ADVERTISEMENT

‘ಕರ್ತವ್ಯಕ್ಕೆ ಮೊದಲ ಆದ್ಯತೆ ನೀಡಿ’

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2020, 7:31 IST
Last Updated 15 ಸೆಪ್ಟೆಂಬರ್ 2020, 7:31 IST
ಕೊಣನೂರಿನ ನಾಡ ಕಚೇರಿಗೆ ದಿಢೀರ್ ಭೇಟಿ ನೀಡಿದ ಶಾಸಕ ಎ.ಟಿ.ರಾಮಸ್ವಾಮಿ ಹಾಜರಾತಿ ಪುಸ್ತಕವನ್ನು ಪರಿಶೀಲಿಸಿದರು
ಕೊಣನೂರಿನ ನಾಡ ಕಚೇರಿಗೆ ದಿಢೀರ್ ಭೇಟಿ ನೀಡಿದ ಶಾಸಕ ಎ.ಟಿ.ರಾಮಸ್ವಾಮಿ ಹಾಜರಾತಿ ಪುಸ್ತಕವನ್ನು ಪರಿಶೀಲಿಸಿದರು   

ಕೊಣನೂರು: ಕಚೇರಿ ಕೆಲಸದ ಸಮಯದಲ್ಲಿ ಇಲ್ಲಿನ ನಾಟಕಚೇರಿಯಲ್ಲಿ ಸಿಬ್ಬಂದಿ ಇಲ್ಲದೆ ಇರುವುದ‌ನ್ನು ಕಂಡ ಶಾಸಕ ಎ.ಟಿ.ರಾಮಸ್ವಾಮಿ ಸಿಬ್ಬಂದಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ಸೋಮವಾರ ಬೆಳಿಗ್ಗೆ 10.30ಕ್ಕೆ ಕೊಣನೂರಿನ ನಾಡಕಚೇರಿಗೆ ದಿಢೀರ್ ಭೇಟಿ ನೀಡಿದಾಗ ಗ್ರಾಮ ಸೇವಕರೊಬ್ಬರನ್ನು ಹೊರತುಪಡಿಸಿ ಬೇರಾವುದೇ ಅಧಿಕಾರಿಗಳು ಕಚೇರಿಯಲ್ಲಿ ಇರಲಿಲ್ಲ.

‘ಇಷ್ಟು ಹೊತ್ತಾದರೂ ಅಧಿಕಾರಿಗಳು ಕಚೇರಿಗೆ ಬರದೆ ಇರುವುದು ಬೇಜವಾಬ್ದಾರಿತನ ಪ್ರದರ್ಶಿಸುತ್ತದೆ. ಬೆಳಿಗ್ಗೆಯಿಂದ ಕಚೇರಿ ಬಳಿ ಕಾಯುವ ಸಾರ್ವಜನಿಕರು ನಿಮ್ಮನ್ನೂ ಕಾಯಬೇಕೆ? ಸಣ್ಣಪುಟ್ಟ ಕೆಲಸಗಳಿಗೂ ರೈತರನ್ನು ಕಚೇರಿಗೆ ಪದೇ ಪದೇ ಬರುವಂತೆ ಹೇಳುವ ಬಗ್ಗೆ ದೂರು ಬಂದಿದೆ. ನಿಮ್ಮ ಕಚೇರಿಯಲ್ಲಿ ಆಗುವ ತಪ್ಪುಗಳಿಗೆ ರೈತರನ್ನೇಕೆ ಅಲೆದಾಡಿ ಸುತ್ತೀರಿ ಎಂದು ಗ್ರಾಮಲೆಕ್ಕಿಗ ಮೋಹನ್ ನಾಯ್ಕ ಅವರನ್ನು ‍ಪ್ರಶ್ನಿಸಿದರು.

ADVERTISEMENT

ಸಾಮಾಜಿಕ ವೇತನ ಕುರಿತಂತೆ ದೂರುಗಳು ಬಂದಿದ್ದು, ಅದನ್ನು ಸರಿಪಡಿಸಬೇಕು. ಕಚೇರಿಯ ಹಾಜರಾತಿ ಪುಸ್ತಕವನ್ನು ಪರಿಶೀಲಿಸಿ ಎಚ್ಚರಿಕೆ ನೀಡಿ ಕಚೇರಿಗೆ ಬಂದ ತಕ್ಷಣ ಹಾಜರಾತಿ ಪುಸ್ತಕದಲ್ಲಿ ಸಹಿಮಾಡಿ ನಂತರ ಜನರ ಕೆಲಸ ಮಾಡಬೇಕು ಎಂದು ತಾಕೀತು ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.