ADVERTISEMENT

ಹಲಸುಲಿಗೆ ಗ್ರಾಮಕ್ಕೆ ನುಗ್ಗಿದ ಕಾಡಾನೆ

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2021, 3:56 IST
Last Updated 6 ಆಗಸ್ಟ್ 2021, 3:56 IST
ಸಕಲೇಶಪುರ ತಾಲ್ಲೂಕಿನ ಹಲಸುಲಿಗೆ ಗ್ರಾಮದೊಳಗೆ ಗುರುವಾರ ಬೆಳಿಗ್ಗೆ 9 ಗಂಟೆ ಸುಮಾರಿಗೆ ಕಾಡಾನೆಯೊಂದು ಏಕಾಏಕಿ ನುಗ್ಗಿ ಗ್ರಾಮಸ್ಥರಲ್ಲಿ ಭಯ ಉಂಟುಮಾಡಿತ್ತು
ಸಕಲೇಶಪುರ ತಾಲ್ಲೂಕಿನ ಹಲಸುಲಿಗೆ ಗ್ರಾಮದೊಳಗೆ ಗುರುವಾರ ಬೆಳಿಗ್ಗೆ 9 ಗಂಟೆ ಸುಮಾರಿಗೆ ಕಾಡಾನೆಯೊಂದು ಏಕಾಏಕಿ ನುಗ್ಗಿ ಗ್ರಾಮಸ್ಥರಲ್ಲಿ ಭಯ ಉಂಟುಮಾಡಿತ್ತು   

ಸಕಲೇಶಪುರ: ತಾಲ್ಲೂಕಿನ ಹಲಸುಲಿಗೆ ಗ್ರಾಮದಲ್ಲಿ ಗುರುವಾರ ಬೆಳಿಗ್ಗೆ 9 ಗಂಟೆ ಸುಮಾರಿಗೆ ಕಾಡಾನೆಗಳು ನುಗ್ಗಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು.

ಗ್ರಾಮ ಪಂಚಾಯಿತಿ ಮುಂಭಾಗದ ಮುಖ್ಯ ರಸ್ತೆಯಲ್ಲೇ ಕೆಲವು ನಡೆದು ಬಂದರೆ, ಮತ್ತೊಂದು ಆನೆ ಜನನಿಬಿಡ ರಸ್ತೆಯಲ್ಲಿಯೇ ಸುಮಾರು ಅರ್ಧ ಕಿ.ಮೀ. ದೂರ ಸಾಗಿತು. ಪಾದಚಾರಿಗಳು, ಮನೆಯಂಗಳದಲ್ಲಿದ್ದವರು ಹೆದರಿ ಓಡಿ ಹೋದರು.

‘ಕಾಡಾನೆಗಳು ಭತ್ತದ ಸಸಿ ಮಡಿಗಳನ್ನು ತುಳಿಯುತ್ತವೆ. ಪೈರನ್ನು ತಿಂದುಹಾಕುತ್ತವೆ. ಕಟಾವು ಹಂತಕ್ಕೆ ಬಂದ ಬೆಳೆಯನ್ನೂ ನಾಶ ಮಾಡುತ್ತವೆ. ಹೀಗಾಗಿ ಭತ್ತ ಬೆಳೆಯುವುದನ್ನೇ ನಿಲ್ಲಿಸಬೇಕಾಗಿದೆ’ ಎಂದು ಹಲಸುಲಿಗೆಯ ರೈತ ಎಚ್‌.ವಿ. ಗಿರೀಶ್ ಅಲವತ್ತುಕೊಂಡರು.

ADVERTISEMENT

‘ಆನೆಗಳು ಕದಲೇ ನಿಲ್ಲುವುದರಿಂದ ಕಾಫಿ ತೋಟಕ್ಕೆ ಹೋಗಲು ಹಿಂಜರಿಯುವಂತಾಗಿದೆ. ತೋಟದಲ್ಲಿ ಅನೇಕ ಕೆಲಸಗಳು ಬಾಕಿ ಉಳಿದಿವೆ. ಕಾರ್ಮಿಕರು ಕೆಲಸಕ್ಕೆ ಬರುತ್ತಿಲ್ಲ’ ಎಂದು ಹಸಿಡೆ ಗ್ರಾಮದ ರೈತರ ದಯಾನಂದ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.