ADVERTISEMENT

ಅಸ್ಪೃಶ್ಯತೆ ಆಚರಣೆ: ಹೋಟೆಲ್‌ ಬಂದ್‌

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2021, 22:18 IST
Last Updated 22 ಸೆಪ್ಟೆಂಬರ್ 2021, 22:18 IST

ಚನ್ನರಾಯಪಟ್ಟಣ: ಅಸ್ಪೃಶ್ಯತೆ ಆಚರಿಸಿದ ದೂರಿನ ಮೇರೆಗೆ ತಾಲ್ಲೂಕಿನ ದಿಂಡಗೂರು ಗ್ರಾಮದ ಹೋಟೆಲ್‌ ಅನ್ನು ಮುಚ್ಚುವಂತೆ ತಹಶೀಲ್ದಾರ್‌ ಸೂಚಿಸಿದ್ದಾರೆ. ‌

ಮುಜರಾಯಿ ಇಲಾಖೆಗೆ ಸೇರಿದ ಚನ್ನಕೇಶವ ದೇವಾಲಯ ಮತ್ತು ಹೋಟೆಲ್‌ಗೆ ಪರಿಶಿಷ್ಟ ಜಾತಿಯವರಿಗೆ ಪ್ರವೇಶ ನಿರಾಕರಿಸಲಾಗಿದೆ ಎಂದು ಪರಿಶಿಷ್ಟ ಸಮುದಾಯದ ಡಿ.ಡಿ.ಸಂತೋಷ್‌ ಅವರು ತಹಶೀಲ್ದಾರ್ ಮತ್ತು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ದೂರು ನೀಡಿದ್ದರು.

ಸೋಮವಾರ ತಾಲ್ಲೂಕು ಆಡಳಿತ ಗ್ರಾಮದಲ್ಲಿ ಏರ್ಪಡಿಸಿದ್ದ ಸೌಹಾರ್ದ ಸಭೆಗೆ, ಅಸ್ಪೃಶ್ಯತೆ ಆಚರಿಸಿದ ಜಾತಿಯ ಮುಖಂಡರು ಹಾಜರಾಗದೇ ಇದ್ದುದರಿಂದ ಸಭೆಯನ್ನು ಮುಂದೂ
ಡಲಾಗಿದೆ’ ಎಂದು ಗ್ರಾಮದ ನಿವಾಸಿ ಡಿ.ಸಿ ಸಂತೋಷ್‌ ಹೇಳಿದರು.

ADVERTISEMENT

‘ಹೋಟೆಲ್‍ಗೆ ಭೇಟಿ ನೀಡಿ ಪರಿಶೀಲಿಸಲಾಗಿದ್ದು, ಅಸ್ಪೃಶ್ಯತೆ ಆಚರಣೆ ಮಾಡುತ್ತಿದ್ದ ಕಾರಣ ಹೋಟೆಲ್ ಮುಚ್ಚಿಸಲಾಗುವುದು’ ಎಂದು ತಹಶೀಲ್ದಾರ್ ಜೆ.ಬಿ.ಮಾರುತಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.