ADVERTISEMENT

ಹಿರೀಸಾವೆ ಎಚ್‌ಪಿಬಿಎಸ್ ಶಾಲೆಯಲ್ಲಿ ಮಕ್ಕಳ ಸಂತೆ

​ಪ್ರಜಾವಾಣಿ ವಾರ್ತೆ
Published 11 ಜನವರಿ 2026, 3:24 IST
Last Updated 11 ಜನವರಿ 2026, 3:24 IST
ಹಿರೀಸಾವೆ ಎಚ್‌ಪಿಬಿಎಸ್ ಶಾಲೆಯಲ್ಲಿ ಶನಿವಾರ ನಡೆದ ಮಕ್ಕಳ ಸಂತೆಯಲ್ಲಿ ಪೋಷಕರ ಮಾರ್ಗದರ್ಶನದಲ್ಲಿ ಮಕ್ಕಳ ವ್ಯಾಪಾರ ಮಾಡಿದರು
ಹಿರೀಸಾವೆ ಎಚ್‌ಪಿಬಿಎಸ್ ಶಾಲೆಯಲ್ಲಿ ಶನಿವಾರ ನಡೆದ ಮಕ್ಕಳ ಸಂತೆಯಲ್ಲಿ ಪೋಷಕರ ಮಾರ್ಗದರ್ಶನದಲ್ಲಿ ಮಕ್ಕಳ ವ್ಯಾಪಾರ ಮಾಡಿದರು   

ಹಿರೀಸಾವೆ: ಮುಂದಿನ ದಿನಗಳಲ್ಲಿ ಶಿಕ್ಷಣ ಪಡೆದ ಎಲ್ಲರಿಗೂ ಉದ್ಯೋಗ ಸಿಗುವುದು ಕಷ್ಟ, ಜೀವನ ನಡೆಸಲು, ವ್ಯಾಪಾರ ಸೇರಿದಂತೆ ಇತರೆ ಉದ್ಯಮಗಳನ್ನು ಅವಲಿಂಬಿಸಬೇಕಿದೆ ಎಂದು ಎಸ್‌ಡಿಎಂಸಿ ಅಧ್ಯಕ್ಷ ಮಧು ಶನಿವಾರ ಹೇಳಿದರು.

ಇಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಏರ್ಪಡಿಸಿದ್ದ ಮಕ್ಕಳ ಸಂತೆಯ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಮಕ್ಕಳಲ್ಲಿ ಸಣ್ಣ ವಯಸ್ಸಿನಲ್ಲಿ ವ್ಯವಹಾರ ಜ್ಞಾನವನ್ನು ಬೆಳೆಸವ ಉದ್ದೇಶದಿಂದ ಶಾಲೆಯಲ್ಲಿ ಮಕ್ಕಳ ಸಂತೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ಮುಖಂಡ ರವಿಕುಮಾರ್ ಮಾತನಾಡಿ, ಎಷ್ಟೇ ಆದಾಯ ಬಂದರು ಲೆಕ್ಕಾಚಾರದ ಜೀವನ ನಡೆಸುವುದು ಬಹಳ ಮುಖ್ಯ ಎಂದರು. ಕನ್ನಡ ಸಾಹಿತ್ಯ ಪರಿಷತ್ ಹೋಬಳಿ ಘಟಕದ ಅಧ್ಯಕ್ಷ ಪ್ರಮೋದ್ ಮಾತನಾಡಿ, ಮೊದಲು ಸಂತೆಗೆ ಹೋಗುವಾಗ ಕೈ ಚೀಲವನ್ನು ತೆಗೆದುಕೊಂಡು ಹೋಗುತ್ತಿದ್ದೆವು, ಆದರೆ ಈಗ ಪ್ಲಾಸ್ಟಿಕ್ ಕವರ್, ಬ್ಯಾಗ್ ಬಳಕೆಯಾಗುತ್ತಿದ್ದೆ. ಇದಕ್ಕೆ ಕಡಿವಾಣ ಹಾಕಿ, ಕೈ ಚೀಲ ಬಳಕೆ ಮಾಡಿ ಎಂದರು.

ADVERTISEMENT

ಪಿಎಸಿಸಿಬಿ ಅಧ್ಯಕ್ಷ ಮಹೇಶ ತಮ್ಮ ಜನ್ಮದಿನಾಚರಣೆ ಪ್ರಯುಕ್ತ ಐದು ಗ್ರೀನ್ ಬೋರ್ಡ್‌ಗಳನ್ನು ಶಾಲೆಗೆ ಕೊಡುಗೆಯಾಗಿ ನೀಡಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷ ಪರಮೇಶ್, ಮುಖಂಡ ವೆಂಕಟೇಶ್, ಶಾಲೆಯ ಶಿಕ್ಷಕ ಹಿರಿಯಣ್ಣಗೌಡ ಮಾತನಾಡಿದರು. ಶಾಲೆಯ ಮಕ್ಕಳು ಪೋಷಕರ ಮಾರ್ಗದರ್ಶನದಲ್ಲಿ ತರಕಾರಿ, ತಿಂಡಿ, ಗೃಹಬಳಕೆಯ ಪರಿಕರಗಳುನ್ನು ವ್ಯಾಪಾರ ಮಾಡಿದರು, ಶಿಕ್ಷಕರು ಮಕ್ಕಳ ಸಂತೆಯ ನೇತೃತ್ವ ವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.