ADVERTISEMENT

ಅರಸೀಕೆರೆ | ರೈಲ್ವೆ ನಿಲ್ದಾಣದಲ್ಲಿ ಶ್ವಾನದಿಂದ ತಪಾಸಣೆ

​ಪ್ರಜಾವಾಣಿ ವಾರ್ತೆ
Published 11 ಮೇ 2025, 13:47 IST
Last Updated 11 ಮೇ 2025, 13:47 IST
ಅರಸೀಕೆರೆ ರೈಲ್ವೆ ನಿಲ್ದಾಣದಲ್ಲಿ ಶನಿವಾರ ಪ್ರಯಾಣಿಕರ ಲಗ್ಗೇಜ್‌ ಹಾಗೂ ಕೆಲವು ಸೂಕ್ಷ್ಮ ಸ್ಥಳಗಳನ್ನು ರೈಲ್ವೆ ರಕ್ಷಣಾದಳ ಇನ್‌ಸ್ಪೆಕ್ಟರ್, ಶ್ವಾನದಿಂದ ತಪಾಸಣೆ ನಡೆಸಿದರು
ಅರಸೀಕೆರೆ ರೈಲ್ವೆ ನಿಲ್ದಾಣದಲ್ಲಿ ಶನಿವಾರ ಪ್ರಯಾಣಿಕರ ಲಗ್ಗೇಜ್‌ ಹಾಗೂ ಕೆಲವು ಸೂಕ್ಷ್ಮ ಸ್ಥಳಗಳನ್ನು ರೈಲ್ವೆ ರಕ್ಷಣಾದಳ ಇನ್‌ಸ್ಪೆಕ್ಟರ್, ಶ್ವಾನದಿಂದ ತಪಾಸಣೆ ನಡೆಸಿದರು   

ಅರಸೀಕೆರೆ: ದೇಶದ ಗಡಿ ಭಾಗದಲ್ಲಿ ಯುದ್ಧ ನಡೆಯುತ್ತಿದ್ದರೆ ಅರಸೀಕೆರೆ ರೈಲ್ವೆ ನಿಲ್ದಾಣದಲ್ಲಿ ಪ್ರಯಾಣಿಕರ ಲಗ್ಗೇಜ್ ಸೇರಿದಂತೆ ಸೂಕ್ಷ್ಮ ಸ್ಥಳಗಳನ್ನು ಶನಿವಾರ ರೈಲ್ವೆ ರಕ್ಷಣಾದಳ ಇನ್‌ಸ್ಪೆಕ್ಟರ್ ಹಾಗೂ ಸಿಬ್ಬಂದಿ ಅವರು ಶ್ವಾನದೊಂದಿಗೆ ತಪಾಸಣೆ ನಡೆಸಿದರು.

ದೇಶದ ವಿವಿಧ ಭಾಗಗಳಿಗೆ ಸಂಪರ್ಕ ಕಲ್ಪಿಸುವ ನಗರದ ರೈಲ್ವೆ ಜಂಕ್ಷನ್ ಪ್ರಮುಖ‌ ಸಂಪರ್ಕ ಕೇಂದ್ರವಾಗಿದೆ. ಈ  ನಿಲ್ದಾಣದ ಮೂಲಕ ಬಂದು ಹೋಗುವ ಪ್ರಯಾಣಿಕರು ಸೇರಿದಂತೆ ಲಗ್ಗೇಜ್ ಮತ್ತು ಆಯಾ ಕಟ್ಟಿನ ಸ್ಥಳಗಳನ್ನು  ತಪಾಸಣೆ ನಡೆಸಿದರು.

ನಿಲ್ದಾಣದ ಫ್ಲಾಟ್ ಫಾರಂ, ಆಹಾರ ಮಾರಾಟ ಮಳಿಗೆ, ಶೌಚಾಲಯ, ಟಿಕೆಟ್ ಕೌಂಟರ್, ವಾಹನಗಳ ಪಾರ್ಕಿಂಗ್ ಸ್ಥಳ, ಪ್ರಯಾಣಿಕರ ಕಾಯ್ದಿರಿಸುವಿಕೆ ಕೊಠಡಿ ಸೇರಿದಂತೆ ಪ್ರಯಾಣಿಕರ ಲಗ್ಗೇಜ್‌ಗಳನ್ನು ಮುಂಜಾಗ್ರತಾ ಕ್ರಮವಾಗಿ ತಪಾಸಣೆ ನಡೆಸಲಾಯಿತು.

ADVERTISEMENT

ರೈಲ್ವೆ ರಕ್ಷಣಾ ದಳ್ ಇನ್‌ಸ್ಪೆಕ್ಟರ್ ರಾಕೇಶ್ ಕುಮಾರ್, ಸಬ್ ಇನ್‌ಸ್ಪೆಕ್ಟರ್ ಬಸವರಾಜು, ನಗರದ ಶ್ವಾನದಳ ಘಟಕದ ಹೆಡ್ ಕಾನ್‌ಸ್ಟೆಬಲ್ ಲೋಕೇಶ್ ಕುಮಾರ್ ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.