ಅರಸೀಕೆರೆ: ನಗರದ ಕುಂಬಾರ ಬೀದಿ ಶ್ರೀ ವಿದ್ಯಾ ಗಣಪತಿ ಗೆಳೆಯರ ಬಳಗದಿಂದ 13ನೇ ವರ್ಷದ ಅದ್ದೂರಿ ಗಣೇಶ ಮಹೋತ್ಸವದ ಅಂಗವಾಗಿ ಶುಕ್ರವಾರ ಸಾಮೂಹಿಕ ಅನ್ನ ಸಂತರ್ಪಣಾ ಕಾರ್ಯಕ್ರಮವು ನೆರವೇರಿತು.
ಶ್ರೀ ವಿಘ್ನ ನಿವಾರಕನಿಗೆ ವಿಶೇಷ ಅಲಂಕಾರದೊಂದಿಗೆ ಮಧ್ಯಾಹ್ನ ನೂರಾರು ಭಕ್ತರ ಸಮ್ಮುಖದಲ್ಲಿ ಮಹಾ ಮಂಗಳಾರತಿ ನೆರವೇರಿಸಲಾಯಿತು. ತೀರ್ಥ ಪ್ರಸಾದ ವಿನಿಯೋಗದ ನಂತರ ಅನ್ನ ಸಂತರ್ಪಣಾ ಕಾರ್ಯಕ್ರಮಕ್ಕೆ ಗೃಹಮಂಡಳಿ ಅಧ್ಯಕ್ಷ ಶಾಸಕ ಕೆ.ಎಂ.ಶಿವಲಿಂಗೇಗೌಡ ವಿಧ್ಯುಕ್ತ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು ‘ಹಿಂದೂ ಸಂಪ್ರದಾಯಗಳಲ್ಲಿ ಪೂಜೆ ಪುನಸ್ಕಾರದೊಂದಿಗೆ ಗಣಪತಿ ಮಹೋತ್ಸವವು ಪ್ರಮುಖ ಆಚರಣೆಯಾಗಿದೆ. ಈ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಹತ್ತಾರು ಕುಟುಂಬಗಳು ಹಾಗೂ ನೂರಾರು ಭಕ್ತರು ಒಡಗೂಡಿ ಅನ್ನದಾನ ಮಾಡಿದಾಗ ಅವರಲ್ಲಿ ಪ್ರೀತಿ, ಸ್ನೇಹ ಮೂಡುತ್ತವೆ. ಇದರಿಂದ ಮನಸ್ಸಿಗೆ ಸಂತೋಷ, ನೆಮ್ಮದಿ ಉಂಟಾಗಿ, ನಾವೆಲ್ಲ ಒಂದು ಎಂಬ ಮನೋಭಾವನೆ ಮೂಡುತ್ತದೆ’ ಎಂದರು.
ಪತ್ರಕರ್ತ ಬಸವರಾಜು ಮಾತನಾಡಿ ಸತತ 13 ವರ್ಷಗಳಿಂದ ಗಣಪತಿ ಮಹೋತ್ಸವ ನಡೆಸುತ್ತಿದ್ದು ಈ ಬೀದಿಯಲ್ಲಿ ಸಹೋದರತ್ವ ಮನೋಭಾವನೆ ಮೂಡುವಲ್ಲಿ ಸಹಕಾರಿಯಾಗಿದೆ ಎಂದು ಹೇಳಿದರು.
ಪ್ರತಿ ಮನೆಯ ಸದಸ್ಯರು ಅಡುಗೆ ತಯಾರಿಯಿಂದ ಹಿಡಿದು ಬಡಿಸುವವರೆಗೆ ಒಗ್ಗಟ್ಟಾಗಿ ಸೇರಿದ್ದು ವಿಶೇಷವಾಗಿತ್ತು.
ನಗರಸಭಾ ಅಧ್ಯಕ್ಷರಾದ ಸಮೀವುಲ್ಲಾ, ಉಪಾಧ್ಯಕ್ಷ ಮನೋಹರ್ ಮೇಸ್ತ್ರಿ, ಸದಸ್ಯರಾದ ಶುಭ ಮನೋಜ್ ಕುಮಾರ್, ಬಿ.ಎನ್.ವಿದ್ಯಾಧರ್, ಕರ್ನಾಟಕ ರಕ್ಷಣಾ ವೇದಿಕೆಯ ತಾಲ್ಲೂಕು ಅಧ್ಯಕ್ಷ ಎ.ಜಿ.ಕಿರಣ್‌ಕುಮಾರ್, ಬಿಎಸ್‌ಎಫ್ ಮಾಜಿ ಯೋಧರಾದ ಆಶಾ ತಿಮ್ಮಣ್ಣ, ಪುನೀತ್ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.