ADVERTISEMENT

ಜೆಡಿಎಸ್‌ ಅಧ್ಯಕ್ಷ ಸ್ಥಾನ ಬಿಟ್ಟು ಕೊಡಲು ಎಚ್‌.ಕೆ.ಕುಮಾರಸ್ವಾಮಿ ನಿರ್ಧಾರ

ಸಿ.ಎಂ.ಇಬ್ರಾಹಿಂಗಾಗಿ ಪದ ತ್ಯಾಗ ಮಾಡಿದ ರಾಜ್ಯ ಘಟಕದ ಅಧ್ಯಕ್ಷ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2022, 3:47 IST
Last Updated 16 ಏಪ್ರಿಲ್ 2022, 3:47 IST
ಎಚ್.ಕೆ.ಕುಮಾರಸ್ವಾಮಿ
ಎಚ್.ಕೆ.ಕುಮಾರಸ್ವಾಮಿ   

ಹಾಸನ: ಕಾಂಗ್ರೆಸ್‌ ತ್ಯಜಿಸಿ ಜೆಡಿಎಸ್ ಸೇರಿರುವ ಸಿ.ಎಂ.ಇಬ್ರಾಹಿಂ ಅವರಿಗಾಗಿರಾಜ್ಯ ಘಟಕದ ಅಧ್ಯಕ್ಷ ಸ್ಥಾನ ಬಿಟ್ಟು ಕೊಡಲು ಆಲೂರು–ಸಕಲೇಶಪುರಕ್ಷೇತ್ರದ ಶಾಸಕ ಎಚ್‌.ಕೆ.ಕುಮಾರಸ್ವಾಮಿ ನಿರ್ಧರಿಸಿದ್ದಾರೆ.

ಹಳ್ಳಿ ಹಕ್ಕಿ ಎಚ್‌.ವಿಶ್ವನಾಥ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದನಂತರ ಪಕ್ಷ ನಿಷ್ಠೆ, ಹಿರಿತನ ಹಾಗೂ ಎಲ್ಲರನ್ನೂ ಸಂಭಾಳಿಸಿಕೊಂಡು ಹೋಗುವಮೃದು ವ್ಯಕ್ತಿತ್ವದ ಕುಮಾರಸ್ವಾಮಿ ಅವರಿಗೆ 2019ರಲ್ಲಿ ಜೆಡಿಎಸ್‌ ಸಾರಥ್ಯ ವಹಿಸಲಾಗಿತ್ತು.

ಪಕ್ಷ ಸಂಘಟನೆ ದೃಷ್ಟಿಯಿಂದ ವರಿಷ್ಠರು ತೆಗೆದುಕೊಂಡಿರುವ ನಿರ್ಧಾರಕ್ಕೆಸಮ್ಮತಿ ಸೂಚಿಸಿರುವ ಕುಮಾರಸ್ವಾಮಿಗೆ ಸಂಸದೀಯ ಮಂಡಳಿ ಅಧ್ಯಕ್ಷ ಸ್ಥಾನನೀಡಲಾಗುತ್ತಿದೆ.

ADVERTISEMENT

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಬಿ ಟೀಂ ಎಂಬ ಕಾಂಗ್ರೆಸ್‌ಆರೋಪದಿಂದ ಜೆಡಿಎಸ್‌ ಅಲ್ಪಸಂಖ್ಯಾತ ವರ್ಗದ ಮತಗಳನ್ನು ಕಳೆದುಕೊಂಡಿತ್ತು. ಅದನ್ನು ಮರಳಿ ಪಡೆಯುವ ಹಿನ್ನೆಲೆಯಲ್ಲಿ ಇಬ್ರಾಹಿಂ ಅವರನ್ನು ಪಕ್ಷಕ್ಕೆ ಸೆಳೆದು, ಅಧ್ಯಕ್ಷ ಗಾದಿ ನೀಡುವ ಮೂಲಕ ಅಲ್ಪಸಂಖ್ಯಾತವರ್ಗದ ಮತಗಳನ್ನು ಪಡೆಯುವ ವಿಶ್ವಾಸದಲ್ಲಿ ಜೆಡಿಎಸ್‌ ವರಿಷ್ಠರಿದ್ದಾರೆ.

ಮತ್ತೊಂದೆಡೆ ಕುಟುಂಬ ರಾಜಕಾರಣ ಎಂಬ ಆರೋಪದಿಂದ ಮುಕ್ತವಾಗಲುಕಸರತ್ತು ನಡೆಸುತ್ತಿರುವ ಜೆಡಿಎಸ್‌, ಈ ಬಾರಿ ಅಲ್ಪಸಂಖ್ಯಾತ ನಾಯಕಇಬ್ರಾಹಿಂಗೆ ಪಕ್ಷದ ಸಾರಥ್ಯ ನೀಡುತ್ತಿದೆ. ಇದರಿಂದ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಪಕ್ಷಕ್ಕೆ ಅನುಕೂಲವಾಗಬಹುದು ಎಂಬ ಲೆಕ್ಕಾಚಾರ ಪಕ್ಷದನಾಯಕರದ್ದು.

ಕಾಂಗ್ರೆಸ್ ತೊರೆದು ಜೆಡಿಎಸ್‌ ಬಂದಾಗಲೇ ಇಬ್ರಾಹಿಂಗೆ ಪಕ್ಷದ ಅಧ್ಯಕ್ಷ ಗಾದಿನೀಡಲಾಗುತ್ತದೆ ಎಂಬ ಚರ್ಚೆಯೂ ನಡೆದಿತ್ತು.ಇಬ್ರಾಹಿಂ ಭಾಷಣ ಆಲಿಸಲು ಕಾಯ್ದು ಕೂರುವ ಜನರಿದ್ದಾರೆ. ಹಿಂದಿ, ಕನ್ನಡದಲ್ಲಿನಿರರ್ಗಳವಾಗಿ ಮಾತನಾಡುತ್ತಾರೆ. ಅವರು ತಮ್ಮದೇ ಮತ ಬ್ಯಾಂಕ್ಹೊಂದಿದ್ದಾರೆ.

ಪಕ್ಷದ ವರಿಷ್ಠ ಎಚ್‌.ಡಿ.ದೇವೇಗೌಡರಂತೆಯೇ ಎಚ್‌.ಕೆ.ಕುಮಾರಸ್ವಾಮಿ ಅವರೂ ಆರುಬಾರಿ ಶಾಸಕರಾಗಿರುವುದು ವಿಶೇಷ. ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಆಗಿದ್ದಾಗ ಮೊದಲ ಬಾರಿಗೆ ಸಚಿವರಾಗಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಖಾತೆ ನಿರ್ವಹಿಸಿದ್ದರು.

ಕಾಂಗ್ರೆಸ್‌– ಜೆಡಿಎಸ್‌ ಸಮ್ಮಿಶ್ರಸರ್ಕಾರದಲ್ಲಿ ಅವರು ಮಂತ್ರಿಯಾಗಲಿದ್ದಾರೆಎಂದೇ ಹೇಳಲಾಗಿತ್ತು. ಆದರೆ, ಅದೃಷ್ಟ ಒದಗಿ ಬರಲಿಲ್ಲ. ಕೊನೆಗೆ ಪಕ್ಷದ ರಾಜ್ಯಘಟಕದ ಅಧ್ಯಕ್ಷ ಹುದ್ದೆ ನೀಡುವ ಮೂಲಕ ಪರಿಶಿಷ್ಟ ಸಮುದಾಯವನ್ನು ಕಡೆಗಣಿಸಿಲ್ಲ ಎಂಬ ಸಂದೇಶವನ್ನು ಪಕ್ಷ ಸಾರಿತ್ತು.

ಅಧ್ಯಕ್ಷ ಸ್ಥಾನವೂ ಅವರಿಗೆ ಬಯಸದೆ ಬಂದ ಭಾಗ್ಯ ಕೂಡ. ನಂತರ ನಡೆದಹಲವು ಉಪಚುನಾವಣೆಯಲ್ಲಿ ಅಷ್ಟಾಗಿ ಪ್ರಭಾವ ಬೀರಲಿಲ್ಲ. ಮುಂದಿನಚುನಾವಣೆ ಗಮನದಲ್ಲಿರಿಸಿಕೊಂಡು ಮತ್ತೊಬ್ಬರಿಗೆ ಅಧಿಕಾರ ಬಿಟ್ಟು ಕೊಡುವ ಅನಿವಾರ್ಯತೆ ಬಂದಿದೆ.

ಈಗ ಅಲ್ಪಸಂಖ್ಯಾತ ನಾಯಕನಿಗೆ ಪಟ್ಟ ಕಟ್ಟುವ ಮೂಲಕ ದಲಿತ ಮತ್ತುಅಲ್ಪಸಂಖ್ಯಾತ ಮತಗಳ ಮೇಲೆ ಜೆಡಿಎಸ್‌ ಕಣ್ಣಿಟ್ಟಿದೆ. ಉಳಿದಂತೆ ಒಕ್ಕಲಿಗಮತ್ತು ಇತರೆ ಸಮುದಾಯಗಳ ಮತಗಳನ್ನು ಸೆಳೆಯವಲ್ಲಿ ಸಫಲವಾದರೆ ಮುಂದಿನ ಚುನಾವಣೆಯಲ್ಲಿ ಅಧಿಕಾರಕ್ಕೆ ಬರಬಹುದು ಎಂಬುದು ದಳಪತಿಗಳಲೆಕ್ಕಾಚಾರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.