ADVERTISEMENT

ಅರಕಲಗೂಡು: ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತ ಬಲೆಗೆ ಬಿದ್ದ ಜೆಇ

​ಪ್ರಜಾವಾಣಿ ವಾರ್ತೆ
Published 14 ಜನವರಿ 2026, 7:34 IST
Last Updated 14 ಜನವರಿ 2026, 7:34 IST
<div class="paragraphs"><p>ಲೋಕಾಯುಕ್ತ </p></div>

ಲೋಕಾಯುಕ್ತ

   

ಪ್ರಜಾವಾಣಿ ಚಿತ್ರ

ಹಾಸನ: ಅರಕಲಗೂಡು ತಾಲ್ಲೂಕಿನ ಬಸವಾಪಟ್ಟಣ ವಿದ್ಯುತ್ ವಿಭಾಗದ ಜ್ಯೂನಿಯರ್ ಎಂಜಿನಿಯರ್ ಶ್ರೀಧರ್, ಲಂಚ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ.

ADVERTISEMENT

ವಿದ್ಯುತ್ ಟ್ರಾನ್ಸ್‌ಫಾರ್ಮರ್ ಬದಲಾವಣೆ ಮಾಡಿಕೊಡುವುದಾಗಿ ಹೇಳಿ, ಬೆಟ್ಟಸೋಗೆ ಗ್ರಾಮದ ಬಿ.ಪಿ. ಗಿರೀಶ್ ಅವರಿಂದ ಒಟ್ಟು ₹6ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಜ.9 ರಂದು ಮೊದಲ ಕಂತಾಗಿ ₹3,500 ಅನ್ನು ಫೋನ್‌ಪೇ ಮೂಲಕ ಪಡೆದಿದ್ದರು.

ಉಳಿದ ₹2,500 ಅನ್ನು ಮಂಗಳವಾರ ಫೋನ್‌ಪೇ ಮೂಲಕ ಪಡೆಯುವ ಸಂದರ್ಭದಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದು, ಶ್ರೀಧರ್ ಅವರನ್ನು ವಶಕ್ಕೆ ಪಡೆದಿದ್ದಾರೆ. ಮೊಬೈಲ್ ಫೋನ್‌ ವಶಪಡಿಸಿಕೊಂಡು ವಿಚಾರಣೆ ನಡೆಸಲಾಗುತ್ತಿದೆ.

ಲೋಕಾಯುಕ್ತ ಇನ್ಸ್‌ಪೆಕ್ಟರ್‌ಗಳಾದ ಶಿಲ್ಪಾ ಹಾಗೂ ಚಂದ್ರಶೇಖರ್ ಅವರ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ.