ಹೊಳೆನರಸೀಪುರ: ‘ಇಲ್ಲಿನ ಅಂಚೆ ಕಚೇರಿಯಲ್ಲಿ ಸಾರ್ವಜನಿಕರಿಗೆ ಉನ್ನತ ಹಾಗೂ ತ್ವರಿತ ಸೇವೆ ನೀಡಲು ಅಂಚೆ ಇಲಾಖೆಯ ತಾಂತ್ರಿಕ ಎಂಜಿನಿಯರ್‌ಗಳ ತಂಡ ತಂತ್ರಾಂಶ ‘ಐ.ಟಿ 2.0’ ಅನ್ನು ಅಭಿವೃದ್ಧಿಪಡಿಸಿದ್ದು, ಇದರಿಂದಾಗಿ ಜನರಿಗೆ ಅತ್ಯುತ್ತಮ, ತ್ವರಿತ ಹಾಗೂ ಸುರಕ್ಷತೆಯ ಸೇವೆ ನೀಡಲು ಸಹಕಾರಿಯಾಗುತ್ತದೆ’ ಎಂದು ಅಂಚೆಪಾಲಕ ಆನಂದ್ ತಿಳಿಸಿದರು.
ಪಟ್ಟಣದ ಅಂಚೆ ಕಚೇರಿಯಲ್ಲಿ ಸೋಮವಾರ ಈ ಹೊಸ ತಂತ್ರಾಂಶಕ್ಕೆ ಚಾಲನೆ ನೀಡಿ ಮಾತನಾಡಿ, ‘ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಅತ್ಯುತ್ತಮ ಸೇವೆಯ ಸ್ಪರ್ಧೆ ನೀಡಲು ಅಂಚೆ ಇಲಾಖೆ ಕೂಡ ಸಿದ್ಧವಾಗಿದೆ’ ಎಂದರು.
ವಿಭಾಗೀಯ ಅಂಚೆ ಕಚೇರಿಯ ಉಪ ನಿರೀಕ್ಷಕ ಮಹೇಶ್ ಮಾತನಾಡಿ, ‘ರಾಜ್ಯದಲ್ಲಿ ಪ್ರಥಮವಾಗಿ ಹಾಸನ ಜಿಲ್ಲೆಯ 36 ವಿಭಾಗೀಯ ಅಂಚೆ ಕಚೇರಿಗಳಲ್ಲಿ ಈ ಹೊಸ ತಂತ್ರಾಂಶ ಅಳವಡಿಸಕೊಳ್ಳಲಾಗಿದೆ. ಇದರಿಂದ ಇಲಾಖೆಗೆ ಕೋಟಿ ಕೋಟಿ ಹಣ ಉಳಿತಾಯದ ಜೊತೆಗೆ ಸಾರ್ವಕನಿಕರಿಗೆ ಇನ್ನೂ ಅತ್ಯುತ್ತಮ ಸೇವೆಗಳು ತ್ವರಿತವಾಗಿ, ಸುರಕ್ಷಿತವಾಗಿ ದೊರೆಯಲು ಸಹಕಾರಿ ಆಗುತ್ತದೆ’ ಎಂದರು.
ಅಂಚೆ ಇಲಾಖೆಯ ಸಿಬ್ಬಂದಿ ಕಲ್ಪನಾ, ಸುಮಾ, ಸತೀಶ್, ಶಿವು, ಗೌತಮ್, ಅಂಚೆ ಇಲಾಖೆಯ ಆರ್.ಡಿ. ಪ್ರತಿನಿಧಿಗಳು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.