ADVERTISEMENT

ಶ್ರವಣಬೆಳಗೊಳ: ಪಾರಂಪರಿಕ ಗುರುಕುಲಕ್ಕೆ ಭೂಮಿ ಪೂಜೆ ನೆರವೇರಿಸಿದ ಸ್ವಾಮೀಜಿ

ಗುರುಕುಲ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2025, 4:51 IST
Last Updated 5 ಅಕ್ಟೋಬರ್ 2025, 4:51 IST
ಶ್ರವಣಬೆಳಗೊಳದ ಹೊರ ವಲಯದಲ್ಲಿರುವ ಧವಲತೀರ್ಥಂನ ಸಂಕೀರ್ಣದಲ್ಲಿ ಪಾರಂಪರಿಕ ಗುರುಕುಲ ನಿರ್ಮಾಣ ಕಾಮಗಾರಿಗೆ ಕ್ಷೇತ್ರದ ಪೀಠಾಧಿಪತಿಗಳಾದ ಸ್ವಸ್ತಿಶ್ರೀ ಅಭಿನವ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ನೆರವೇರಿಸಿದ ಸಂದರ್ಭದಲ್ಲಿ ದಾನಿಗಳಾದ ರಾಜಸ್ಥಾನದ ಕವೀಶ್ ಜೈನ್ ಕೃತಿ ಜೈನ್, ಕಿಯಾಂಶ್ ಜೈನ್ ಇತರರು ಪಾಲ್ಗೊಂಡಿದ್ದರು
ಶ್ರವಣಬೆಳಗೊಳದ ಹೊರ ವಲಯದಲ್ಲಿರುವ ಧವಲತೀರ್ಥಂನ ಸಂಕೀರ್ಣದಲ್ಲಿ ಪಾರಂಪರಿಕ ಗುರುಕುಲ ನಿರ್ಮಾಣ ಕಾಮಗಾರಿಗೆ ಕ್ಷೇತ್ರದ ಪೀಠಾಧಿಪತಿಗಳಾದ ಸ್ವಸ್ತಿಶ್ರೀ ಅಭಿನವ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ನೆರವೇರಿಸಿದ ಸಂದರ್ಭದಲ್ಲಿ ದಾನಿಗಳಾದ ರಾಜಸ್ಥಾನದ ಕವೀಶ್ ಜೈನ್ ಕೃತಿ ಜೈನ್, ಕಿಯಾಂಶ್ ಜೈನ್ ಇತರರು ಪಾಲ್ಗೊಂಡಿದ್ದರು   

ಶ್ರವಣಬೆಳಗೊಳ: ನಮ್ಮ ಸಂಸ್ಕೃತಿ, ಪರಂಪರೆ, ಸಿದ್ದಾಂತ, ಆಚಾರ-ವಿಚಾರಗಳು ಹಾಗೂ ಕೃಷಿ, ಧಾರ್ಮಿಕ ಪೂಜಾ ವಿಧಿ-ವಿಧಾನ, ಸಾಧುಗಳ ಸೇವೆ ಮಾಡುವುದರೊಂದಿಗೆ ಎಲ್ಲಾ ರೀತಿಯ ಭಾರತೀಯ ಶಿಕ್ಷಣವನ್ನು ನೀಡುವ ಉದ್ದೇಶದಿಂದ ಪಾರಂಪರಿಕ ಗುರುಕುಲವನ್ನು ಪ್ರಾರಂಭಿಸಲಾಗುತ್ತಿದೆ ಎಂದು ಶ್ರವಣಬೆಳಗೊಳ ಶ್ರೀ ದಿಗಂಬರ ಜೈನ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಸ್ವಾಮೀಜಿ ಹೇಳಿದರು.

ಶ್ರವಣಬೆಳಗೊಳ ಹೊರ ವಲಯದ ಶ್ರೀಧವಲತೀರ್ಥಂನಲ್ಲಿರುವ ಪ್ರಾಕೃತ ಅಧ್ಯಯನ ಮತ್ತು ಸಂಶೋಧನಾ ಸಂಸ್ಥೆ ಆವರಣದಲ್ಲಿ ನಿರ್ಮಾಣಗೊಳ್ಳುತ್ತಿರುವ ಗುರುಕುಲ ಕಟ್ಟಡ ಕಾಮಗಾರಿಗೆ ಗುರುವಾರ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ‘ಅಂದಾಜು ₹4.5 ಕೋಟಿ ವೆಚ್ಚದಲ್ಲಿ 26,000 ಚದರ ಅಡಿಯ 15 ಕೊಠಡಿಗಳ ಪುರಾತನ ಶೈಲಿಯ ಸಂಪೂರ್ಣ ಕಲ್ಲಿನಿಂದ ನಿರ್ಮಾಣ ಮಾಡುತ್ತಿರುವ ಪಾರಂಪರಿಕ ಕಟ್ಟಡವಾಗಿದೆ’ ಎಂದರು.

‘ಶ್ರೀಮಠದ ಪೀಠದಲ್ಲಿದ್ದ ಎಲ್ಲ ಸ್ವಾಮೀಜಿಗಳು ಜ್ಞಾನಕ್ಕೆ ಆದ್ಯತೆ ನೀಡುವುದರ ಜೊತೆಗೆ ಧಾರ್ಮಿಕ ಮತ್ತು ಲೌಕಿಕ ಶಿಕ್ಷಣ ಹಾಗೂ ಮಹಿಳಾ ಶಿಕ್ಷಣಕ್ಕೂ ಹೆಚ್ಚು ಪ್ರಾಶಸ್ತ್ಯ ನೀಡಿದ್ದರು. 150 ವರ್ಷಗಳ ಹಿಂದೆ ವಿದ್ಯಾರ್ಥಿಗಳು ಇಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು, ಅವರೆಲ್ಲರೂ ಮದ್ರಾಸ್ ಪ್ರಾಂತ್ಯದವರಾಗಿದ್ದರು ಎನ್ನುವ ದಾಖಲೆಗಳು ಸಿಗುತ್ತವೆ. 1928ರಲ್ಲಿ ಇಲ್ಲಿನ ಗುರುಗಳಾಗಿದ್ದ ನೇಮಿಸಾಗರವರ್ಣಿ ಚಾರುಕೀರ್ತಿ ಸ್ವಾಮಿಗಳು ಜೈನ ಸಂಸ್ಕೃತ ವೇದ ಮಹಾ ಪಾಠಶಾಲೆ ತೆರೆದಿದ್ದರು. ಅಲ್ಲದೇ ದೇಶದಾದ್ಯಂತ ಅನೇಕ ಗುರುಕುಲಗಳನ್ನು ತೆರೆದು ವಿದ್ಯಾಭ್ಯಾಸಕ್ಕೆ, ಮಹಿಳೆಯರ ಶಿಕ್ಷಣಕ್ಕೆ ಮಹತ್ವ ನೀಡಿದ್ದರು’ ಎಂದು ಸ್ಮರಿಸಿದರು.

ADVERTISEMENT

‘ನಮ್ಮ ಹಿಂದಿನ ಗುರುಗಳಾಗಿದ್ದ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಅವರು ‘ಗೊಮ್ಮಟೇಶ್ವರ ವಿದ್ಯಾಪೀಠ ಬ್ರಹ್ಮಚರ್ಯ ಆಶ್ರಮ’ ಹೆಸರಿನಲ್ಲಿ ಗುರುಕುಲ ತೆರೆದು, ತಾವು ಪೀಠಾಧ್ಯಕ್ಷರಾಗಿದ್ದ 54 ವರ್ಷಗಳ ಅವಧಿಯಲ್ಲಿ ಧಾರ್ಮಿಕ ಶಿಕ್ಷಣಕ್ಕೆ ಹೆಚ್ಚಿನ ಆಧ್ಯತೆ ನೀಡಿ ಸಾವಿರಾರು ಬಡ ವಿದ್ಯಾರ್ಥಿಗಳಿಗೆ ಶಿಕ್ಷಣ ಒದಗಿಸಿದ್ದರು. ಈ ಗುರುಕುಲದಲ್ಲಿ ಓದಿದ ವಿದ್ಯಾರ್ಥಿಗಳಲ್ಲಿ ಅನೇಕರು ಸಾಧು ಸಂತರಾಗಿದ್ದು, ರಾಜ್ಯದ ಹಲವು ಜೈನ ಮಠಗಳಿಗೆ ಪೀಠಾಧಿಪತಿಗಳಾಗಿದ್ದಾರೆ’ ಎಂದು ಹೇಳಿದರು.

‘ಈ ಗುರುಕುಲದಲ್ಲಿ ಪ್ರಸ್ತುತ 205 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, 2024ರಿಂದ ಕಾಳಲಾದೇವಿ ಕನ್ಯಾಶ್ರಮ ಗುರುಕುಲವನ್ನು ಮತ್ತೆ ಪುನರಾರಂಭಿಸಿ 35 ವಿದ್ಯಾರ್ಥಿನಿಯರಿಗೆ ಸಂಪೂರ್ಣವಾಗಿ ಉಚಿತ ಶಿಕ್ಷಣ ನೀಡಲಾಗುತ್ತಿದೆ. ವಿದ್ಯಾರ್ಥಿಗಳಿಗೆ ಬಟ್ಟೆ, ಸಮವಸ್ತ್ರ, ಪುಸ್ತಕ, ಊಟ-ಉಪಾಹಾರ ಸೇರಿದಂತೆ ಅವರ ಶಿಕ್ಷಣಕ್ಕೆ ಬೇಕಾದ ಎಲ್ಲ ವ್ಯವಸ್ಥೆಯನ್ನು ಉಚಿತವಾಗಿ ವ್ಯವಸ್ಥೆ ಮಾಡುವ ಮೂಲಕ ಧಾರ್ಮಿಕ ಹಾಗೂ ಲೌಕಿಕ ಶಿಕ್ಷಣವನ್ನು ನೀಡಲಾಗುತ್ತಿದೆ. ಜತೆಗೆ ಸಿಬಿಎಸ್‌ಇ ಮಾದರಿ ಶಿಕ್ಷಣವನ್ನು ಉಚಿತವಾಗಿ ನೀಡಬೇಕು ಎಂಬ ಉದ್ದೇಶದಿಂದ ಮುಂದಿನ 2030ರ ಮಹಾಮಸ್ತಕಾಬಿಷೇಕ ಮಹೋತ್ಸವದ ಒಳಗೆ 1008 ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡುವ ಮಹತ್ವಾಕಾಂಕ್ಷೆ ಇದೆ’ ಎಂದು ತಿಳಿಸಿದರು.

ದಾನಿಗಳಾದ ರಾಜಸ್ಥಾನದ ಕವೀಶ್ ಜೈನ್, ಕೃತಿ ಜೈನ್ ಹಾಗೂ ಕಿಯಾಂಶ್ ಜೈನ್ ಅವರಿಗೆ ಕ್ಷೇತ್ರದ ವತಿಯಿಂದ ಸನ್ಮಾನಿಸಲಾಯಿತು. ದಿಗಂಬರ ಜೈನ ಸಮಾಜದ ಅಧ್ಯಕ್ಷ ಜಿ.ಪಿ.ಪದ್ಮಕುಮಾರ್, ಮಠದ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಎಚ್.ಪಿ.ಅಶೋಕ್‌ಕುಮಾರ್, ಸದಸ್ಯರಾದ ಭರತೇಶ್, ಯಶಸ್, ಪೌದನ್ ಮುಂತಾದವರಿದ್ದರು. ಜಿನೇಶ್ ಶಾಸ್ತ್ರಿ ಹಾಗೂ ವಿಮಲ್ ಪಂಡಿತ್ ಪೂಜಾ ವಿಧಿ-ವಿಧಾನ ನೆರವೇರಿಸಿದರು.

ಶ್ರವಣಬೆಳಗೊಳದ ಹೊರ ವಲಯದಲ್ಲಿರುವ ಧವಲತೀರ್ಥಂನ ಸಂಕೀರ್ಣದಲ್ಲಿ ಪಾರಂಪರಿಕ ಗುರುಕುಲ ನಿರ್ಮಾಣ ಕಾಮಗಾರಿಗೆ ಕ್ಷೇತ್ರದ ಪೀಠಾಧಿಪತಿಗಳಾದ ಸ್ವಸ್ತಿಶ್ರೀ ಅಭಿನವ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ನೆರವೇರಿಸಿದ ಸಂದರ್ಭದಲ್ಲಿ ದಾನಿಗಳಾದ ರಾಜಸ್ಥಾನದ ಕವೀಶ್ ಜೈನ್ ಕೃತಿ ಜೈನ್ ಕಿಯಾಂಶ್ ಜೈನ್ ಇತರರು ಪಾಲ್ಗೊಂಡಿದ್ದರು
ಶ್ರವಣಬೆಳಗೊಳದ ಹೊರ ವಲಯದಲ್ಲಿರುವ ಧವಲತೀರ್ಥಂನ ಸಂಕೀರ್ಣದಲ್ಲಿ ಪಾರಂಪರಿಕ ಗುರುಕುಲ ನಿರ್ಮಾಣ ಕಾಮಗಾರಿಗೆ ಕ್ಷೇತ್ರದ ಪೀಠಾಧಿಪತಿಗಳಾದ ಸ್ವಸ್ತಿಶ್ರೀ ಅಭಿನವ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ನೆರವೇರಿಸಿದ ಸಂದರ್ಭದಲ್ಲಿ ದಾನಿಗಳಾದ ರಾಜಸ್ಥಾನದ ಕವೀಶ್ ಜೈನ್ ಕೃತಿ ಜೈನ್ ಕಿಯಾಂಶ್ ಜೈನ್ ಇತರರು ಪಾಲ್ಗೊಂಡಿದ್ದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.