತರಿಕೆಯಾಗಿದೆ. 1902 ಸಕ್ರಿಯ ಪ್ರಕರಣಗಳ ಪೈಕಿ ತೀವ್ರ ನಿಗಾ ಘಟಕದಲ್ಲಿ 23 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಹೊಸದಾಗಿ ಹಾಸನ 133, ಅರಸೀಕೆರೆ 54, ಚನ್ನರಾಯಪಟ್ಟಣ 51, ಬೇಲೂರು 23, ಹೊಳೆನರಸೀಪುರ 16, ಆಲೂರು 7, ಸಕಲೇಶಪುರ 10, ಅರಕಲಗೂಡು 34 ಹಾಗೂ ಇತರೆ ಜಿಲ್ಲೆಯ ಒಬ್ಬರಿಗೆ ಕೋವಿಡ್ ದೃಢಪಟ್ಟಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬಕಲ್ಯಾಣಾಧಿಕಾರಿ ಡಾ.ಕೆ.ಎಂ. ಸತೀಶ್ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.