ADVERTISEMENT

ಹಾಸನ: ಆರೋಪಿಗಳಿಂದ ವಶಪಡಿಸಿಕೊಂಡಿದ್ದ ಸ್ವತ್ತನ್ನು ವಾರಸುದಾರರಿಗೆ ಹಸ್ತಾಂತರ

ಆರೋಪಿಗಳಿಂದ ₹ 2.8 ಕೋಟಿ ಮೌಲ್ಯದ ಚಿನ್ನಾಭರಣ, ಬೆಳ್ಳಿ ವಸ್ತು ವಶ

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2021, 15:35 IST
Last Updated 27 ನವೆಂಬರ್ 2021, 15:35 IST
ಹಾಸನದ ಡಿಎಆರ್ ಸಮುದಾಯ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ದಕ್ಷಿಣ ವಲಯ ಐಜಿಪಿಪ್ರವೀಣ್ ಮಧುಕರ್ ಪವಾರ್ ಅವರು ಕಳವು ಮಾಲುಗಳನ್ನು ವಾರಸುದಾರರಿಗೆಹಿಂದಿರುಗಿಸಿದರು. ಎಸ್‌ಪಿ ಶ್ರೀನಿವಾಸ್ ಗೌಡ, ಎಎಸ್‌ಪಿ ಬಿ.ಎನ್‌.ನಂದಿನಿ ಇದ್ದಾರೆ.
ಹಾಸನದ ಡಿಎಆರ್ ಸಮುದಾಯ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ದಕ್ಷಿಣ ವಲಯ ಐಜಿಪಿಪ್ರವೀಣ್ ಮಧುಕರ್ ಪವಾರ್ ಅವರು ಕಳವು ಮಾಲುಗಳನ್ನು ವಾರಸುದಾರರಿಗೆಹಿಂದಿರುಗಿಸಿದರು. ಎಸ್‌ಪಿ ಶ್ರೀನಿವಾಸ್ ಗೌಡ, ಎಎಸ್‌ಪಿ ಬಿ.ಎನ್‌.ನಂದಿನಿ ಇದ್ದಾರೆ.   

ಹಾಸನ: ಜಿಲ್ಲೆಯ ವಿವಿಧ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ 2020–21ನೇ ಸಾಲಿನಲ್ಲಿ ನಡೆದಿದ್ದ ಅಪರಾಧ ಪ್ರಕರಣಗಳಲ್ಲಿ ಆರೋಪಿಗಳಿಂದ ವಶಪಡಿಸಿಕೊಂಡಿದ್ದ ₹2,80,40,611 ಮೌಲ್ಯದ ವಸ್ತುಗಳನ್ನು ವಾರಸುದಾರರಿಗೆ ಹಸ್ತಾಂತರಿಸಲಾಯಿತು.

ನಗರದ ಡಿಎಆರ್ ಸಮುದಾಯ ಭವನದಲ್ಲಿ ಶನಿವಾರ ನಡೆದ ಪ್ರಾಪರ್ಟಿ ರಿಟರ್ನ್‌ ಪರೇಡ್‌ಕಾರ್ಯಕ್ರಮದಲ್ಲಿ ದಕ್ಷಿಣ ವಲಯ ಐಜಿಪಿ ಪ್ರವೀಣ್‌ ಮಧುಕರ್‌ ಪವಾರ್‌, ಪೊಲೀಸ್‌ ವರಿಷ್ಠಾಧಿಕಾರಿ ಆರ್.ಶ್ರೀನಿವಾಸ್‌ ಗೌಡ, ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಬಿ.ಎನ್.ನಂದಿನಿ ಅವರುವಾರಸುದಾರರಿಗೆ ಚಿನ್ನಾಭರಣ, ನಗದು, ವಾಹನ ಹಾಗೂ ಬೆಳೆ ಬಾಳುವ ವಸ್ತುಗಳನ್ನುಹಿಂತಿರುಗಿಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಆರ್.ಶ್ರೀನಿವಾಸ್‌ ಗೌಡ, ‘ಜಿಲ್ಲೆಯ ವಿವಿಧ ಪೊಲೀಸ್ ಠಾಣೆವ್ಯಾಪ್ತಿಯಲ್ಲಿ 2020–21ನೇ ಸಾಲಿನಲ್ಲಿ 298 ದರೋಡೆ, ಸುಲಿಗೆ, ಮನೆ ಕಳ್ಳತನಪ್ರಕರಣ ಭೇದಿಸಿ, 108 ಆರೋಪಿಗಳನ್ನು ಬಂಧಿಸಿ, ₹ 5.50 ಕೋಟಿ ಮೌಲ್ಯದ ವಸ್ತುಗಳನ್ನುವಶಪಡಿಸಿಕೊಳ್ಳಲಾಗಿದೆ. ಈ ಪೈಕಿ ಕೋರ್ಟ್‌ ಆದೇಶ ಪ್ರಕಾರ 71 ಪ್ರಕರಣಗಳಲ್ಲಿ ₹ 2.80ಕೋಟಿ ಸ್ವತ್ತನ್ನು ವಾರಸುದಾರರಿಗೆ ವಸ್ತುಗಳನ್ನು ಹಸ್ತಾಂತರಿಸಲಾಗುವುದು’ ಎಂದರು.

ADVERTISEMENT

ಪ್ರವೀಣ್‌ ಮಧುಕರ್‌ ಪವಾರ್ ಮಾತನಾಡಿ, ‘ಜನರಿಗೆ ಪೊಲೀಸರ ಮೇಲೆ ಹೆಚ್ಚು ವಿಶ್ವಾಸಬರುವಂತೆ ಕಾರ್ಯ ನಿರ್ವಹಿಸಬೇಕು. ಕಡಿಮೆ ಅವಧಿಯಲ್ಲಿ ಕೋಟ್ಯಂತರ ಮೌಲ್ಯದ ಕಳ್ಳತನಮಾಲು ವಶಕ್ಕೆ ಪಡೆದಿರುವುದು ಹೆಮ್ಮೆಯ ವಿಷಯವಾಗಿದೆ. ಜಿಪಿಎಸ್‌ ಆಧಾರಿತ ಪೊಲೀಸ್‌ ಇಬೀಟ್‌ ವ್ಯವಸ್ಥೆ ಜಾರಿಯಲ್ಲಿದೆ. ಸಿಬ್ಬಂದಿ ಸರಿಯಾಗಿ ಸ್ಥಳಕ್ಕೆ ಭೇಟಿ ನೀಡಿದ್ದಾರೋ ಇಲ್ಲವೋಎಂಬುದನ್ನು ಹಿರಿಯ ಅಧಿಕಾರಿಗಳು ಕುಳಿತ ಸ್ಥಳದಿಂದಲೇ ಆ್ಯಪ್‌ ಮೂಲಕ ಪರಿಶೀಲಿಸಬಹುದು.ಇದರಿಂದ ಇಲಾಖೆಯ ಕಾರ್ಯವೈಖರಿ ಮತ್ತಷ್ಟು ಪರಿಣಾಮಕಾರಿಯಾಗಿ ಜಾರಿಯಾಗಲಿದೆ’ ಎಂದು
ತಿಳಿಸಿದರು.

‘ಸಾರ್ವಜನಿಕರ ಸುರಕ್ಷತೆ ದೃಷ್ಟಿಯಿಂದ ಜನನಿಬಿಡ ಪ್ರದೇಶ, ಮನೆ, ಗೋದಾಮು, ಅಂಗಡಿಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸುವುದು ಕಡ್ಡಾಯ. ₹ 3–4 ಸಾವಿರ ಸಿಸಿಟಿವಿ ಕ್ಯಾಮೆರಾಸಿಗಲಿದೆ. ಮಾಲೀಕರ ರಕ್ಷಣೆ ಜತೆಗೆ ಯಾವುದೇ ಘಟನೆ ನಡೆದರೂ ಆರೋಪಿಗಳನ್ನು ಪತ್ತೆ ಮಾಡಿ ತನಿಖೆ ನಡೆಸಲು ಪೊಲೀಸರಿಗೂ ಸುಲಭವಾಗಲಿದೆ’ ಎಂದು ಹೇಳಿದರು.

ಅಪರಾಧ ಪ್ರಕರಣಗಳಲ್ಲಿ ಜೈಲಿಗೆ ಹೋಗಿ ಬಂದವರು, ಜಾಮೀನಿನ ಮೇಲೆ ಬಿಡುಗಡೆಗೊಂಡವರುಮತ್ತೆ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗುತ್ತಿದ್ದಾರೆ. ಅಂತರವರ ಮೇಲೆ ನಿರಂತರವಾಗಿ ನಿಗಾ ಇಡಬೇಕು ಎಂದು ಪೊಲೀಸರಿಗೆ ಸೂಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.