ADVERTISEMENT

14 ಎಕರೆಯಲ್ಲಿ ಐಟಿ ಪಾರ್ಕ್ ಸ್ಥಾಪನೆ

ಯೋಜನೆಗೆ ₹ 200 ಕೋಟಿ ವಿನಿಯೋಗ: ಖನಿಜ ನಿಗಮ ಅಧ್ಯಕ್ಷ ಲಿಂಗಮೂರ್ತಿ

​ಪ್ರಜಾವಾಣಿ ವಾರ್ತೆ
Published 25 ಜನವರಿ 2021, 14:45 IST
Last Updated 25 ಜನವರಿ 2021, 14:45 IST
ಹಾಸನದಲ್ಲಿ ರಾಜ್ಯ ಖನಿಜ ನಿಗಮದ ಅಧ್ಯಕ್ಷ ಲಿಂಗ ಮೂರ್ತಿ ಮಾತನಾಡಿದರು. ಜಿಲ್ಲಾಧಿಕಾರಿ ಆರ್‌.ಗಿರೀಶ್‌, ಶಾಸಕ ಪ್ರೀತಂ ಗೌಡ ಇದ್ದಾರೆ.‌
ಹಾಸನದಲ್ಲಿ ರಾಜ್ಯ ಖನಿಜ ನಿಗಮದ ಅಧ್ಯಕ್ಷ ಲಿಂಗ ಮೂರ್ತಿ ಮಾತನಾಡಿದರು. ಜಿಲ್ಲಾಧಿಕಾರಿ ಆರ್‌.ಗಿರೀಶ್‌, ಶಾಸಕ ಪ್ರೀತಂ ಗೌಡ ಇದ್ದಾರೆ.‌   

ಹಾಸನ: ನಗರದ ಡೈರಿ ಸಮೀಪದ ಕೈಗಾರಿಕಾ ಪ್ರದೇಶದಲ್ಲಿನ ಖನಿಜ ನಿಗಮಕ್ಕೆ ಸೇರಿದ 14 ಎಕರೆಜಾಗದಲ್ಲಿ ಐಟಿ ಪಾರ್ಕ್ ಹಾಗೂ ವಾಣಿಜ್ಯ ಉದ್ದೇಶಕ್ಕೆ ಮಳಿಗೆಗಳನ್ನು ಸ್ಥಾಪಿಸಲಾಗುವುದು ಎಂದು ರಾಜ್ಯಖನಿಜ ನಿಗಮದ ಅಧ್ಯಕ್ಷ ಲಿಂಗಮೂರ್ತಿ ಹೇಳಿದರು.

ಈ ಪ್ರದೇಶದಲ್ಲಿ ಗ್ರಾನೈಟ್ ಉದ್ಯಮ ಸಹ ಸ್ಥಗಿತವಾಗಿದ್ದು, ವಾಣಿಜ್ಯ ಕ್ಷೇತ್ರಕ್ಕೆ ಪುನಶ್ಚೇತನ ನೀಡುವಉದ್ದೇಶದಿಂದ ಹಾಗೂ ಸ್ಥಳೀಯವಾಗಿ ಉದ್ಯೋಗ ಸೃಷ್ಟಿಸಲು ₹ 200 ಕೋಟಿ ವೆಚ್ಚದ ಯೋಜನೆರೂಪಿಸಲಾಗಿದೆ. ನಾಲ್ಕು ಹಂತಗಳಲ್ಲಿ ಈ ಯೋಜನೆ ಅನುಷ್ಠಾನಗೊಳಿಸಲಾಗುವುದು. ಮೊದಲ ಹಂತದಲ್ಲಿ ₹60 ಕೋಟಿ ಬಿಡುಗಡೆ ಮಾಡಲಾಗುವುದು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಇದರಿಂದ ಸ್ಥಳೀಯವಾಗಿ ಐಟಿಐ, ಎಂಜಿನಿಯರಿಂಗ್ ಪದವಿ ಪಡೆದ ವಿದ್ಯಾರ್ಥಿಗಳಿಗೆ ಉದ್ಯೋಗ ಪಡೆಯಲುಸಹಕಾರಿಯಾಗಲಿದೆ ಎಂದರು.

ADVERTISEMENT

ಗ್ರಾನೈಟ್ ಉದ್ಯಮ ಸ್ಥಗಿತವಾಗಿದ್ದು, ವಹಿವಾಟಾಗದೆ ಉಳಿದ 15 ಸಾವಿರ ಚದುರ ಮೀಟರ್‌ ಗ್ರಾನೈಟ್ಉಳಿದಿದೆ. ಕಪ್ಪು ಹಾಗೂ ಬಣ್ಣದ ಗ್ರಾನೈಟ್‌ ಹರಾಜು ಹಾಕುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.ಉಳಿದ ಗ್ರಾನೈಟ್‌ ಅನ್ನು ಸಾರ್ವಜನಿಕರು ಸ್ಥಳೀಯವಾಗಿ ದೇವಸ್ಥಾನ ಅಭಿವೃದ್ಧಿಗೆ ಬಳಸಿಕೊಳ್ಳಬಹುದುಎಂದು ಸಲಹೆ ನೀಡಿದರು.

ಶಾಸಕ ಪ್ರೀತಂ ಗೌಡ ಮಾತನಾಡಿ, ಖನಿಜ ನಿಗಮದ ಜಾಗದಲ್ಲಿ ಐ.ಟಿ ಪಾರ್ಕ್ ಮಾಡಲಾಗುವುದು.ಬೆಂಗಳೂರಿನ ಮೇಲಿನ ಒತ್ತಡ ಕಡಿಮೆ ಮಾಡಿ ಸ್ಥಳೀಯವಾಗಿ ಉದ್ಯೋಗ ಸೃಷ್ಟಿಸಲು ಆದ್ಯತೆನೀಡಲಾಗುವುದು. ಹೊಸದಾಗಿ ಪ್ರಾರಂಭಿಸುವ ಕಂಪನಿಗಳಿಗೆ ಈ ಕಟ್ಟಡದಲ್ಲಿ ಬಾಡಿಗೆ ಆಧಾರದಲ್ಲಿ ಜಾಗಒದಗಿಸಲಾಗುವುದು ಎಂದು ತಿಳಿಸಿದರು.

ವಿಶೇಷ ಅರ್ಥಿಕ ವಲಯದಲ್ಲಿ ಮೀಸಲಿಟ್ಟಿರುವ 280 ಎಕರೆ ಜಮೀನು ಹಿಂಪಡೆದು, ಇತರೆ ಕೈಗಾರಿಕೆಗಳ ಸ್ಥಾಪನೆಗೆ ಕ್ರಮ ವಹಿಸಲಾಗುವುದು. ಕೈಗಾರಿಕಾ ಸಚಿವರ ನೇತೃತ್ವದಲ್ಲಿ ನಿಯಮಗಳ ರಚನೆಯಾಗುತ್ತಿದೆ. ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆಯಾಗಿದೆ.ಕೈಗಾರಿಕಾ ಬಡಾವಣೆಯಲ್ಲಿ ಜಾಗ ಪಡೆದು ಹಲವು ವರ್ಷಗಳಾದರೂ ಯಾವುದೇ ಚಟುವಟಿಕೆಗಳನ್ನು ನಡೆಸದೇ ಇರುವವರನ್ನು ಗುರುತಿಸಿ ನೋಟಿಸ್‌ ನೀಡಿ, ಜಮೀನು ಹಿಂಪಡೆದು ನಿಜವಾಗಿಯೂ ಕೈಗಾರಿಕೆ ಪ್ರಾರಂಭ ಮಾಡುವವರಿಗೆ ಮಂಜೂರು ಮಾಡಲಾಗುವುದು . ಈಗಾಗಲೇ ಐದು ಪ್ರಕರಣಗಳಲ್ಲಿ ಭೂಮಿ ವಾಪಸ್‌ ಪಡೆಯಲಾಗಿದೆ ಎಂದು ವಿವರಿಸಿದರು.

ಜಿಲ್ಲಾಧಿಕಾರಿ ಆರ್. ಗಿರೀಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.