ಅರಸೀಕೆರೆ: ರಾಜ್ಯದ ಶಕ್ತಿ ಯೋಜನೆಯೂ 500 ಕೋಟಿ ಜನಕ್ಕೆ ಪ್ರಯೋಜನವಾಗಿದ್ದು ಸಂಭ್ರಮದ ಸಂಗತಿಯಾಗಿದೆ. ವಿಶ್ವದಲ್ಲಿಯೇ ಮಹಿಳೆಯರಿಗೆ ಸರ್ಕಾರಿ ಬಸ್‌ಗಳಲ್ಲಿ ಉಚಿತ ಪ್ರಯಾಣ ನೀಡಿದ ಕಾಂಗ್ರೆಸ್ ಸರ್ಕಾರ ನಮ್ಮದಾಗಿದೆ ಎಂದು ಶಾಸಕ ಕೆ.ಎಂ.ಶಿವಲಿಂಗೇಗೌಡ ಹೇಳಿದರು.
ನಗರದ ತಾಲ್ಲೂಕು ಕಚೇರಿಯ ಆವರಣದಲ್ಲಿ ನಡೆದ ಸರ್ಕಾರದ ಶಕ್ತಿ ಯೋಜನೆಯ ಫಲಾನುಭವಿಗಳ ಸಂಖ್ಯೆ 500 ಕೋಟಿ ಗಡಿ ದಾಟಿರುವ ಪ್ರಯುಕ್ತ ನಡೆದ ಸಂಭ್ರಮಾಚರಣೆಯಲ್ಲಿ ಪಾಲ್ಘೊಂಡು ಮಾತನಾಡಿದರು.
ಶಕ್ತಿ ಯೋಜನೆಯೂ 2023 ರ ಜೂನ್ 11 ರಂದು ಆರಂಭವಾಗಿದ್ದು ಇಂದಿಗೆ 500 ಕೋಟಿ ಯೋಜನೆಯ ಅನೂಕೂಲತೆಯನ್ನು ಪಡೆದಿದ್ದಾರೆ.ಈ ಯೋಜನೆ ಆರ್ಥಿಕವಾಗಿ ಹಿಂದುಳಿದ ಮಹಿಳೆಯರಿಗೆ ಇದು ದೊಡ್ಡ ಸಹಾಯವಾಗಿದ್ದು ಮಹಿಳೆಯರ ಜೀವನ ಮಟ್ಟವನ್ನು ಸುಧಾರಿಸಲು ಸಹಾಯವಾಗಿದೆ.ಈ ಯೋಜನೆಯಿಂದ ಮಹಿಳೆಯರು ತಮ್ಮ ಕೆಲಸ , ಶಿಕ್ಷಣ , ಮತ್ತು ಇತರ ಅಗತ್ಯ ಚಟುವಟಿಕೆಗಳಿಗೆ ಸುಲಭವಾಗಿ ಮತ್ತು ವೆಚ್ಚವಿಲ್ಲದೆ ಪ್ರಯಾಣಿಸಲು ಸಾದ್ಯವಾಗಿದ್ದು ನಮ್ಮ ಸರ್ಕಾರ ಇರುವರೆರೆಗೂ ಶಕ್ತಿ ಯೋಜನೆ ಮುಂದುವರಿಯಲಿದೆ
ಗ್ಯಾರಂಟಿಗಳಿಂದ ಯಾವ ಅಭಿವೃದ್ದಿ ಕಾರ್ಯಗಳು ವಿಳಂಬವಾಗದೇ ಎಲ್ಲ ಅಭಿವೃದ್ದಿ ಕಾರ್ಯಗಳು ಪ್ರಗತಿಯ ಪಂತದಲ್ಲಿ ಸಾಗುತ್ತ ಇದೆ. ಶಕ್ತಿ ಯೋಜನೆಯಿಂದ ನೌಕರರು ಹಾಗೂ ಸಿಬ್ಬಂದಿಗಳ ವೇತನಗಳನ್ನು ಬಾಕಿ ಉಳಿಸಿಕೊಳ್ಳದೇ ಆಯಾಯಾ ತಿಂಗಳು ಅಕೌಂಟ್ ಗೆ ಜಮಾವಾಗಿದೆ ಎಂದರು.
ಗ್ಯಾರಂಟಿ ಯೋಜನೆ ಸಮಿತಿಯ ಅಧ್ಯಕ್ಷ ಗೀಜಿಹಳ್ಳಿ ಧರ್ಮಶೇಖರ್ ಮಾತನಾಡಿ ಶಕ್ತಿ ಯೋಜನೆಯ ಯಶಸ್ಸನ್ನು ಆಚರಿಸಲು ಸರ್ಕಾರ ವಿಶೇಷ ಕಾರ್ಯಕ್ರಮ ಆಯೋಜಿಸಿದ್ದು ಸಂಭ್ರಮಿಸಲಾಗುತ್ತಿದೆ.ತಾಲ್ಲೂಕಿನಲ್ಲಿ ಶಕ್ತಿ ಯೋಜನೆಯೂ 99 ರಷ್ಟು ಸಾಧನೆಯಾಗಿದ್ದು ನಮ್ಮ ಪದಾಧಿಕಾರಿಗಳು ಹಾಗೂ ಅಧಿಕಾರಿಗಳು ಎಲ್ಲರಿಗೂ ತಲುಪಿಸುವಲ್ಲಿ ಶ್ರಮ ವಹಿಸಿದ್ದಾರೆ. ಸರ್ಕಾರದ ಯೋಜನೆಯಿಂದ ಬಡ ಹಾಗೂ ಮಧ್ಯಮ ವರ್ಗದ ಮಹಿಳೆಯರಿಗೆ ಸಾಕಷ್ಟು ಅನೂಕೂಲಗಳಾಗಿವೆ ಎಂದು ಹೇಳಿದರು.
ತಹಶೀಲ್ದಾರ್ ಸಂತೋಷ್‌ಕುಮಾರ್ , ನಗರಸಭೆ ಅಧ್ಯಕ್ಷ ಎಂ.ಸಮೀವುಲ್ಲಾ ಉಪಾಧ್ಯಕ್ಷ ಮನೋಹರ್ ಮೇಸ್ತ್ರೀ , ಕೆ.ಎಸ್.ಆರ್.ಟಿ.ಸಿ ಡಿಪೋ ವ್ಯವಸ್ಥಾಪಕ ಕೃಷ್ಣಪ್ಪ ಸೇರಿದಂತೆ ಗ್ಯಾರಂಟಿ ಯೋಜನೆಯ ಸದಸ್ಯರು ಹಾಗೂ ಅಧಿಕಾರಿಗಳು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.