ADVERTISEMENT

ವಿದ್ಯುತ್ ತಂತಿ ಸರಿಪಡಿಸಲು ರೈತರ ಮನವಿ

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2024, 13:16 IST
Last Updated 27 ಡಿಸೆಂಬರ್ 2024, 13:16 IST
ಹಳೇಬೀಡಿನ ಬೇಲೂರು ರಸ್ತೆ ಬದಿ ಜಮೀನಿನ ಪಕ್ಕದ ಏರಿಯಲ್ಲಿ ಕೈಗೆಟುಕುವ ಸ್ಥಿತಿಯಲ್ಲಿರುವ ವಿದ್ಯುತ್ ತಂತಿ
ಹಳೇಬೀಡಿನ ಬೇಲೂರು ರಸ್ತೆ ಬದಿ ಜಮೀನಿನ ಪಕ್ಕದ ಏರಿಯಲ್ಲಿ ಕೈಗೆಟುಕುವ ಸ್ಥಿತಿಯಲ್ಲಿರುವ ವಿದ್ಯುತ್ ತಂತಿ   

ಹಳೇಬೀಡು: ರೈತರು ಓಡಾಡುವ ಬೇಲೂರು ರಸ್ತೆ ಜಮೀನು ಪಕ್ಕದ ಏರಿಯಲ್ಲಿ ವಿದ್ಯುತ್ ಲೈನ್ ಕೆಳಕ್ಕೆ ಜಗ್ಗುತ್ತಿದ್ದು ಅಪಾಯದ ಸ್ಥಿತಿಯಲ್ಲಿದೆ.

ಏರಿ ಮೇಲೆ ವಿದ್ಯುತ್ ತಂತಿ ಕೈಗೆ ಎಟುಕುವಂತಿದೆ. ಗಿಡ ಗಂಟಿಗಳು ತಂತಿಗೆ ತಗುಲುವಂತೆ ಬೆಳೆಯುತ್ತಿವೆ. ಇವು ಸ್ಪರ್ಶಿಸಿದರೆ ಭೂಮಿ ಮೇಲೆ ವಿದ್ಯುತ್ ಹರಿದು ಅಪಾಯ ಸಂಭವಿಸುವ ಸಾಧ್ಯತೆ ಇದೆ ಎಂದು ರೈತರು ಆತಂಕ ವ್ಯಕ್ತಪಡಿಸಿದರು.

 ವಿದ್ಯುತ್ ಪರಿವರ್ತಕಕ್ಕೆ ಬಂದಿರುವ 11 ಕೆವಿ ಸಾಮರ್ಥ್ಯ ಹೊಂದಿದೆ. ಸೆಸ್ಕ್ ಕಂಪೆನಿ ಎಂಜಿನಿಯರ್‌‌ಗಳಿಗೆ ಹಲವು ಬಾರಿ ತಿಳಿಸಿದರೂ ಕೆಲಸ ಪ್ರಯೋಜನವಾಗಿಲ್ಲ. ಕೂಡಲೆ ಸೆಸ್ಕ್ ಅಧಿಕಾರಿಗಳು ಸರಿಪಡಿಸಬೇಕು ಎಂದು ರೈತ ಈಶ್ವರಪ್ಪ ವಿನಂತಿಸಿಕೊಂಡಿದ್ದಾರೆ.

ADVERTISEMENT

‘ವಿದ್ಯುತ್ ತಂತಿಗಳು ಭೂಮಿಗೆ ಮುಟ್ಟುವ ಸ್ಥಿತಿಗೆ ತಲುಪಿ ವರ್ಷ ಕಳೆದಿದೆ. ತಂತಿಗಳನ್ನು ಬಿಗಿ ಮಾಡದಿದ್ದರೆ ಅಪಾಯ ಸಂಭವಿಸುವ ಸಾಧ್ಯತೆ ಇದೆ. ಈ ಕುರಿತು ಗ್ರಾಮ ಪಂಚಾಯಿತಿ ಅಧಿಕಾರಿಗಳ ಜೊತೆ ಚರ್ಚಿಸುತ್ತೇವೆ. ಅಧ್ಯಕ್ಷರು ಹಾಗೂ ಪಿಡಿಒ ಅವರಿಂದ  ತಂತಿ ಸರಿಪಡಿಸುವ ಕುರಿತು ಸೆಸ್ಕ್ ಕಂಪೆನಿಗೆ ಪತ್ರ ಬರೆಸುತ್ತೇವೆ’ ಎಂದು ಗ್ರಾಮ ಪಂಚಾಯಿತಿ ಸದಸ್ಯ ಸುರೇಶ್.ಎಚ್.ಎಂ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.