ADVERTISEMENT

ಸ್ವತಂತ್ರ ರಾಜಕೀಯ ಪಕ್ಷ ಕಟ್ಟಲು ಬಣಗಳು ಒಂದಾಗಲಿ: ಎಂ.ಸೋಮಶೇಖರ್‌

ದಸಂಸ ರಾಜ್ಯ ಸಂಚಾಲಕ ಎಂ.ಸೋಮಶೇಖರ್‌ ಕರೆ

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2021, 13:05 IST
Last Updated 7 ಆಗಸ್ಟ್ 2021, 13:05 IST
ಹಾಸನದ ಅಂಬೇಡ್ಕರ್‌ ಭವನದಲ್ಲಿ ದಲಿತ ಸಂಘರ್ಷ ಸಮಿತಿ ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ ಬಣಗಳ ವಿಲೀನ ಕುರಿತು ನಡೆದ ಚರ್ಚೆ ಮತ್ತು ಸಭೆಯಲ್ಲಿ ರಾಜ್ಯ ಸಂಚಾಲಕ ಎಂ.ಸೋಮಶೇಖರ್‌ ಮಾತನಾಡಿದರು.
ಹಾಸನದ ಅಂಬೇಡ್ಕರ್‌ ಭವನದಲ್ಲಿ ದಲಿತ ಸಂಘರ್ಷ ಸಮಿತಿ ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ ಬಣಗಳ ವಿಲೀನ ಕುರಿತು ನಡೆದ ಚರ್ಚೆ ಮತ್ತು ಸಭೆಯಲ್ಲಿ ರಾಜ್ಯ ಸಂಚಾಲಕ ಎಂ.ಸೋಮಶೇಖರ್‌ ಮಾತನಾಡಿದರು.   

ಹಾಸನ: ಡಾ.ಬಿ.ಆರ್‌. ಅಂಬೇಡ್ಕರ್‌ ಸಿದ್ಧಾಂತ ಮತ್ತು ಸಂವಿಧಾನ ವಿರೋಧಿ ಸರ್ಕಾರ ಅಧಿಕಾರದಲ್ಲಿದೆ. ಅದನ್ನು ಕೆಳಗಿಳಿಸಲು ಪರ್ಯಾಯವಾಗಿ ಸ್ವತಂತ್ರ ರಾಜಕೀಯ ಪಕ್ಷ ಕಟ್ಟಲುದಲಿತ ಸಂಘರ್ಷ ಸಮಿತಿ ಬಣಗಳು ಒಂದಾಗಬೇಕಿದೆಎಂದು ದಲಿತ ಸಂಘರ್ಷ ಸಮಿತಿ ರಾಜ್ಯಸಂಚಾಲಕ ಎಂ.ಸೋಮಶೇಖರ್‌ ಹೇಳಿದರು.

ನಗರದ ಅಂಬೇಡ್ಕರ್‌ ಭವನದಲ್ಲಿ ಶನಿವಾರ ಆಯೋಜಿಸಿದ್ದ ದಲಿತ ಸಂಘರ್ಷ ಸಮಿತಿಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ ಬಣಗಳ ವಿಲೀನ ಕುರಿತು ನಡೆದ ಚರ್ಚೆ ಮತ್ತು ಸಭೆ ಉದ್ಘಾಟಿಸಿಮಾತನಾಡಿದರು.

ವಿಭಜನೆಯಾಗಿರುವ ಬಣಗಳು ಒಂದಾಗದಿದ್ದರೆ ಮುಂದಿನ ದಿನಗಳಲ್ಲಿ ಸಂಘಟನೆಗಳು ಶಕ್ತಿಕಳೆದುಕೊಳ್ಳಬೇಕಾಗುತ್ತದೆ. ಇಂದಿನ ಆಡಳಿತ ಸರ್ಕಾರಗಳು, ಪರಿಶಿಷ್ಟ ವಿರೋಧಿ, ರೈತವಿರೋಧಿ ಕಾನೂನುಗಳನ್ನು ಜಾರಿಗೆ ತರುತ್ತಿದೆ. ಹೊಸ ಕಾಯ್ದೆಗಳನ್ನು ಜಾರಿಗೆ ತರುವ ಮೂಲಕಸಂಘಟನೆಗಳ ಶಕ್ತಿ ಕುಂದಿಸುವ ಕೆಲಸ ಆಗುತ್ತಿದೆ ಎಂದು ಆರೋಪಿಸಿದರು.

ADVERTISEMENT

ರಾಜ್ಯದಲ್ಲಿ ಪೆಟ್ರೋಲ್‌, ಡೀಸೆಲ್‌ ಹಾಗೂ ಅಡುಗೆ ಅನಿಲ ಬೆಲೆ ದಿನದಿಂದ ದಿನಕ್ಕೆಏರಿಕೆಯಾಗುತ್ತಿದೆ. ಕೋವಿಡ್‌ ಲಾಕ್‌ಡೌನ್‌ ನಿಂದ ಜನ ಕೆಲಸ ಕಳೆದುಕೊಂಡು ಕಂಗಾಲಾಗಿದ್ದರೆ,ಮತ್ತೊಂದೆಡೆ ಬೆಲೆ ಏರಿಕೆ ಹೊಡೆತ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಜನಸಾಮಾನ್ಯರ ಬಗ್ಗೆಚಿಂತನೆಯೇ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಕೊರೊನಾ ನೆಪವೊಡ್ಡಿ ಪರಿಶಿಷ್ಟ ಜಾತಿ ಮತ್ತು ವರ್ಗಗಳಿಗೆ ಅಗತ್ಯ ಮೂಲ ಸೌಕರ್ಯ ಕಲ್ಪಿಸುವಎಸ್‌ಇಪಿ ಹಾಗೂ ಟಿಎಸ್‌ಪಿ ಯೋಜನೆ ಅನುದಾನ ಕಡಿತ ಮಾಡಲಾಗುತ್ತಿದೆ. ಪರಿಶಿಷ್ಟರಿಗೆ ಸಾಲಸೌಲಭ್ಯ ದೊರೆಯುತ್ತಿಲ್ಲ. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಪರಿಶಿಷ್ಟರಿಗೆ ಮನೆಗಳನ್ನುನೀಡುತ್ತಿಲ್ಲ. ಗ್ರಾಮ ಪಂಚಾಯಿತಿಗಳಲ್ಲಿ ಭ್ರಷ್ಟಾಚಾರ ಮಿತಿ ಮೀರಿದೆ ಎಂದು ಆರೋಪಿಸಿದರು.

ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಪರಿಶಿಷ್ಟ ಜಾತಿ, ವರ್ಗದ ಸಣ್ಣ ಗುತ್ತಿಗೆದಾರರಿದ್ದಾರೆ. ಗುತ್ತಿಗೆನೀಡುವಾಗ ಮೀಸಲಾತಿ ಅನ್ವಯಿಸುತ್ತಿಲ್ಲ. ರಾಜ್ಯಮಟ್ಟದಲ್ಲಿಯೇ ಪ್ಯಾಕೇಜ್‌ ರೀತಿಯಲ್ಲಿ ಗುತ್ತಿಗೆನೀಡುತ್ತಿದ್ದು, ಇದರಿಂದ ಸಣ್ಣ ಗುತ್ತಿಗೆದಾರರಿಗೆ ವಂಚನೆ ಆಗುತ್ತಿದೆ ಎಂದರು.

ದೇಶದಲ್ಲಿ ಪರಿಶಿಷ್ಟರ ಮೇಲೆ ದಬ್ಬಾಳಿಕೆ, ಅತ್ಯಾಚಾರ, ಸಾಮಾಜಿಕ ಬಹಿಷ್ಕಾರ ಪ್ರಕರಣಗಳು ಹೆಚ್ಚುತ್ತಿವೆ. ಸಂಘಟನೆಗಳು ಬಲಿಷ್ಟವಾದರೆ ಸಂವಿಧಾನ ಬದಲಾವಣೆ ಸಾಧ್ಯವಿಲ್ಲ. ಆದರೆ, ಇಂದುಮನುವಾದಿ ಬಿಜೆಪಿ ಪಕ್ಷ ಎಂದು ನಿಂದಿಸಿದವರು, ಅಂಬೇಡ್ಕರ್‌ ನನ್ನ ತಂದೆ ಸಮಾನ ಎಂದವರೇಬಿಜೆಪಿ ಸೇರ್ಪಡೆಯಾಗಿದ್ದಾರೆ ಎಂದು ಪರೋಕ್ಷವಾಗಿ ಶಾಸಕ ಎನ್‌.ಮಹೇಶ್‌ ಅವರನ್ನುಟೀಕಿಸಿದರು.

ರಾಜ್ಯದಲ್ಲಿ ಬಿಜೆಪಿ, ಜೆಡಿಎಸ್‌ ಮತ್ತು ಕಾಂಗ್ರೆಸ್‌ ಪಕ್ಷಗಳಿಗೆ ಪರ್ಯಾಯವಾಗಿ ಒಂದು ಪ್ರಬಲರಾಜಕೀಯ ಪಕ್ಷ ಕಟ್ಟಬೇಕಿದೆ. ದೇಶದ ಜನಸಂಖ್ಯೆಯಲ್ಲಿ ಶೇಕಡಾ 3ರಷ್ಟು ಇರುವವರು ದೇಶಆಳುತ್ತಿದ್ದಾರೆ. ಶೇಕಡಾ 80 ರಷ್ಟಿರುವ ಪರಿಶಿಷ್ಟರು ಇನ್ನೂ ದೌರ್ಜನ್ಯ, ವಂಚನೆಗಳಿಗೆಒಳಗಾಗುತ್ತಲೇ ಇದ್ದೇವೆ ಎಂದು ಬೇಸರ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಸಮಿತಿ ರಾಜ್ಯ ಸಂಘಟನಾ ಸಂಚಾಲಕರಾದ ದೇವದಾಸಯ್ಯ,ಎಂ.ನಾರಾಯಣಸ್ವಾಮಿ, ಸೋಮನಹಳ್ಳಿ ಅಂದಾನಿ, ಮಹಿಳಾ ಘಟಕದ ಸಂಚಾಲಕಿ ಭಾಗ್ಯಮ್ಮ,ಮುಖಂಡರಾದ ವಸಂತ್‌ ಕುಮಾರ್‌, ಕವಾಲಿ ವೆಂಕಟರಮಣಪ್ಪ, ಅನೇಕಲ್‌ ಕೃಷ್ಣಪ್ಪ,ಲಕ್ಷ್ಮೀನಾರಾಯಣ, ದೇವಮ್ಮ, ಚಿಂತಾಮಣಿ, ಶಿವಮೂರ್ತಿ ಭೀಮನಕೆರೆ ಹಾಗೂ ವಿವಿಧ ಜಿಲ್ಲೆಗಳಸಂಚಾಲಕರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.