
ಹಿರೀಸಾವೆ: ಬೆಂಕಿ ಅವಘಡಗಳು ಸಂಭವಿಸಿದಾಗ ನಾಗರಿಕರು ತಕ್ಷಣ ತೆಗೆದುಕೊಳ್ಳಬೇಕಾದ ಎಚ್ಚರಿಕೆ ಮತ್ತು ನಂದಿಸುವ ಕ್ರಮದ ಬಗ್ಗೆ ಚನ್ನರಾಯಪಟ್ಟಣ ಅಗ್ನಿ ಶಾಮಕ ಠಾಣೆಯ ಸಿಬ್ಬಂದಿ ಗುರುವಾರ ಹಿರೀಸಾವೆಯ ಸಮುದಾಯ ಆರೋಗ್ಯ ಕೇಂದ್ರ ಮತ್ತು ಪಿಎಂಶ್ರೀ ಶಾಸಕರ ಮಾದರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಾತ್ಯಕ್ಷಿಕೆ ಮೂಲಕ ತಿಳಿಸಿದರು.
ಕಚೇರಿಯಲ್ಲಿ ಯಂತ್ರೋಪಕರಣಗಳಿಗೆ ಬೆಂಕಿ ಹತ್ತಿಕೊಂಡಾಗ, ಅಗ್ನಿನಂದಕಗಳನ್ನು ಬಳಸಿ ಬೆಂಕಿಯನ್ನು ನಂದಿಸುವ ಬಗ್ಗೆ ಮತ್ತು ಮನೆಯಲ್ಲಿ ಎಲ್‌ಪಿಜಿ ಗ್ಯಾಸ್, ವಿದ್ಯುತ್‌ನಿಂದ ಆಕಸ್ಮಿಕ ಬೆಂಕಿ ಉಂಟಾದರೆ ಹೇಗೆ ನಂದಿಸಬಹುದು ಹಾಗೂ ಮನೆಯ ಹೊರಭಾಗದಲ್ಲಿ ಉಂಟಾದ ಬೆಂಕಿ ಅವಘಡಗಳನ್ನು ನಂದಿಸಲು ಅನುಸರಿಸಬೇಕಾದ ಕ್ರಮಗಳ ಬಗ್ಗೆ ಪ್ರಾಯೋಗಿಕವಾಗಿ ಮಾಹಿತಿ ನೀಡಿದರು.
ಚನ್ನರಾಯಪಟ್ಟಣ ಅಗ್ನಿ ಶಾಮಕ ಠಾಣೆ ಸಹಾಯಕ ಠಾಣಾಧಿಕಾರಿ ಕೆ.ಎಚ್. ಪುಟ್ಟಸ್ವಾಮಿ ನೇತೃತ್ವದಲ್ಲಿ ಸಿಬ್ಬಂದಿ ಜಗದೀಶ್, ಕುಮಾರ್, ಶಿವಾನಂದ ವಡೇರಾ, ಗಂಗಾಧರ್, ಯೋಗಾನಂದ ಅಗ್ನಿ ಅವಘಡ ನಿಯಂತ್ರಣದ ಬಗ್ಗೆ ಜಾಗೃತಿ ಕಾರ್ಯಕ್ರಮ ನಡೆಸಿಕೊಟ್ಟರು. ಸರ್ಕಾರಿ ಆಸ್ಪತ್ರೆಯ ಸಿಬ್ಬಂದಿ, ಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.