ಚನ್ನರಾಯಪಟ್ಟಣ: ಪಟ್ಟಣದ ಪುರಸಭಾ ವ್ಯಾಪ್ತಿಯಲ್ಲಿ ಗಣಪತಿ ಮೂರ್ತಿಯನ್ನು ವಿಸರ್ಜಿಸಲು ಅನುಕೂಲವಾಗುವಂತೆ ನಾಲ್ಕು ಕಡೆ ವಾಹನದಲ್ಲಿ ಅಳವಡಿಸಿದ್ದ ಮೊಬೈಲ್ ತೊಟ್ಟಿಯಲ್ಲಿ ಶನಿವಾರ ಸಂಜೆ ಭಕ್ತರು ಗಣಪತಿ ವಿಸರ್ಜಿಸಿದರು.
ಕೋಟೆಪ್ರದೇಶ, ಮೈಸೂರುರಸ್ತೆ, ಗಾಂಧಿವೃತ್ತ ಮತ್ತು ರಾಘವೇಂದ್ರ ಸಾ ಮಿಲ್ ರಸ್ತೆ ಭಾಗದಲ್ಲಿ ವ್ಯವಸ್ಥೆ ಕಲ್ಪಿಸಲಾಗಿತ್ತು. ಶನಿವಾರ ಸಂಜೆ 4 ರಿಂದ ರಾತ್ರಿ 11ವರೆಗೆ ಮೂರ್ತಿ ವಿಸರ್ಜನೆ ಮಾಡಲಾಯಿತು. ದೊಡ್ಡಗಣಪತಿ ಮೂರ್ತಿ ವಿಸರ್ಜಿಸಲು ಅಮಾನಿಕೆರೆ ಅಂಚಿನಲ್ಲಿ ಹೊಂಡ ನಿರ್ಮಿಸಿ ಸುತ್ತಲೂ ಬ್ಯಾರಿಕೇಡ್ ಅಳವಡಿಸಲಾಗಿದೆ. ದೊಡ್ಡ ಪ್ರಮಾಣದ ಗಣಪತಿ ಮೂರ್ತಿಯನ್ನು ವಿಸರ್ಜಿಸಲು ಒಂದು ತಿಂಗಳು ಅವಕಾಶ ಇದೆ.
ಪುರಸಭೆಯ ಅಧ್ಯಕ್ಷೆ ಕೆ.ಎನ್. ಬನಶಂಕರಿ ಮಾತನಾಡಿ, ‘ಪ್ಲಾಸ್ಟರ್ ಆಫ್ ಪ್ಯಾರಿಸ್ (ಪಿಒಪಿ)ಗಣಪತಿ ಪ್ರತಿಷ್ಟಾಪನೆ ಮಾಡುವುದರಿಂದ ಪರಿಸರ ಮತ್ತು ಆರೋಗ್ಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವುದರಿಂದ ಪಿಒಪಿ ಗಣಪತಿ ಪ್ರತಿಷ್ಠಾಪನೆ ಮಾಡಲು ಸರ್ಕಾರ ಅವಕಾಶ ಒದಗಿಸಿಲ್ಲ.
‘ತ್ಯಾಜ್ಯವನ್ನು ಎಲ್ಲೆಂದರಲ್ಲಿ ಎಸೆಯದಂತೆ ತಡೆಯುವುದು, ಸ್ವಚ್ಛತೆ ಕಾಪಾಡುವುದು ಸೇರಿದಂತೆ ಜಲಮೂಲ ಸಂರಕ್ಷಿಸುವುದು ಇದರ ಉದ್ದೇಶ’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.