ಹಾಸನ: ಪೆನ್‌ಡ್ರೈವ್ ವಿಡಿಯೊ ಹಂಚಿಕೆ ಪ್ರಕರಣ ಸಂಬಂಧ ವಕೀಲ ಜಿ.ದೇವರಾಜೇಗೌಡ ಅವರನ್ನು ಎರಡು ದಿನ ಎಸ್ಐಟಿ ವಶಕ್ಕೆ ನೀಡಿ, ಹಾಸನದ ಐದನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಶನಿವಾರ ಆದೇಶ ನೀಡಿದೆ.
ಅವರನ್ನು ಕರೆತಂದಿದ್ದ ಎಸ್‌ಐಟಿ ತಂಡ, ‘ಹೆಚ್ಚಿನ ವಿಚಾರಣೆ ಅಗತ್ಯ ಇರುವುದರಿಂದ ಎರಡು ದಿನ ಕಸ್ಟಡಿಗೆ ನೀಡಬೇಕು’ ಎಂದು ಮನವಿ ಸಲ್ಲಿಸಿತ್ತು. ಮನವಿ ಪುರಸ್ಕರಿಸಿದ ನ್ಯಾಯಾಧೀಶರು, ಮೇ 20ರ ಸಂಜೆ 5 ಗಂಟೆಯವರೆಗೆ ಎಸ್‌ಐಟಿ ವಶಕ್ಕೆ ನೀಡಿದರು.
ಶುಕ್ರವಾರ ಕೋರ್ಟ್‌ನಿಂದ ಹೊರ ಬರುವ ವೇಳೆ ದೇವರಾಜೇಗೌಡ ನೀಡಿದ್ದ ಹೇಳಿಕೆ ವಿವಾದ ಸೃಷ್ಟಿಸಿದ್ದು, ಶನಿವಾರ ಇಲ್ಲಿನ ಜಿಲ್ಲಾ ನ್ಯಾಯಾಲಯ ಸಂಕೀರ್ಣದ ಬಳಿ ಬಿಗಿ ಬಂದೋಬಸ್ತ್ ಮಾಡಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.