ADVERTISEMENT

ಹಿರೀಸಾವೆ | ನಿವೃತ್ತ ಯೋಧರು, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2025, 5:41 IST
Last Updated 16 ಆಗಸ್ಟ್ 2025, 5:41 IST
ಹಿರೀಸಾವೆಯಲ್ಲಿ ನಡೆದ ಸ್ವಾತಂತ್ರ್ಯೋತ್ಸವದಲ್ಲಿ ಶಿಕ್ಷಕ ದೇವರಾಜು, ಉಪನ್ಯಾಸಕ ಪಾಪಶೇಟ್ಟಿ ಮತ್ತು ನಿವೃತ್ತ ಯೋಧರಾದ ಬಸವರಾಜು, ಸುರೇಶ್, ಸಂತೋಷ ಅವರನ್ನು ಸನ್ಮಾನಿಸಲಾಯಿತು 
ಹಿರೀಸಾವೆಯಲ್ಲಿ ನಡೆದ ಸ್ವಾತಂತ್ರ್ಯೋತ್ಸವದಲ್ಲಿ ಶಿಕ್ಷಕ ದೇವರಾಜು, ಉಪನ್ಯಾಸಕ ಪಾಪಶೇಟ್ಟಿ ಮತ್ತು ನಿವೃತ್ತ ಯೋಧರಾದ ಬಸವರಾಜು, ಸುರೇಶ್, ಸಂತೋಷ ಅವರನ್ನು ಸನ್ಮಾನಿಸಲಾಯಿತು    

ಹಿರೀಸಾವೆ: ಪಟ್ಟಣದ ಸರ್ಕಾರಿ ಬಾಲಿಕಾ ಪ್ರೌಢಶಾಲಾ ಆವರಣದಲ್ಲಿ ಶುಕ್ರವಾರ ಏರ್ಪಡಿಸಿದ್ದ 79ನೇ ಸ್ವಾತಂತ್ರ್ಯೋತ್ಸವದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜಯಮ್ಮ ಬೋರಯ್ಯ ಧ್ವಜಾರೋಹಣ ಮಾಡಿದರು. ಗಣ್ಯರು ಪಥಸಂಚಲನ ತಂಡಗಳ ಗೌರವ ವಂದನೆಯನ್ನು ಸ್ವೀಕರಿಸಿದರು.

ನಿವೃತ್ತ ಡಿಪಿಇ ನಿಂಬೆಹಳ್ಳಿ ಚಂದ್ರೇಗೌಡ ಮಾತನಾಡಿ, ಸ್ವಾತಂತ್ರ್ಯ ಅಮೂಲ್ಯವಾದದ್ದು, ಅದನ್ನು ದುರುಪಯೋಗ ಮಾಡಿಕೊಳ್ಳದೆ, ದೇಶದ ಒಳಿತಿಗಾಗಿ ಎಲ್ಲರೂ ತಮ್ಮ, ತಮ್ಮ ಕರ್ತವ್ಯಗಳನ್ನು ಮಾಡಬೇಕು ಎಂದರು.

ಎನ್ಎಚ್ಆರ್‌ಐ ಸಮಿತಿಯಿಂದ ನಿವೃತ್ತ ಯೋಧರಾದ ಬಸವರಾಜು, ಸುರೇಶ್, ಸಂತೋಷ್ ಮತ್ತು ಗ್ರಾಮ ಪಂಚಾಯಿತಿಯಿಂದ ಶಿಕ್ಷಕ ದೇವರಾಜು, ಉಪನ್ಯಾಸಕ ಪಾಪಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಪಥಸಂಚಲನ ತಂಡಗಳಿಗೆ ಯೋಧ ದಿ. ಹೇಮಾರಾಜ್‌ ದತ್ತು ನಿಧಿಯಿಂದ ಬಹುಮಾನ ನೀಡಲಾಯಿತು. ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಶಿಕ್ಷಕ ದಿ.ಎಚ್.ಎನ್. ಶ್ರೀನಿವಾಸ್ ಸ್ಮರಣಾರ್ಥವಾಗಿ ಕಾರ್ತೀಕ್ ಶಾಲೆ ಅಧ್ಯಕ್ಷ ಅನಂತಕೃಷ್ಣ ನಗದು ಬಹುಮಾನ ನೀಡಿದರು. ಕಸಾಪ ಅಧ್ಯಕ್ಷ ಪ್ರಮೋದ್ ಮತ್ತು ಪಿಎಸಿಸಿಬಿ ನಿರ್ದೇಶಕ ಬೋರೇಗೌಡರವರುಗಳು ‌ಪ್ರತಿಭಾವಂತ ಮಕ್ಕಳನ್ನು ಅಭಿನಂದಿಸಿದರು.

ADVERTISEMENT

ಎಸ್ಎನ್ಎಚ್‌ಸಿಎಸ್ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಲೋಕೇಶ್ ಅಧ್ಯಕ್ಷತೆ ವಹಿಸಿದ್ದರು. ಪಿಡಿಒ ಸತೀಶ್, ಗ್ರಾಮ ಪಂಚಾಯಿತಿ ಸದಸ್ಯರಾದ ಮಾರುತಿ ಮಂಜುನಾಥ್, ಭಾರತಿ ಕುಮಾರ್, ರಾಶಿಗೌಡ, ಶಾರುಖ್, ಅಭಿಲಾಷ್, ಮಂಜುನಾಥ್ ಮೌರ್ಯ, ಮಧು, ಮುಖ್ಯ ಶಿಕ್ಷಕ ರಾಮೇಗೌಡ ಸೇರಿದಂತೆ ವಿವಿಧ ಶಾಲೆಗಳ ಮುಖ್ಯ ಶಿಕ್ಷಕರು, ವಿವಿಧ ಸಂಘಸಂಸ್ಥೆಗಳ ಪಧಾಧಿಕಾರಿಗಳು ವೇದಿಕೆಯಲ್ಲಿದ್ದರು. ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.