ADVERTISEMENT

ಕೊಣನೂರು: ಅರ್ಧಗಂಟೆ ಉತ್ತಮ ‌ಮಳೆ

​ಪ್ರಜಾವಾಣಿ ವಾರ್ತೆ
Published 7 ಮೇ 2025, 14:16 IST
Last Updated 7 ಮೇ 2025, 14:16 IST
ಮಳೆಯಿಂದಾಗಿ ಕೊಣನೂರು ಹೋಬಳಿಯ ಸಿದ್ದಾಪುರ ಗೇಟ್‌ನ ಸೋಮವಾರಪೇಟ-ಮಾಕುಟ್ಟ ರಾಜ್ಯ ಹೆದ್ದಾರಿಯಲ್ಲಿ ಕೆಲಕಾಲ ವಾಹನ ಸಂಚಾರ ಸ್ಥಗಿತವಾಗಿತ್ತು
ಮಳೆಯಿಂದಾಗಿ ಕೊಣನೂರು ಹೋಬಳಿಯ ಸಿದ್ದಾಪುರ ಗೇಟ್‌ನ ಸೋಮವಾರಪೇಟ-ಮಾಕುಟ್ಟ ರಾಜ್ಯ ಹೆದ್ದಾರಿಯಲ್ಲಿ ಕೆಲಕಾಲ ವಾಹನ ಸಂಚಾರ ಸ್ಥಗಿತವಾಗಿತ್ತು   

‌‌ಕೊಣನೂರು: ಹೋಬಳಿಯ ಕೆಲಭಾಗದಲ್ಲಿ ಉತ್ತಮ ಮಳೆ ಸುರಿದಿದ್ದು, ಹೊಗೆಸೊಪ್ಪು ಬೆಳೆಗಾರರಲ್ಲಿ ಹರ್ಷ ತಂದಿದೆ.

ಹೋಬಳಿಯ ಸಿದ್ದಾಪುರ, ಬನ್ನೂರು, ಹೊಡೆನೂರು, ಕಾದನೂರು, ಮರಿಯನಗರ, ಕಡವಿನಹೊಸಹಳ್ಳಿ ಸೇರಿದಂತೆ ವಿವಿಧ ಭಾಗದಲ್ಲಿ ಬುಧವಾರ ಸಂಜೆ 5 ಗಂಟೆಗೆ 30 ನಿಮಿಷ ಉತ್ತಮ ಉತ್ತಮ ಮಳೆ ಸುರಿಯಿತು. ಹೊಗೆಸೊಪ್ಪು ಬೆಳೆಗಾರರಿಗೆ ಸಸಿಗಳನ್ನು ನಾಟಿ ಮಾಡಲು ಹದ ಮಾಡಿತು.

20 ದಿನಗಳಿಂದ ಹದ ಮಳೆ ಬೀಳದೇ ಹೊಗೆಸೊಪ್ಪು ಬೆಳೆಗಾರರು ಸಸಿ ನಾಟಿ ಮಾಡಲು ಮೀನಮೇಷ ಎಣಿಸುವಂತಾಗಿತ್ತು. ಹದ ಮಳೆಯ ಕೊರತೆಯಿಂದ ಅನೇಕ ದಿನಗಳಿಂದ ಹಿನ್ನಡೆ ಅನುಭವಿಸಿದ್ದ ಹೊಗೆಸೊಪ್ಪು ಬೆಳೆಗಾರರು ನಿರಾಳವಾಗಿದ್ದು, ಸಸಿ ನಾಟಿ ಮಾಡಲು ಹಾಗೂ ಈಗಾಗಲೇ ನಾಟಿ ಮಾಡಿರುವ ಗಿಡಗಳಿಗೆ ಗೊಬ್ಬರ ನೀಡುವ ಕಾಯಕದಲ್ಲಿ ತೊಡಗಿದ್ದಾರೆ.

ADVERTISEMENT
ಸಿದ್ಧಾಪುರದ ಬಳಿ ರಸ್ತೆ ಬದಿಯಲ್ಲಿ ಮಳೆಯ ನೀರು ನಿಂತಿರುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.