ADVERTISEMENT

ಹಳೇಬೀಡು: ಪರಿಸರ ದಿನಾಚರಣೆ ಜಾಗೃತಿ ಜಾಥಾ

​ಪ್ರಜಾವಾಣಿ ವಾರ್ತೆ
Published 6 ಜೂನ್ 2025, 12:33 IST
Last Updated 6 ಜೂನ್ 2025, 12:33 IST
ಹಳೇಬೀಡು ಸಮೀಪದ ಲಿಂಗಪ್ಪನಕೊಪ್ಪಲು ಸರ್ಕಾರಿ ಪ್ರೌಢಶಾಲೆಯಲ್ಲಿ ಗುರುವಾರ ನಡೆದ ಪರಿಸರ ದಿನಾಚರಣೆಯಲ್ಲಿ ಗಿಡಕ್ಕೆ ನೀರು ಹಾಕಲು ವಿದ್ಯಾರ್ಥಿಗಳಲ್ಲಿ ಪೈಪೋಟಿ ಕಂಡು ಬಂತು
ಹಳೇಬೀಡು ಸಮೀಪದ ಲಿಂಗಪ್ಪನಕೊಪ್ಪಲು ಸರ್ಕಾರಿ ಪ್ರೌಢಶಾಲೆಯಲ್ಲಿ ಗುರುವಾರ ನಡೆದ ಪರಿಸರ ದಿನಾಚರಣೆಯಲ್ಲಿ ಗಿಡಕ್ಕೆ ನೀರು ಹಾಕಲು ವಿದ್ಯಾರ್ಥಿಗಳಲ್ಲಿ ಪೈಪೋಟಿ ಕಂಡು ಬಂತು   

ಹಳೇಬೀಡು: ಎಸ್‌ಜಿಆರ್ ಪಬ್ಲಿಕ್ ಶಾಲೆ ಆಶ್ರಯದಲ್ಲಿ ಗುರುವಾರ ಪರಿಸರ ದಿನಾಚರಣೆ ಅಂಗವಾಗಿ ಜಾಗೃತಿ ಜಾಥಾ ನಡೆಯಿತು.

ಶಾಲೆಯ ಕಾರ್ಯದರ್ಶಿ ಎಚ್.ಆರ್.ಸುರೇಶ್ ಜಾಥಾಕ್ಕೆ ಚಾಲನೆ ನೀಡಿದರು. ವಿದ್ಯಾರ್ಥಿಗಳು ಘೋಷಣೆ ಕೂಗುತ್ತ ಮೆರವಣಿಗೆಯಲ್ಲಿ ಸಾಗಿದರು. ಶಾಲೆಯ ಸ್ಕೌಟ್ಸ್, ಗೈಡ್ಸ್ ಘಟಕದವರು ಜಾಥಾಕ್ಕೆ ಕೈ ಜೋಡಿಸಿದ್ದರು. ಮುಖ್ಯ ಶಿಕ್ಷಕರಾದ ಸಿದ್ದೇಶ್, ಮಮತ.ಬಿ.ಎಲ್ ಪಾಲ್ಗೊಂಡಿದ್ದರು.

ಪರಿಸರ ಜಾಗೃತಿ: ಹಗರೆ ಗ್ರಾಮದ ದೇವಿರಮ್ಮ ವನಸಿರಿ ಬಳಗದ ಆಶ್ರಯದಲ್ಲಿ ಲಿಂಗಪ್ಪನಕೊಪ್ಪಲು ಸರ್ಕಾರಿ ಪ್ರೌಢಶಾಲೆಯಲ್ಲಿ ಗುರುವಾರ ವಿಶ್ವ ಪರಿಸರ ದಿನಾಚರಣೆ ನಡೆಯಿತು. ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದ ನಂತರ ಶಾಲಾ ಮೈದಾನದಲ್ಲಿ ಗಿಡ ನೆಡಲಾಯಿತು. ಪರಿಸರ ಪ್ರಿಯ ಸಾಲು ಮರದ ಸದಾಶಿವಯ್ಯ ವಿದ್ಯಾರ್ಥಿಗಳಿಗೆ ಪರಿಸರದ ಜಾಗೃತಿ ಮೂಡಿಸಿದರು.

ADVERTISEMENT

ಮುಖ್ಯ ಶಿಕ್ಷಕ ತಾರೇಶ ನಾಯ್ಕ.ಕೆ.ಸಿ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕರಾದ ಲೋಕೇಶಪ್ಪ, ರವಿಶಂಕರ, ವೀಣಾ, ಲಕ್ಷ್ಮಣ, ಮಹಾದೇವಮ್ಮ, ತಾಜುನ್ನಿಸಾ, ಸುಜಾತಾ, ಗಿರಿಜಮ್ಮ, ಲೋಕೇಶ್, ಬಸವರಾಜು ಪಾಲ್ಗೊಂಡಿದ್ದರು.

ಹಳೇಬೀಡಿನ ಎಸ್‌ಜಿಆರ್ ಶಾಲೆಯ ಮಕ್ಕಳು ಗುರುವಾರ ಪರಿಸರ ದಿನಾಚರಣೆ ಅಂಗವಾಗಿ ಮೆರವಣಿಗೆಯಲ್ಲಿ ತೆರಳಿ ಪರಿಸರದ ಜಾಗೃತಿ ಮೂಡಿಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.