ಬೇಲೂರು: ತಾಲ್ಲೂಕಿನ ಅರೇಹಳ್ಳಿ ಹೋಬಳಿಯ ಕಡೇಗರ್ಜೆ ಗ್ರಾಮದ ಸಮೀಪ ಎರಡು ಕಾಡಾನೆಗಳು ಗುರುವಾರ ಕಾದಾಟ ನಡೆಸಿದ್ದು, ಇದರ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಹಿಂಡಿನಿಂದ ಬೇರ್ಪಟ್ಟ ಎರಡು ಕಾಡಾನೆಗಳು ಒಂದಕ್ಕೊಂದು ಬಡಿದಾಡಿಕೊಂಡಿರುವ ವಿಡಿಯೊ ಅನ್ನು ಸ್ಥಳೀಯರು ಚಿತ್ರೀಕರಿಸಿದ್ದಾರೆ. ಒಂದು ಆನೆ ಸೋತು ಓಡಲು ಪ್ರಯತ್ನಿಸಿದರೂ, ಮತ್ತೊಂದು ಆನೆ ಅಟ್ಟಾಡಿಸಿಕೊಂಡು ಸೊಂಡಿಲಿನಿಂದ ಬಡಿದಿದೆ. ಕಾಡಾನೆಗಳ ಕಾದಾಟಕ್ಕೆ ಸಿಲುಕಿ ಅಡಿಕೆ ಸೇರಿದಂತೆ ಇತರೆ ಬೆಳೆಗಳು ಹಾಳಾಗಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.