ADVERTISEMENT

ಶಿಕ್ಷಣದಿಂದ ದೇಶದ ಅಭಿವೃದ್ಧಿ ಸಾಧ್ಯ

ಮೂಡಿಗೆರೆ ಶಾಸಕ ಎಂ.ಪಿ. ಕುಮಾರಸ್ವಾಮಿ ಅಭಿಪ್ರಾಯ

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2021, 16:26 IST
Last Updated 25 ಸೆಪ್ಟೆಂಬರ್ 2021, 16:26 IST
ಹಾಸನದ ಯುಇಎಸ್‌ (ಪ್ರೆಸಿಡೆನ್ಸಿ) ಪದವಿ ಪೂರ್ವ ಕಾಲೇಜಿನಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿ ಮಾತನಾಡಿದರು. ಪತ್ರಕರ್ತ ಎಸ್.ಆರ್.ಪ್ರಸನ್ನಕುಮಾರ್, ಪ್ರಾಂಶುಪಾಲೆ ರಿಜಮ್ಮ ಆಗೆಸ್ಟಿ, ಬೆಂಗಳೂರು ಲೋಕೋಪಯೋಗಿ ಇಲಾಖೆ ಮುಖ್ಯಲೆಕ್ಕಾಧಿಕಾರಿ ಎ.ಡಿ. ನಂದಿನಿ, ಯಶಸ್ವಿನಿ,
ಹಾಸನದ ಯುಇಎಸ್‌ (ಪ್ರೆಸಿಡೆನ್ಸಿ) ಪದವಿ ಪೂರ್ವ ಕಾಲೇಜಿನಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿ ಮಾತನಾಡಿದರು. ಪತ್ರಕರ್ತ ಎಸ್.ಆರ್.ಪ್ರಸನ್ನಕುಮಾರ್, ಪ್ರಾಂಶುಪಾಲೆ ರಿಜಮ್ಮ ಆಗೆಸ್ಟಿ, ಬೆಂಗಳೂರು ಲೋಕೋಪಯೋಗಿ ಇಲಾಖೆ ಮುಖ್ಯಲೆಕ್ಕಾಧಿಕಾರಿ ಎ.ಡಿ. ನಂದಿನಿ, ಯಶಸ್ವಿನಿ,   

ಹಾಸನ: ಶಿಕ್ಷಣದಿಂದ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ ಎಂದು ಮೂಡಿಗೆರೆ ಶಾಸಕ ಎಂ.ಪಿ. ಕುಮಾರಸ್ವಾಮಿ ಅಭಿಪ್ರಾಯಪಟ್ಟರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಶನಿವಾರ ನಡೆದ ಯುಇಎಸ್(ಪ್ರೆಸಿಡೆನ್ಸಿ) ಪದವಿ ಪೂರ್ವ ಕಾಲೇಜಿನ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿ ಜೀವನದಲ್ಲಿ ಪಿಯುಸಿ ಮಹತ್ವದ ಘಟ್ಟವಾಗಿದ್ದು, ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ನಿರ್ಧರಿಸುವ ಸಮಯವಾಗಿದೆ. ವಿದ್ಯಾರ್ಥಿಗಳು ಬೇರೆಡೆ ಗಮನ ನೀಡದೆ ಓದಿನ ಕಡೆಹೆಚ್ಚು ಆಸಕ್ತಿ ವಹಿಸಬೇಕು ಎಂದು ಸಲಹೆ ನೀಡಿದರು.

ಒಬ್ಬ ವ್ಯಕ್ತಿ ಜ್ಞಾನ ಹೊಂದಿ ಉನ್ನತ ಮಟ್ಟಕ್ಕೆ ಹೋಗಬೇಕಾದರೇ ಗುರುವಿನ ಶಿಷ್ಯ ಆಗಲೇಬೇಕು. ಗುರಿಸಾಧಿಸಲು ಗುರುಗಳ ಮಾರ್ಗದರ್ಶನ ಅಗತ್ಯ. ಇಲ್ಲವಾದರೆ ಗುರಿ ಮುಟ್ಟಲು ಸಾಧ್ಯವಾಗುವುದಿಲ್ಲ. ಯಾವುದೇ ಕಾರಣಕ್ಕೂ ಸಮಯ ವ್ಯರ್ಥ ಮಾಡಬಾರದು. ಅರ್ಥವಾಗದ ವಿಚಾರವನ್ನು ಗುರುಗಳಿಂದ ತಿಳಿದುಕೊಳ್ಳಬೇಕು ಎಂದರು.

ADVERTISEMENT

ಪ್ರೆಸಿಡೆನ್ಸಿ ಪಿಯು ಕಾಲೇಜಿನ ಇತಿಹಾಸ ಶಿಕ್ಷಕ ಸೋಮೇಗೌಡ ಮಾತನಾಡಿ, ಶಿಲ್ಪಿ ಕಲ್ಲಿಗೆ ಉಳಿ ಪೆಟ್ಟು ನೀಡುವುದು ಕಲ್ಲನ್ನು ಸುಂದರ ಶಿಲೆಯನ್ನಾಗಿ ರೂಪಿಸಲು. ಹಾಗೆಯೇ ಶಿಕ್ಷಕರು ವಿದ್ಯಾರ್ಥಿಗಳಿಗೆ ವಿದ್ಯೆ ಕಲಿಸಿಸಮಾಜದಲ್ಲಿ ಉತ್ತಮ ಪ್ರಜೆಯನ್ನಾಗಿ ರೂಪಿಸುತ್ತಾರೆ. ಉತ್ತಮ ಸಮಾಜಕ್ಕೆ ಗುರುಗಳ ಪಾತ್ರಪ್ರಮುಖವಾಗಿದೆ. ಗುರುಗಳಿಂದ ಮಾತ್ರ ಉತ್ತಮ ಪ್ರಜೆ ರೂಪಿಸಲು ಸಾಧ್ಯ ಎಂದು ನುಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.