ADVERTISEMENT

ಹೆಚ್.ಡಿ.ದೇವೇಗೌಡರು ರಾಜಕೀಯ ಚಾಣಕ್ಯ: ಕೆ.ಎಸ್.ಮಂಜೇಗೌಡ

​ಪ್ರಜಾವಾಣಿ ವಾರ್ತೆ
Published 19 ಮೇ 2025, 12:59 IST
Last Updated 19 ಮೇ 2025, 12:59 IST
ಆಲೂರಿನಲ್ಲಿ ಜೆಡಿಎಸ್ ತಾ. ಅಧ್ಯಕ್ಷ ಕೆ. ಎಸ್. ಮಂಜೇಗೌಡರ ನೇತೃತ್ವದಲ್ಲಿ ಹೆಚ್. ಡಿ. ದೇವೇಗೌಡರ 93ನೇ ಜನ್ಮದಿನ ಅಂಗವಾಗಿ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ಒಳ ರೋಗಿಗಳಿಗೆ ಹಣ್ಣು ಹಂಪಲು ವಿತರಿಸಿದರು.
ಆಲೂರಿನಲ್ಲಿ ಜೆಡಿಎಸ್ ತಾ. ಅಧ್ಯಕ್ಷ ಕೆ. ಎಸ್. ಮಂಜೇಗೌಡರ ನೇತೃತ್ವದಲ್ಲಿ ಹೆಚ್. ಡಿ. ದೇವೇಗೌಡರ 93ನೇ ಜನ್ಮದಿನ ಅಂಗವಾಗಿ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ಒಳ ರೋಗಿಗಳಿಗೆ ಹಣ್ಣು ಹಂಪಲು ವಿತರಿಸಿದರು.   

ಆಲೂರು: ‘ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ರಾಜಕೀಯ ಚಾಣಕ್ಯ’ ಎಂದು ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಕೆ.ಎಸ್.ಮಂಜೇಗೌಡ ಅಭಿಪ್ರಾಯಪಟ್ಟರು.

ಇಲ್ಲಿನ ಅಯ್ಯಪ್ಪಸ್ವಾಮಿ ದೇವಾಲಯದಲ್ಲಿ ಜನ್ಮದಿನದ ವಿಶೇಷ ಪೂಜೆ ಹಾಗೂ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ಒಳ ರೋಗಿಗಳಿಗೆ ಹಣ್ಣು ಹಂಪಲು ವಿತರಿಸಿ ಮಾತನಾಡಿದರು.

‘ಮುಂದಿನ ದಿನಗಳಲ್ಲಿ ಜೆಡಿಎಸ್ ವರಿಷ್ಠರ ನಾಯಕತ್ವ ಹಾಗೂ ಮಾರ್ಗದರ್ಶನದಲ್ಲಿ ರಾಜ್ಯ ಮತ್ತು ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷವನ್ನು ಬಲವಾಗಿ ಸಂಘಟಿಸಿ, ರಾಜ್ಯದಲ್ಲಿ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಸಂಕಲ್ಪ ಮಾಡಲಾಗಿದೆ. ದೇವೇಗೌಡರ  ಮಾರ್ಗದರ್ಶನದಲ್ಲಿ ರಾಜ್ಯ ಅಭಿವೃದ್ಧಿ ಕಾಣಲು ಸಾಧ್ಯವಾಗುವಂತಹ ಶಕ್ತಿಯನ್ನು ದೇವರು ಕರುಣಿಸಲಿ. ಜನಾಶೀರ್ವಾದದಿಂದ ರಾಜ್ಯ ಸುಭೀಕ್ಷದೆಡೆಗೆ ಸಾಗುವಂತಹ ದಿನಗಳು ಬರಲಿ ಎಂದು ಪ್ರಾರ್ಥಿಸಿದ್ದೇವೆ’ ಎಂದರು.

ADVERTISEMENT

ತಾಲ್ಲೂಕು ಮುಖಂಡರಾದ ನಟರಾಜ್ ನಾಕಲಗೊಡು, ಎಚ್. ಬಿ.ಧರ್ಮರಾಜು ಮಾತನಾಡಿದರು.

 ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡ ಸಿ.ವಿ.ಲಿಂಗರಾಜು, ರಾಜಪ್ಪಗೌಡ, ಗೇಕರವಳ್ಳಿ ಬಸವರಾಜು, ಹಾಸನ ಕೆಎಂಎಫ್ ನಿರ್ದೇಶಕ ಪಿ.ಎಲ್.ಲಿಂಗರಾಜು, ಹಾಸನ ಜಿಲ್ಲಾ ಯೂನಿಯನ್ ಬ್ಯಾಂಕ್ ಅಧ್ಯಕ್ಷ ಪ್ರಕಾಶ್, ಕೆ.ವಿ.ಮಲ್ಲಿಕಾರ್ಜುನ್, ಯೋಗೇಶ್, ಸುರೇಶ್ ಹುಣಸವಳ್ಳಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.