ಹಿರೀಸಾವೆ: ಇಲ್ಲಿನ ದೊಡ್ಡ ಕೆರೆಯಲ್ಲಿ ಭಾನುವಾರ ಕಾಲು ಜಾರಿ ನೀರಿಗೆ ಬಿದ್ದು ಬಾಲಕ ಅಭಿಷೇಕ್ (13) ಮೃತಪಟ್ಟಿದ್ದಾನೆ.
ಇಲ್ಲಿನ ಅಂಗಡಿಬೀದಿ ನಿವಾಸಿಗಳಾದ ಮಹದೇವ್ ಮತ್ತು ಜ್ಯೋತಿ ದಂಪತಿಯ ದ್ವಿತೀಯ ಪುತ್ರ. ಮಧ್ಯಾಹ್ನ ದನಗಳಿಗೆ ನೀರು ಕುಡಿಸುವಾಗ ಕಾಲು ಜಾರಿ ನೀರಿಗೆ ಬಿದ್ದು ಸಾವು ಸಂಭವಿಸಿದೆ ಎಂದು ತಂದೆ ಹಿರೀಸಾವೆ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.