ADVERTISEMENT

ಹಾಸನಾಂಬೆ ಬಾಗಿಲು ಬಂದ್‌

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2018, 12:58 IST
Last Updated 9 ನವೆಂಬರ್ 2018, 12:58 IST
ಹಾಸನಾಂಬೆ ದೇವಾಲಯದ ಬಾಗಿಲು ಮುಚ್ಚುವ ಮುನ್ನ ದೀಪ ಹಚ್ಚಿರುವುದು
ಹಾಸನಾಂಬೆ ದೇವಾಲಯದ ಬಾಗಿಲು ಮುಚ್ಚುವ ಮುನ್ನ ದೀಪ ಹಚ್ಚಿರುವುದು   

ಹಾಸನ: ವರ್ಷಕ್ಕೊಮ್ಮೆ ದರ್ಶನ ಭಾಗ್ಯ ನೀಡುವ ಅಧಿದೇವತೆ ಹಾಸನಾಂಬೆ ಗರ್ಭಗುಡಿ ಬಾಗಿಲನ್ನು ಧಾರ್ಮಿಕ ವಿಧಿ ವಿಧಾನಗಳ ಮೂಲಕ ಮುಚ್ಚಲಾಯಿತು.

ನ.1 ರಿಂದ 9ರವರೆಗೆ ದೇಗುಲದ ಬಾಗಿಲು ತೆರೆದು ದೇವಿ ದರ್ಶನ ಮಾಡಲು ಅನುವು ಮಾಡಿಕೊಡಲಾಗಿತ್ತು. ಬಲಿಪಾಡ್ಯಮಿ ಮಾರನೇ ದಿನವಾದ ಶುಕ್ರವಾರ ಮಧ್ಯಾಹ್ನ 1.18 ಕ್ಕೆ ದೇವಿ ಗರ್ಭ ಗುಡಿ ಮುಚ್ಚುತ್ತಿದ್ದಂತೆಯೇ ನೆರೆದಿದ್ದ ಭಕ್ತರು ಜಯಘೋಷ ಮೊಳಗಿಸಿದರು.

ಮುಂದಿನ ವರ್ಷ ಅ. 17 ರಿಂದ 29 ರ ವರೆಗೆ ಮತ್ತೆ ಹಾಸನಾಂಬೆ ಭಕ್ತರಿಗೆ ಗೋಚರಿಸಲಿದ್ದಾಳೆ. ಜಿಲ್ಲಾಡಳಿತ ಮಾಹಿತಿ ಪ್ರಕಾರ ಈ ವರ್ಷ ಅಂದಾಜು ಮೂರು ಲಕ್ಷ ಭಕ್ತರು ದೇವಿ ದರ್ಶನ ಪಡೆದರು.

ADVERTISEMENT

ಸಂಪ್ರದಾಯ ಪ್ರಕಾರ ದೇವಿ ಸನ್ನಿಧಿಯಲ್ಲಿ ಹೂವು, ನೈವೇದ್ಯ ಇಟ್ಟು ಹಣತೆ ಹಚ್ಚಲಾಯಿತು. ಮುಜರಾಯಿ ಇಲಾಖೆಯ ಬೀಗ ಹಾಕಿ ಸೀಲ್‌ ಒತ್ತಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.