ADVERTISEMENT

ವಿಖನಸಾಚಾರ್ಯರ 52ನೇ ಜಯಂತ್ಯುತ್ಸವ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2019, 10:05 IST
Last Updated 12 ಅಕ್ಟೋಬರ್ 2019, 10:05 IST
ಹೊಳೆನರಸೀಪುರ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯದ ಆವರಣದಲ್ಲಿರುವ ವಿಖನಸಾಚಾರ್ಯರ ಮೂರ್ತಿ
ಹೊಳೆನರಸೀಪುರ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯದ ಆವರಣದಲ್ಲಿರುವ ವಿಖನಸಾಚಾರ್ಯರ ಮೂರ್ತಿ   

ಹೊಳೆನರಸೀಪುರ: ಪಟ್ಟಣದ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯದ ಆವರಣದಲ್ಲಿರುವ ವಿಖನಸಾಚಾರ್ಯರ 52 ನೇ ಜಯಂತ್ಯೋತ್ಸವವನ್ನು ಅಕ್ಟೋಬರ್‌ 13 ರಂದು ಆಚರಿಸಲಾಗುತ್ತಿದೆ.

ಜಯಂತ್ಯೋತ್ಸವದ ಅಂಗವಾಗಿ ದೇವಾಲಯದಲ್ಲಿ ಶನಿವಾರದಿಂದಲೇ ಪೂಜಾ ವಿಧಿ ವಿಧಾನಗಳು ಪ್ರಾರಂಭವಾಗಿದ್ದು ಈದಿನ ದೇವಾಲಯದ ಲಕ್ಷ್ಮೀನರಸಿಂಹ ಸ್ವಾಮಿ, ನಾರಾಯಣಸ್ವಾಮಿ, ವೇಣುಗೋಪಾಲ ಸ್ವಾಮಿ, ವಿಖನಸಾಚಾರ್ಯರಿಗೆ
ಪಂಚಾಮೃತಾಭಿಷೇಖ ಮಾಡಿ ಪೂಜಿಸಿದ್ದಾರೆ.

ಭಾನುವಾರ ಬೆಳಿಗ್ಗೆಯಿಂದ ವಿಖನಸಾಚಾರ್ಯರಿಗೆ ಹಾಗೂ ದೇವಾಲಯದ ಆವರಣದಲ್ಲಿರುವ ಎಲ್ಲ ದೇವರುಗಳಿಗೆ ವಿಶೇಷ ಪೂಜಾ ವಿಧಿ ವಿಧಾನಗಳು ನಡೆಯಲಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ದೇವರ ಕೃಪೆಗೆ ಪಾತ್ರರಾಗಬೇಕೆಂದು ಲಕ್ಷ್ಮೀನರಸಿಂಹಸ್ವಾಮಿ ದೇವಾಲಯದ ಅರ್ಚಕರಾದ ನಾಣಿ ಮತ್ತು ರಾಮು ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.