ADVERTISEMENT

ಕಾಫಿ ತೋಟದಲ್ಲಿ ಜಿಂಕೆ ಸಾವು

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2019, 14:42 IST
Last Updated 15 ಸೆಪ್ಟೆಂಬರ್ 2019, 14:42 IST
ಸಕಲೇಶಪುರ ತಾಲ್ಲೂಕಿನ ಕೆಲಗಳಲೆ ಗ್ರಾಮದ ರಘು ಎಸ್ಟೇಟ್‌ನಲ್ಲಿ ಭಾನುವಾರ ಮೃತಪಟ್ಟಿರುವ ಗಂಡು ಜಿಂಕೆ
ಸಕಲೇಶಪುರ ತಾಲ್ಲೂಕಿನ ಕೆಲಗಳಲೆ ಗ್ರಾಮದ ರಘು ಎಸ್ಟೇಟ್‌ನಲ್ಲಿ ಭಾನುವಾರ ಮೃತಪಟ್ಟಿರುವ ಗಂಡು ಜಿಂಕೆ   

ಸಕಲೇಶಪುರ: ತಾಲ್ಲೂಕಿನ ಸುಂಡೇಕೆರೆ ಸಮೀಪದ ಕೆಲಗಳಲೆ ಗ್ರಾಮದ ಕಾಫಿ ತೋಟದಲ್ಲಿ ಭಾನುವಾರ ಗಂಡು ಜಿಂಕೆಯೊಂದು ಸತ್ತಿದೆ.

ಗ್ರಾಮದ ರಘು ಎಸ್ಟೇಟ್‌ನಲ್ಲಿ ಸುಮಾರು 6 ವರ್ಷದ ವಯಸ್ಸಿನ ಜಿಂಕೆ ಮೇಯುತ್ತಿದ್ದ ಸಂದರ್ಭದಲ್ಲಿ ಇಳಿಜಾರಿನಲ್ಲಿ ಜಾರಿ ಕೆಳಗೆ ಬಿದ್ದು ಮೃತಪಟ್ಟಿರುವ ಸಾಧ್ಯತೆ ಕಂಡು ಬಂದಿದೆ. ಸ್ಥಳಕ್ಕೆ ವಲಯ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದರು. ಜಿಂಕೆಯ ಶವಪರೀಕ್ಷೆ ನಡೆಸಿ ಅಂತಿಮ ಸಂಸ್ಕಾರ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT