
ಆಲೂರು: ಅಕ್ರಮಿತ ಬಾಂಗ್ಲಾದೇಶಿಗರ ವಿರುದ್ಧ ಧ್ವನಿಯೆತ್ತಿರುವ ಹಿಂದೂ ಸಂಘಟನೆ ಮುಖಂಡ ಪುನೀತ್ ಕೆರಹಳ್ಳಿ ಅವರ ಮೇಲೆ ಹಾಕಿರುವ ಪ್ರಕರಣ ವಾಪಾಸ್ ಪಡೆಯುವಂತೆ, ತಾಲ್ಲೂಕು ಹಿಂದೂ ಸಂಘಟನೆ ಮುಖಂಡರು ಆಕ್ರೋಶ ವ್ಯಕ್ತಪಡಿಸಿ, ಉಪ ತಹಶೀಲ್ದಾರ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಬಿಜೆಪಿ ತಾಲ್ಲೂಕು ಘಟಕದ ನಿಕಟಪೂರ್ವ ಅಧ್ಯಕ್ಷ ಕದಾಳು ಲೋಕೇಶ್ ಹಾಗೂ ನಾಗರಾಜ್ ಹುಲ್ಲಹಳ್ಳಿ ಅವರು ಮಾತನಾಡಿ, ‘ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಜಾರಿಗೆ ಬಂದ ದಿನದಿಂದ ಈವರೆಗೂ ಹಿಂದೂ ಸಂಘಟನೆ ಮುಖಂಡರನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದೆ. ಗೋವು ರಕ್ಷಕ ಪುನೀತ್ ಕೆರೆಹಳ್ಳಿ ಯಾವುದೇ ತಪ್ಪು ಮಾಡದಿದ್ದರೂ, ರಾಜ್ಯ ಕಾಂಗ್ರೆಸ್ ಸರ್ಕಾರ ಹಲವು ಪ್ರಕರಣ ಹಾಕುವ ಮೂಲಕ ಅವರ ಬಾಯಿ ಮುಚ್ಚಿಸುವ ಕೆಲಸ ಮಾಡುತ್ತಿದೆ. ಇದರಿಂದ ಹಿಂದೂ ಸಂಘಟನೆ ಜಗ್ಗುವುದಿಲ್ಲ ಸಿದ್ದರಾಮಯ್ಯನವರು ಬೆದರಿಕೆ ತಂತ್ರ ಬಿಟ್ಟು ಪುನೀತ್ ಕೆರೆಹಳ್ಳಿ ಮೇಲೆ ಹಾಕಿರುವ ಎಲ್ಲಾ ಪ್ರಕರಣಗಳನ್ನು ವಾಪಾಸ್ ಪಡೆಯಿರಿ’ ಎಂದು ಒತ್ತಾಯಿಸಿದರು.
ಹಿಂದೂ ಸಂಘಟನೆ ಮುಖಂಡರಾದ ಲೋಕೇಶ್ ಕದಾಳು, ನಾಗರಾಜು ಹುಲ್ಲಳ್ಳಿ, ಕಟ್ಟಡ ಕಾರ್ಮಿಕ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಟಿ. ಆನಂದ್, ರುದ್ರೇಗೌಡ ದೊಡ್ಡಕಣಗಾಲು, ತುಂಗುರಾಜು ಮಡಬಲು, ಜಗದೀಶ್ ದೊಡ್ಡಕಣಗಾಲು, ಅಶೋಕ್ ಬೇಡಚವಳ್ಳಿ, ಲೋಕೇಶ್ ಜೆಸಿಬಿ, ವೆಂಕಟೇಶ್ ಕವಳಿಕೆರೆ, ಕೃಷ್ಣಮೂರ್ತಿ ಕಾರ್ಜುವಳ್ಳಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.