ADVERTISEMENT

ಕೆಲ್ಲೆಂಗೆರೆ ಸಮೀಪ ಶಿಲಾಶಾಸನ ಪತ್ತೆ

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2021, 3:46 IST
Last Updated 30 ಮಾರ್ಚ್ 2021, 3:46 IST
ಅರಸೀಕೆರೆ ನಗರ ಹೊರವಲಯದ ಬಂಡಿಹಳ್ಳಿ ಗೇಟ್ ಸಮೀಪ ಕಾಲೇಜು ಕಟ್ಟಡ ಕಾಮಗಾರಿ ನಡೆಯುವಾಗ ದೊರೆತ ಶಿಲಾಶಾಸನ
ಅರಸೀಕೆರೆ ನಗರ ಹೊರವಲಯದ ಬಂಡಿಹಳ್ಳಿ ಗೇಟ್ ಸಮೀಪ ಕಾಲೇಜು ಕಟ್ಟಡ ಕಾಮಗಾರಿ ನಡೆಯುವಾಗ ದೊರೆತ ಶಿಲಾಶಾಸನ   

ಅರಸೀಕೆರೆ: ನಗರ ಹೊರವಲಯದ ಬಂಡಿಹಳ್ಳಿ ಗೇಟ್ ಹಾಗೂ ಕೆಲ್ಲೆಂಗೆರೆ ಗ್ರಾಮದ ಸಮೀಪ ಭಾನುವಾರ ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ಕಟ್ಟಡ ನಿರ್ಮಾಣ ಕಾಮಗಾರಿ ವೇಳೆ ಶಿಲಾಶಾಸನ ಪತ್ತೆಯಾಗಿದೆ.

ಜೆಸಿಬಿ ಯಂತ್ರದ ಮೂಲಕ ಕೆಲಸ ಮಾಡುವ ಸಂದರ್ಭದಲ್ಲಿ ಐತಿಹಾಸಿಕ ಶಾಸನ ದೊರೆತಿದೆ. ಪುರಾತತ್ವ ಇಲಾಖೆಯ ಅಧಿಕಾರಿಗಳು ಸೋಮವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

‘ಮೇಲ್ನೋಟಕ್ಕೆ ಇದು ಜೈನ ಧರ್ಮಕ್ಕೆ ಸೇರಿದ ಶಾಸನ ಇರಬಹುದು. ಮತ್ತೊಂದು ತಂಡ ಬಂದು ಪರಿಶೀಲಿಸಿ ಖಚಿತ ಮಾಹಿತಿ ನೀಡಲಿದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.