
ಹಾಸನ: ‘ಪ್ರಧಾನ ಮಂತ್ರಿ ಆಗಬೇಕೆಂದು ನಾನು ಅರ್ಜಿ ಹಾಕಿದ್ನಾ? ಈ ಬಗ್ಗೆ ಚರ್ಚೆಯಾಗಲಿ’ ಎಂದು ರಾಜ್ಯಸಭಾ ಸದಸ್ಯ ಎಚ್.ಡಿ.ದೇವೇಗೌಡ ಹೇಳಿದರು.
ಹುಟ್ಟೂರು ಹರದನಹಳ್ಳಿಯಲ್ಲಿ ಸೋಮವಾರ ಮನೆದೇವರಿಗೆ ಪೂಜೆ ಸಲ್ಲಿಸಿದ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಚರಣ್‌ಸಿಂಗ್ ಪ್ರಧಾನಿಯಾಗಿದ್ದ ಸಂದರ್ಭದ ರಾಜಕೀಯವನ್ನು ನೆನಪಿಸಿಕೊಳ್ಳಲಿ. ಇವರ ಹೊಡೆತ ತಡೆದುಕೊಂಡು ಇನ್ನೂ ಬದುಕಿದ್ದೇನೆ. ಜನತೆಯ ಆಶೀರ್ವಾದದಿಂದ ಇದ್ದೇನೆ’ ಎಂದರು.
ಮಹಾರಾಷ್ಟ್ರದಲ್ಲಿ ಜೆಡಿಎಸ್‌ನ ಐವರು ಗೆದ್ದಿರುವುದನ್ನು ಉಲ್ಲೇಖಿಸಿ, ‘ಅಲ್ಲಿನ ಬಿಜೆಪಿ ಮುಖ್ಯಮಂತ್ರಿ ಹಾಗೂ ಅಧ್ಯಕ್ಷರಿಗೆ ಅಭಿನಂದನೆ ಸಲ್ಲಿಸುತ್ತೇನೆ. ನಾವು ಎನ್‌ಡಿಎಯಲ್ಲಿದ್ದೇವೆ. ಲೋಕಸಭೆ ಸೇರಿ ಎಲ್ಲೆಲ್ಲೂ ಒಟ್ಟಿಗೆ ಇರುತ್ತೇವೆ. ನಿಮಗೆ ಶಕ್ತಿ ಇಲ್ಲ ಎಂದು ಕಾಂಗ್ರೆಸ್‌ನವರು ಹೇಳಿದ್ದರಿಂದ ನಾವು ಎನ್‌ಡಿಎ ಜೊತೆ ಹೋಗಿದ್ದೇವೆ. ನೀವೇಕೆ ಸ್ಟಾಲಿನ್ ಮನೆ ಬಾಗಿಲಿಗೆ ಹೋಗುತ್ತಿದ್ದೀರಾ’ ಎಂದು ಕಾಂಗ್ರೆಸ್ ನಾಯಕರನ್ನು ಪ್ರಶ್ನಿಸಿದರು.
‘ಜಿಲ್ಲೆಯ ಜನತೆ ಎಲ್ಲ ಸಂದರ್ಭದಲ್ಲೂ ಆಶೀರ್ವಾದ ಮಾಡಿದ್ದಾರೆ. ನನಗೀಗ 93 ವರ್ಷ. ಕೊನೆಯ ಉಸಿರು ಇರುವವರೆಗೂ ಹೋರಾಟ ಮುಂದುವರಿಸುತ್ತೇನೆ. ನಾನು ಅಧಿಕಾರಕ್ಕೆ ಅಂಟಿಕೊಂಡ ವ್ಯಕ್ತಿಯಲ್ಲ’ ಎಂದರು.
‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಿಲ್ಲೆಯಲ್ಲಿ ಎರಡು ಬಾರಿ ಸಮಾವೇಶ ನಡೆಸಿದ್ದಾರೆ. ‘ಅವರ ಸಮಾವೇಶಕ್ಕಿಂತ ದೊಡ್ಡ ಮಟ್ಟದ ಸಭೆ ಜ. 24ರಂದು ಮಾಡುತ್ತೇವೆ. ರೇವಣ್ಣಗೂ ಹೇಳಿದ್ದೇನೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.