ADVERTISEMENT

ಹಾಸನ: ಇಂಧನ ದರ ಏರಿಕೆ: ಸಂಕಷ್ಟದಲ್ಲಿ ಆಟೊ ಚಾಲಕರು

‌ಜೀವನ ನಿರ್ವಹಣೆ ಸಾಧ್ಯವಾಗದೆ ಬೇರೆ ವೃತ್ತಿಯತ್ತ ಹೊರಳುತ್ತಿರುವ ಹಲವರು

​ಪ್ರಜಾವಾಣಿ ವಾರ್ತೆ
Published 29 ನವೆಂಬರ್ 2021, 5:56 IST
Last Updated 29 ನವೆಂಬರ್ 2021, 5:56 IST
ರಾಜೇಶ್‌
ರಾಜೇಶ್‌   

ಹಾಸನ: ಕೋವಿಡ್‌ ಲಾಕ್‌ಡೌನ್‌ ನಿಂದ ತತ್ತರಿಸಿದ್ದ ಆಟೊ ಚಾಲಕರಿಗೆ ಈಗ ಪೆಟ್ರೋಲ್‌, ಡೀಸೆಲ್‌ ಬೆಲೆ ಏರಿಕೆ ಮತ್ತಷ್ಟು ಸಂಕಷ್ಟಕ್ಕೆ ಸಿಲುಕುವಂತೆ ಮಾಡಿದೆ. ಜೀವನ ನಿರ್ವಹಣೆ ಸಾಧ್ಯವಾಗದೇಅನೇಕರು ತಮ್ಮ ವೃತ್ತಿ ಬಿಟ್ಟು ಬೇರೆವೃತ್ತಿ ಕಡೆ ಹೊರಳುತ್ತಿದ್ದಾರೆ.

ಟ್ಯಾಕ್ಸಿ, ಟ್ರಾವೆಲ್ಸ್‌, ಆಟೊ ಬಾಡಿಗೆ ದರ ಏರಿಕೆಯಾಗಿದ್ದು, ಪ್ರವಾಸಿಗರು ಹಾಗೂ ಜನರುಹೈರಾಣಾಗಿದ್ದಾರೆ. ಪ್ರವಾಸಿ ತಾಣಗಳಿಗೆ ಪ್ರವಾಸಿಗರು ಹಾಗೂ ಪ್ರಯಾಣಿಕರು ದೂರದ ಊರು,ಶುಭ ಕಾರ್ಯಕ್ರಮ, ಧಾರ್ಮಿಕ ಕ್ಷೇತ್ರಗಳು, ಯಾತ್ರೆ ಹಾಗೂ ಪ್ರವಾಸಿ ತಾಣಗಳಿಗೆ ಭೇಟಿ ನೀಡಲುಟ್ಯಾಕ್ಸಿ, ಟ್ರಾವೆಲ್ಸ್‌ ಅವಲಂಬಿಸಿದ್ದಾರೆ.

ಜಿಲ್ಲೆಯಲ್ಲಿ 13,200 ಆಟೊಗಳಿವೆ. ಹಾಸನ ನಗರದಲ್ಲಿಯೇ ನಿತ್ಯ 3,625 ಆಟೊಗಳು ಓಡುತ್ತಿವೆ. ಪೆಟ್ರೋಲ್‌, ಡೀಸೆಲ್‌ ಹಾಗೂ ಗ್ಯಾಸ್‌ ಬೆಲೆ ಹೆಚ್ಚಾದರೂ ಆಟೊ ಪ್ರಯಾಣ ದರಹೆಚ್ಚಿಸದೇ ಹಳೆಯ ದರದಲ್ಲೇ ವಾಹನ ಓಡಿಸುತ್ತಿದ್ದಾರೆ. ಚಾಲಕರು ಹೆಚ್ಚಿನ ಹಣ ಕೇಳಿದರೆಪ್ರಯಾಣಿಕರು ವಾಗ್ವಾದಕ್ಕೆ ಇಳಿಯುತ್ತಾರೆ. ಅಲ್ಲದೇ ಹೆಚ್ಚು ದರ ಹೇಳಿದರೆ ಆಟೊ ಹತ್ತಲೂ ಹಿಂದೆ,ಮುಂದೆ ನೋಡುವ ಸ್ಥಿತಿ ನಿರ್ಮಾಣವಾಗಿದೆ.

ADVERTISEMENT

‘ಪ್ರತಿನಿತ್ಯ 3–4 ಬಾಡಿಗೆ ಸಿಗುವುದೇ ಕಷ್ಟ. ಹೀಗಿರುವಾಗ ಹೆಚ್ಚಿಗೆ ಬಾಡಿಗೆ ಕೇಳಿದರೆ ಜನರುಬರುವುದೇ ಇಲ್ಲ, ಹೀಗಾಗಿ ದರ ಹೆಚ್ಚಳ ಮಾಡಿಲ್ಲ. ‌ಈಚೆಗೆ ಆಟೊ ಚಾಲಕರು ಗ್ಯಾಸ್‌ಆಟೊಗಳನ್ನೇ ಖರೀದಿ ಮಾಡುತ್ತಿದ್ದಾರೆ’ ಎನ್ನುತ್ತಾರೆ ಚಾಲಕ ರಮೇಶ್.

ನಗರ ಸುತ್ತಮುತ್ತಲ ಕೆಲ ಗ್ರಾಮಗಳಿಂದ ವಿದ್ಯಾರ್ಥಿಗಳು ಶಾಲೆಗೆ ಆಟೊಗಳಲ್ಲಿ ಬರುತ್ತಿದ್ದರು.ಬಾಡಿಗೆ ದರ ದುಪ್ಪಟ್ಟು ಹೆಚ್ಚಳ ಮಾಡಿರುವುದರಿಂದ ಪೋಷಕರು ತಮ್ಮ ಮಕ್ಕಳನ್ನು ಬೈಕ್‌ನಲ್ಲಿಶಾಲೆಗಳಿಗೆ ಕರೆದುಕೊಂಡು ಬರುತ್ತಿದ್ದಾರೆ.

ಜಿಲ್ಲೆಯಲ್ಲಿ ಆಟೊಗಳು ಮೀಟರ್‌ ರಹಿತವಾಗಿ ಓಡುತ್ತವೆ. ಆಟೊಗಳಿಗೆ ಮೀಟರ್ ಅಳವಡಿಸುವಪ್ರಸ್ತಾವ ಇದ್ದರೂ ಪೊಲೀಸರು ನಿಯಮವನ್ನೂ ಜಾರಿಗೊಳಿಸಿಲ್ಲ. ಕೋವಿಡ್‌ ಲಾಕ್‌ಡೌನ್ಸಂದರ್ಭದಲ್ಲಿ ಅನೇಕ ಚಾಲಕರುವೃತ್ತಿ ಬಿಟ್ಟು ಬೇರೆಡೆಗೆ ಮುಖ ಮಾಡಿದ್ದರು.
ಸಾಲದ ಕಂತು,ವಿಮೆ ಕಟ್ಟಲು ಪರದಾಡುವಸ್ಥಿತಿ ಇದೆ. ಕೋವಿಡ್‌ ಲಾಕ್‌ಡೌನ್‌ ಗೂ ಮುಂಚೆ ಖಾಸಗಿ ಶಾಲೆಗಳಲ್ಲಿತಮ್ಮ ಮಕ್ಕಳನ್ನು ಓದಿಸುತ್ತಿದ್ದವ ಶೇ 50ರಷ್ಟು ಮಂದಿ ಇಂದು ತಮ್ಮ ಮಕ್ಕಳನ್ನು ಸರ್ಕಾರಿಶಾಲೆಗೆ ದಾಖಲಿಸಿದ್ದಾರೆ.

ಕೋವಿಡ್ ಸಂಕಷ್ಟದ ಜತೆಗೆ ಇಂಧನ ದರ ಏರಿಕೆಯಾಗಿರುವುದು ಆಟೊ ಚಾಲಕರಿಗೆಬೆಂಕಿಯಿಂದ ಬಾಣಲೆಗೆಬಿದ್ದಂತಾಗಿದೆ. ಅರಕಲಗೂಡು‌ ತಾಲ್ಲೂಕಿನಲ್ಲಿಕನಿಷ್ಠ ದರಹೆಚ್ಚಳವಾಗಿರುವ ಕಾರಣ ಜನರುಆಟೊ ಹತ್ತಲು ಹಿಂದೆ ಮುಂದೆ ನೋಡುತ್ತಾರೆ. ಬಹಳಷ್ಟುಜನರು ಸ್ವಂತ ವಾಹನ ಹೊಂದಿರುವ ಕಾರಣ ಆಟೊ ಪ್ರಯಾಣಿಕರ ಸಂಖ್ಯೆಯಲ್ಲಿ ಇಳಿಮುಖವಾಗಿದೆ.

‘ಇಂಧನ ದರ ಗಗನಕ್ಕೇರಿದ ಕಾರಣಪ್ರಯಾಣದ ದರ ಏರಿಕೆಯೂ ಅನಿವಾರ್ಯವಾಗಿದೆ. ಇದರಪರಿಣಾಮ ನಿತ್ಯದ ಸಂಪಾದನೆಯ ಮೇಲೆ ಹೊಡೆತ ಬಿದ್ದಿದೆ, ಬೆಳಗಿನಿಂದ ಸಂಜೆಯವರೆಗೆದುಡಿದರೂ ₹ 300 ಸಂಪಾದನೆ ಆಗುತ್ತಿಲ್ಲ. ಇದರಿಂದ ವಾಹನಕ್ಕೆ ಇಂಧನಹಾಕಿಸುವುದೋ, ಕುಟುಂಬನಿರ್ವಹಣೆ ನಡೆಸುವುದೋ, ವಾಹನದ ಸಾಲದ ಮೇಲಿನ ಬಡ್ಡಿತುಂಬುವುದೋ ತಿಳಿಯುತ್ತಿಲ್ಲ. ಹೀಗಾಗಿ ಆಟೋಗಳನ್ನು ಮಾರಿ ಬೇರೆ ಉದ್ಯೋಗ ಅರಸುವತ್ತ ಬಹಳಷ್ಟು ಚಾಲಕರು ಚಿಂತನೆ ನಡೆಸಿದ್ದಾರೆ’ ಎಂದು ಅರಕಲಗೂಡು ಪಟ್ಟಣದ ಆಟೊ ಚಾಲಕರ ಸಂಘದ ಅಧ್ಯಕ್ಷ ಮಂಜುನಾಥ್ ಅಳಲು ತೋಡಿಕೊಂಡರು.

‘ಸಂಪಾದನೆ ಕಡಿಮೆಯಾಗಿದೆ. ತರಕಾರಿ, ಹಾಲು, ದಿನಸಿ ಪದಾರ್ಥ ಸೇರಿದಂತೆ ಎಲ್ಲ ಅಗತ್ಯವಸ್ತುಗಳ ಬೆಲೆ ಏರಿಕೆಯಾಗುತ್ತಿದ್ದು, ಚಾಲಕರ ಕುಟುಂಬದ ಮೇಲೆ ತೀವ್ರ ಪರಿಣಾಮ ಉಂಟುಮಾಡುತ್ತಿದೆ’ ಎಂದು ಚಾಲಕ ನಾಗರಾಜ್ ನೋವು ತೋಡಿ ಕೊಂಡರು.

ಹಳೇಬೀಡಿಗೆ ಬರುವ ಪ್ರವಾಸಿಗರು ಪ್ರವಾಸಿ ತಾಣಗಳಿಗೆ ತೆರಳಲು ಆಟೊ ಬಾಡಿಗೆಕೇಳುತ್ತಿದ್ದರು.ಆದರೆ ಈಗ ಊರಿನಿಂದ ಬಾಡಿಗೆ ವಾಹನ, ಸ್ವಂತ ವಾಹನ ಮಾಡಿಕೊಂಡು ಬಂದುಪ್ರವಾಸಿ ತಾಣ ವೀಕ್ಷಣೆ ಮಾಡುತ್ತಿದ್ದಾರೆ. ಇದರಿಂದ ಆಟೊಗಳಿಗೆ ಬಾಡಿಗೆ ಕಡಿಮೆ ಆಗಿದೆಎನ್ನುತ್ತಾರೆ ಚಾಲಕರು

ಚನ್ನರಾಯಪಟ್ಟಣ ತಾಲ್ಲೂಕು ಕೇಂದ್ರದಲ್ಲಿ700 ಕ್ಕೂ ಹೆಚ್ಚು ಆಟೊಗಳಿವೆ. ಅವುಗಳಲ್ಲಿ ಬಹುತೇಕ ಆಟೊಗಳಿಗೆ ಗ್ಯಾಸ್ ಅಳವಡಿಸಲಾಗಿದೆ. ಪಟ್ಟಣದಲ್ಲಿ ಕನಿಷ್ಠ ದರ ₹ 30 ಪಡೆಯುತ್ತಾರೆ.

ಆಟೊ ಗ್ಯಾಸ್ ದರ ಹೆಚ್ಚಳವಾಗಿದ್ದರೂ ಚಾಲಕರಿಗೆ ಲಾಭವಾಗಿಲ್ಲ. ಕೋವಿಡ್ ಸಂದರ್ಭದಲ್ಲಿ ಆರ್ಥಿಕವಾಗಿ ತೊಂದರೆ ಅನುಭವಿಸಿದರು.
ಬೇರೆ ವೃತ್ತಿ ಗೊತ್ತಿಲ್ಲದಿರುವುದರಿಂದ ಜೀವನ ನಿರ್ವಹಣೆಗೆ ಆಟೊ ವೃತ್ತಿ ಅವಲಂಬಿಸ ಲಾಗಿದೆ ಎನ್ನುತ್ತಾರೆ ಆಟೊ ಚಾಲಕರು.

ನಿರ್ವಹಣೆ: ಕೆ.ಎಸ್‌.ಸುನಿಲ್‌. ಪೂರಕ ಮಾಹಿತಿ; ಜೆ.ಎಸ್‌.ಮಹೇಶ್‌, ಜಿ.ಚಂದ್ರಶೇಖರ್,ಎಚ್.ಎಸ್.ಅನಿಲ್ ಕುಮಾರ್, ಸಿದ್ದರಾಜು, ರಂಗನಾಥ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.